ADVERTISEMENT

Live| ಆರ್‌.ಆರ್‌ ನಗರ ಕ್ಷೇತ್ರ ಉಪ ಚುನಾವಣೆ: ಮುನಿರತ್ನಗೆ 57,936 ಮತಗಳ ಭರ್ಜರಿ ಗೆಲುವು

ಶಾಸಕ ಮುನಿರತ್ನ ರಾಜೀನಾಮೆಯಿಂದ ತೆರವಾಗಿದ್ದ ಆರ್‌.ಆರ್‌. ನಗರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ಪೂರ್ಣಗೊಂಡಿದೆ. ಬಿಜೆಪಿಯ ಮುನಿರತ್ನ ಭರ್ಜರಿ ಗೆಲುವು ಸಾಧಿಸಿದ್ದಾರೆ. ಪ್ರತಿ ಸುತ್ತಿನ ಮತ ಎಣಿಕೆಯ ಸಂಪೂರ್ಣ ವಿವರ ಇಲ್ಲಿ ಲಭ್ಯವಿದೆ.

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 11:39 IST
Last Updated 10 ನವೆಂಬರ್ 2020, 11:39 IST

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಚುನಾವಣೆಯ ಸಂಪೂರ್ಣ ಮಾಹಿತಿ

57,936 ಮತಗಳ ಅಂತರದಿಂದ ಮುನಿರತ್ನ ಗೆಲುವು

ಕೊನೆಯ/25ನೇ ಸುತ್ತು

ಮುನಿರತ್ನ (ಬಿಜೆಪಿ)-1,25,734
ಕುಸುಮಾ (ಕಾಂಗ್ರೆಸ್‌)-67,798
ಕೃಷ್ಣಮೂರ್ತಿ (ಜೆಡಿಎಸ್‌)-10,251
ನೋಟಾ- 2,494

57,936 ಮತಗಳಿಂದ ಗೆದ್ದ ಮುನಿರತ್ನ 

ADVERTISEMENT

ಬಿಜೆಪಿ ಕಾರ್ಯಕರ್ತರ ಸಣಂಭ

24ನೇ ಸುತ್ತಿನ ಮತ ಎಣಿಕೆ ವಿವರ

ಮುನಿರತ್ನ (ಬಿಜೆಪಿ)-1,24,446
ಕುಸುಮಾ (ಕಾಂಗ್ರೆಸ್‌)-67,405
ಕೃಷ್ಣಮೂರ್ತಿ (ಜೆಡಿಎಸ್)-10,187
ನೋಟಾ- 2471

ಮುನಿರತ್ನ ಅಂತರ- 57,041

23ನೇ ಸುತ್ತಿನ ವಿವರ

ಮುನಿರತ್ನ (ಬಿಜೆಪಿ) 1,18,981
ಕುಸುಮಾ (ಕಾಂಗ್ರೆಸ್‌) - 65,501
ಕೃಷ್ಣಮೂರ್ತಿ (ಜೆಡಿಎಸ್) - 9,957
ನೋಟಾ- 2341

ಮುನಿರತ್ನ ಅಂತರ- 53,480

ಇನ್ನು ಎರಡು ಸುತ್ತುಗಳ ಮತ ಎಣಿಕೆ ಮಾಹಿತಿಯನ್ನು ಚುನಾವಣಾ ಆಯೋಗ ಅಧಿಕೃತವಾಗಿ ಪ್ರಕಟಿಸಬೇಕಿದೆ.

ಕ್ಷೇತ್ರದ ಅಭಿವೃದ್ಧಿ ನನ್ನ ಗುರಿ– ಮುನಿರತ್ನ

‘ನನ್ನ ಮೇಲೆ ನಂಬಿಕೆ ಇಟ್ಟು ಮತ ನೀಡಿದ ಮತದಾರರಿಗೆ ನನ್ನ ಧನ್ಯವಾದಗಳು. ಚಾಮುಂಡೇಶ್ವರಿ ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ. ನನ್ನ ಕ್ಷೇತ್ರವನ್ನು ಅಭಿವೃದ್ಧಿ ಮಾಡುತ್ತೇನೆ’ ಎಂದು ಆರ್‌.ಆರ್‌. ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಹೇಳಿದರು.

