ಬೆಂಗಳೂರು: ರಾಜಾಜಿನಗರದ ಶಿಕ್ಷಣ ಸಂಸ್ಥೆ ವಿದ್ಯಾವರ್ಧಕ ಸಂಘದ (ಸರ್ದಾರ್ ಪಟೇಲ್ ಶಾಲೆ) ನಿವೃತ್ತ ಪ್ರಾಂಶುಪಾಲ ಪಿ.ಜಿ. ದ್ವಾರಕನಾಥ್ (85) ಶುಕ್ರವಾರ ನಿಧನರಾದರು.
ಇಟ್ಟಮಡು ನಿವಾಸಿಯಾಗಿರುವ ಅವರು ಶಿಕ್ಷಕರಾಗಿ, ಪ್ರಾಂಶುಪಾಲರಾಗಿ, ಕಾರ್ಯದರ್ಶಿಯಾಗಿ, ಗೌರವ ಅಧ್ಯಕ್ಷರಾಗಿ ವಿದ್ಯಾವರ್ಧಕ ಸಂಘದಲ್ಲಿ ಆರು ದಶಕ ಕೆಲಸ ಮಾಡಿದ್ದರು. ಉತ್ತಮ ಶಿಕ್ಷಕ ರಾಷ್ಟ್ರಪ್ರಶಸ್ತಿ, ಕೆಂಪೇಗೌಡ ಪ್ರಶಸ್ತಿ ಸಹಿತ ಅನೇಕ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.
ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ಮೃತರ ಅಂತ್ಯಕ್ರಿಯೆ ಕೆಂಗೇರಿ ಉಪನಗರದ ರುದ್ರಭೂಮಿಯಲ್ಲಿ ಶನಿವಾರ ನಡೆಯಿತು ಎಂದು ಕುಟುಂಬದವರು ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.