ADVERTISEMENT

ವಿಜ್ಞಾನಿ ಯು.ಆರ್‌. ರಾವ್‌ ಮನೆಯಲ್ಲಿ ಕಳ್ಳತನಕ್ಕೆ ಯತ್ನ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2018, 19:44 IST
Last Updated 26 ಡಿಸೆಂಬರ್ 2018, 19:44 IST
ಯು.ಆರ್. ರಾವ್
ಯು.ಆರ್. ರಾವ್   

ಬೆಂಗಳೂರು: ಇಸ್ರೊ ಮಾಜಿ ಅಧ್ಯಕ್ಷ ದಿವಂಗತ ಯು.ಆರ್‌.ರಾವ್ ಅವರ ಕುಟುಂಬದವರು ಜೀವನ್‌ಬಿಮಾ ನಗರದ 13ನೇ ಮುಖ್ಯ ರಸ್ತೆ ಬಳಿ ಹೊಂದಿರುವ ಮನೆಯಲ್ಲಿ ಕಳವು ಯತ್ನ ನಡೆದಿದೆ.

ಯು.ಆರ್‌.ರಾವ್‌ ನಿಧನದ ನಂತರ ಅವರ ಪುತ್ರ ಮದನ್‌ ಬೇರೆ ಕಡೆ ವಾಸವಿದ್ದರು. ಒಂದು ವರ್ಷದಿಂದ ಅವರ ಕಾರಿನ ಚಾಲಕ ಮನೆಯ ಆವರಣದ ಶೆಡ್‌ನಲ್ಲಿ ವಾಸವಿದ್ದರು.

ಕಳ್ಳರು ಹಿಂಬದಿಯ ಬಾಗಿಲು ಮುರಿದು ಮಂಗಳವಾರ ರಾತ್ರಿ ಮನೆಯ ಒಳ ನುಗ್ಗಿದ್ದರು. ಬಾಗಿಲು ಮುರಿದಿರುವುದನ್ನು ಬುಧವಾರ ಮುಂಜಾನೆ ಗಮನಿಸಿದ ಚಾಲಕ, ಮದನ್‌ ಅವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದರು.

ADVERTISEMENT

ಮದನ್‌ ಮನೆಗೆ ಬಂದು ಪರಿಶೀಲಿಸಿದಾಗ ಬೆಲೆ ಬಾಳುವ ವಸ್ತುಗಳು ಜೋಪಾನವಾಗಿದ್ದವು. ಕಳವು ಕೃತ್ಯದ ಬಗ್ಗೆ ಅವರು ಜೀವನ್‌ಬಿಮಾ ನಗರದ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.