ಕ್ಷೇತ್ರದಲ್ಲಿ ಗೆಲುವು ಖಚಿತವಾಗುತ್ತಿದ್ದಂತೆ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮೊದಲ ಚುನಾವಣೆಯಲ್ಲಿ 17 ಸಾವಿರ ಮತಗಳಿಂದ, ಎರಡನೇ ಚುನಾವಣೆಯಲ್ಲಿ 26 ಸಾವಿರ ಮತಗಳಿಂದ ಗೆಲುವು ಸಾಧಿಸಿದ್ದೆ. ಈ ಬಾರಿ 57 ಸಾವಿರಕ್ಕೂ ಹೆಚ್ಚು ಮತಗಳಿಂದ ಗೆಲುವು ಸಾಧಿಸಿದ್ದೇನೆ’ ಎಂದರು.

‘ನನ ಗೆಲುವಿಗೆ ಎಲ್ಲರೂ ಕಾರಣ. ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌, ಸಚಿವರು, ಶಾಸಕರಿಗೆ ನನ್ನ ಗೆಲುವುನ್ನು ಅರ್ಪಿಸುತ್ತೇನೆ’ ಎಂದರು.

‘ನನ್ನ ವಿರೋಧಿ ಅಭ್ಯರ್ಥಿ (ಕಾಂಗ್ರೆಸ್‌ನ ಕುಸುಮಾ) ನಿಜ ಮಾತನಾಡಬೇಕು. ಕೊನೆ ಕ್ಷಣದಲ್ಲಿ ನಾನು ಆಡದ ಮಾತನ್ನು ಆಡಿದ್ದೇನೆ ಎಂದು ಹೇಳಿ ಅಪಪ್ರಚಾರ ಮಾಡಿದರು. ಆದರೆ, ನಾನು ಎಂದೂ ಹೆಣ್ಣು ಮಕ್ಕಳು ವಿರುದ್ದ ಮಾತನಾಡಲಿಲ್ಲ’ ಎಂದರು.

21, 22ನೇ ಸುತ್ತಿನ ಮಾಹಿತಿ

21ನೇ ಸುತ್ತಿನ ಮತ ಎಣಿಕೆ ವಿವರ 

ಮುನಿರತ್ನ- 1,07,822
ಕುಸುಮಾ- 61,095
ಕೃಷ್ಣಮೂರ್ತಿ- 9502
ನೋಟಾ- 1,979

ಮುನಿರತ್ನ ಅಂತರ - 46,727

***

22ನೇ ಸುತ್ತಿನ ವಿವರ 

ಮುನಿರತ್ನ- 1,13,156
ಕುಸುಮಾ- 63,553
ಕೃಷ್ಣಮೂರ್ತಿ- 9,764
ನೋಟಾ- 1,165

ಮುನಿರತ್ನ ಅವರ ಮುನ್ನಡೆ - 49,603

ಪ್ರಜಾವಾಣಿ ವಿಶ್ಲೇಷಣೆ

ಮುನಿರತ್ನ ಹ್ಯಾಟ್ರಿಕ್‌ ಗೆಲುವು ಖಚಿತ: ಘೋಷಣೆಯಷ್ಟೇ ಬಾಕಿ

ಬೆಂಗಳೂರು: ಆರ್‌.ಆರ್‌. ನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ‘ಕೈ’ ಕೊಟ್ಟು ಬಿಜೆಪಿಯಿಂದ ಕಣಕ್ಕಿಳಿದ ಮುನಿರತ್ನ ಅವರು ತಮ್ಮ ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಕುಸುಮಾ ಅವರಿಗಿಂತ ಭಾರಿ ಅಂತರದ ಮುನ್ನಡೆ ಸಾಧಿಸಿದ್ದು, ಹ್ಯಾಟ್ರಿಕ್‌ ಗೆಲವು ಸಾಧಿಸುವುದು ಖಚಿತಗೊಂಡಿದೆ.

ಮುನಿರತ್ನ ಅವರ ಅಂತರ 44 ಸಾವಿರ ದಾಟಿದೆ. ಇನ್ನು 5 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ. ಆದರೆ, ಅವರು ಸಾಧಿಸಿರುವ ಮುನ್ನಡೆಯನ್ನು ಇನ್ನಿರುವ ಸುತ್ತುಗಳಲ್ಲಿ ಕುಸುಮಾ ಅವರಿಗೆ ಮೀರಿ ನಿಲ್ಲಲು ಸಾಧ್ಯ ಇಲ್ಲ. ಹೀಗಾಗಿ, ಎಲ್ಲ ಸುತ್ತುಗಳ ಮತ ಎಣಿಕೆ ಪೂರ್ಣಗೊಂಡು, ಬಹುಮತದ ಅಂತರವಷ್ಟೆ ನಿರ್ಧಾರ ಆಗಬೇಕಿದೆ. ಬಳಿಕ ಚುನಾವಣಾ ಅಯೋಗ ಮುನಿರತ್ನ ಅವರ ಗೆಲುವನ್ನು ಅಧಿಕೃತವಾಗಿ ಘೋಷಿಸಲಿದೆ.

ಬಿಜೆಪಿ ಮತ್ತು ಕಾಂಗ್ರೆಸ್‌ನ ಅಬ್ಬರದ ಪ್ರಚಾರ, ಆರೋಪ– ಪ್ರತ್ಯಾರೋಪ, ಜಾತಿ– ಕಣ್ಣೀರ ರಾಜಕಾರಣದ ಕಾರಣದಿಂದ ಆರ್‌.ಆರ್‌. ನಗರದ ಚುನಾವಣೆ ಭಾರಿ ಕುತೂಹಲ ಮೂಡಿಸಿತ್ತು. ಅಲ್ಲದೆ, ಎರಡೂ ಪಕ್ಷಗಳ ಮಧ್ಯೆ ಜಿದ್ದಾಜಿದ್ದಿನ ಪೈಪೋಟಿ ನಡೆಯಬಹುದು ಎಂದೇ ನಿರೀಕ್ಷಿಸಲಾಗಿತ್ತು.

ಆದರೆ, ಮತದಾರ ಬಿಜೆಪಿ ‘ಕೈ’ ಹಿಡಿದಿರುವುದು ಸ್ಪಷ್ಟವಾಗಿದೆ. ಬಿಜೆಪಿ ನಾಯಕರ ನಿರೀಕ್ಷೆಗೂ ಮೀರಿ ಮತದಾರರರು ಮುನಿರತ್ನ ಅವರನ್ನು ಬೆಂಬಲಿಸಿದ್ದಾರೆ.

ಚುನಾವಣಾ ಆಯೋಗದ ಪ್ರಕಾರ 20 ಸುತ್ತುಗಳ ಮತ ಎಣಿಕೆ ಪೂರ್ಣಗೊಂಡಿದ್ದು, ಮುನಿರತ್ನ ಅವರು 1,03,139 ಮತಗಳನ್ನು ಪಡೆದಿದ್ದಾರೆ. ಮುಸುಮಾ ಅವರು 58,528 ಮತಗಳನ್ನು ಪಡೆದರೆ, ಜೆಡಿಎಸ್‌ನ ಕೃಷ್ಣಮೂರ್ತಿ ಅವರು 8,794 ಮತ ಪಡೆಯಲು ಮಾತ್ರ ಶಕ್ತರಾಗಿದ್ದಾರೆ. ಮುನಿರತ್ನ ಅವರು 44,611 ಮತಗಳ ಅಂತರದಿಂದ ಮುಂದಿದ್ದಾರೆ. ಇನ್ನ 5 ಸುತ್ತುಗಳ ಮತ ಎಣಿಕೆ ಮಾತ್ರ ಬಾಕಿ ಇದೆ.

ಪ್ರಜಾವಾಣಿ ವಿಶ್ಲೇಷಣೆ

18ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ 92864 ಮತ

18ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-92864

ಕಾಂಗ್ರೆಸ್‌ನ ಕುಸುಮಾ-52504

ಜೆಡಿಎಸ್‌ನ ಕೃಷ್ಣಮೂರ್ತಿ-7178

ಮುನಿರತ್ನ ಅವರ ಮುನ್ನಡೆ-40,360.

ಇನ್ನೂ 7 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ದೇಶದಲ್ಲಿ ಪರಿವರ್ತನೆಯ ಗಾಳಿ: ನಳಿನ್

ಮಂಗಳೂರು: ದೇಶದಲ್ಲಿ ಪರಿವರ್ತನೆಯ ಗಾಳಿಯನ್ನು ಕಾಣಬಹುದು. ಎಲ್ಲೆಡೆ ನಿರೀಕ್ಷೆ ಮೀರಿ ಬಿಜೆಪಿಗೆ ಜಯ ಲಭಿಸಿದೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು. 

ನಗರದಲ್ಲಿ ಮಂಗಳವಾರ ವಿಜಯೋತ್ಸವ ಆಚರಿಸಿ ಅವರು ಮಾತನಾಡಿದರು.

ಎಲ್ಲೆಡೆ ಬಿಜೆಪಿ ಸಾಮೂಹಿಕ ನಾಯಕತ್ವ ಕ್ಕೆ ಜಯ ಸಿಗುತ್ತಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಬಿ.ಎಸ್.

ಯಡಿಯೂರಪ್ಪ ನಾಯಕತ್ವ ಹಾಗೂ ದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಅಭಿವೃದ್ಧಿ ಮಂತ್ರಕ್ಕೆ ಜನ ಆಶೀರ್ವಾದ ಮಾಡಿದ್ದಾರೆ.
ವಿಪಕ್ಷಗಳು ಟೀಕೆ ಮಾಡಿದರೂ, ಜನರ ಒಲವು ಬಿಜೆಪಿಯತ್ತ ಇದೆ ಎಂದರು.

ಶಿರಾದಲ್ಲಿ ಪಂಚಪಾಂಡವರು ಹಾಗೂ ರಾಜರಾಜೇಶ್ವರಿ ನಗರದಲ್ಲಿ ಅಶೋಕ್ ಹಾಗೂ ಲಿಂಬಾವಳಿ ಅವರು ಜೋಡೆತ್ತು ರೀತಿಯಲ್ಲಿ ದುಡಿದು ಪಕ್ಷವನ್ನು ಗೆಲ್ಲಿಸಿದ್ದಾರೆ. ಜನ ಕಾಂಗ್ರೆಸ್ ತಿರಸ್ಕರಿಸಿದ್ದಾರೆ. ಬಂಡೆ, ಹುಲಿಯಾ ಎಲ್ಲವನ್ನೂ ಜನರು ತಿರಸ್ಕರಿಸಿದ್ದು, ಅವರು ಎಲ್ಲೆಲ್ಲಿ ಇದ್ದಾರೆ ಎಂದು ಹುಡುಕಬಹುದು ಎಂದು ಟೀಕಿಸಿದರು.

17ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-88,196

17ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-88,196

ಕಾಂಗ್ರೆಸ್‌ನ ಕುಸುಮಾ-49,908

ಜೆಡಿಎಸ್‌ನ ಕೃಷ್ಣಮೂರ್ತಿ-6,952

ಮುನಿರತ್ನ ಮುನ್ನಡೆ– 38,288

ಇನ್ನೂ 8 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

16ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನಗೆ 83,047 ಮತ

16ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-83,047

ಕಾಂಗ್ರೆಸ್‌ನ ಕುಸುಮಾ-46,851

ಜೆಡಿಎಸ್‌ನ ಕೃಷ್ಣಮೂರ್ತಿ-6,381

ಮುನಿರತ್ನ ಮುನ್ನಡೆ–36,196.

ಇನ್ನೂ 9 ಸುತ್ತುಗಳ ಮತ ಎಣಿಕೆ ಬಾಕಿ ಇದೆ

ಹ್ಯಾಟ್ರಿಕ್‌ ಗೆಲುವಿನತ್ತ ಮುನಿರತ್ನ

ಬೆಂಗಳೂರು: ಒಟ್ಟು 25 ಸುತ್ತುಗಳಲ್ಲಿ ನಡೆಯಲಿರುವ ಆರ್‌.ಆರ್‌. ನಗರ ಕ್ಷೇತ್ರದ ಮತಗಳ ಎಣಿಕೆ ಪ್ರಗತಿಯಲ್ಲಿದ್ದು, 15ನೇ ಸುತ್ತಿನ ‌ಅಂತ್ಯಕ್ಕೆ ಬಿಜೆಪಿಯ ಮುನಿರತ್ನ ಅವರು 35,526 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಆ ಮೂಲಕ, ಅವರು ಹ್ಯಾಟ್ರಿಕ್‌ ಗೆಲುವಿನ ಕಡೆಗೆ ಮುನ್ನುಗ್ಗಿದ್ದಾರೆ.

ಕಾಂಗ್ರೆಸ್‌ನ ಕುಸುಮಾ ಅವರಿಗೆ 43,116 ಮತಗಳು ಬಂದರೆ, ಜೆಡಿಎಸ್‌ನ ಕೃಷ್ಣಮೂರ್ತಿ ಕೇವಲ 5638 ಮತಗಳನ್ನು ಮಾತ್ರ ಗಳಿಸಿದ್ದಾರೆ.

ಈವರೆಗೆ ಎಲ್ಲ ಸುತ್ತುಗಳಲ್ಲೂ ಮುನಿರತ್ನ ಅವರು ಮುನ್ನಡೆ ಸಾಧಿಸುತ್ತಲೇ. ಯಾವ ಸುತ್ತಿನಲ್ಲೂ ಕುಸುಮಾ ಪೈಪೋಟಿ ನೀಡಿಲ್ಲ. ಇನ್ನು ಕೇವಲ 10 ಸುತ್ತುಗಳ ಎಣಿಕೆ ಮಾತ್ರ ಬಾಕಿ ಉಳಿದಿದೆ.

ಮತ ಎಣಿಕೆ ಕೇಂದ್ರದಲ್ಲಿ ಬಿಜೆಪಿ ಕಾರ್ಯಕರ್ತರ ಸಂಭ್ರಮ ಮುಗಿಲು ಮಟ್ಟಿದೆ. ಮುನಿರತ್ನ ಪರ ಘೋಷಣೆ ಕೂಗುತ್ತಿದ್ದಾರೆ.

15 ಸುತ್ತು ಪೂರ್ಣ: ಮುನಿರತ್ನಗೆ 35,526 ಮತಗಳ ಮುನ್ನಡೆ

15ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನಗೆ 78642 ಮತ 

ಕಾಂಗ್ರೆಸ್‌ನ ಕುಸುಮಾ 43116 ಮತ 

ಜೆಡಿಎಸ್‌ನ ಕೃಷ್ಣಮೂರ್ತಿ 5638 ಮತ.

ಮುನಿರತ್ನ ಮುನ್ನಡೆ–  35,526.

ಇನ್ನೂ 10 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

14ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನಗೆ 73,932 ಮತ

14ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-73,932

ಕಾಂಗ್ರೆಸ್‌ನ ಕುಸುಮಾ-39,415

ಜೆಡಿಎಸ್‌ನ ಕೃಷ್ಣಮೂರ್ತಿ-4660

ಮುನಿರತ್ನ ಅವರ ಮುನ್ನಡೆ– 34,415.

ಇನ್ನೂ 11 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

33,185 ಮತಗಳ ಮುನ್ನಡೆ ಸಾಧಿಸಿದಿ ಮುನಿರತ್ನ

13ನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ-69,484 

ಕಾಂಗ್ರೆಸ್‌ನ ಕುಸುಮಾ-36,299

ಜೆಡಿಎಸ್‌ನ ಕೃಷ್ಣಮೂರ್ತಿ3,906 ಮತಗಳನ್ನು ಪಡೆದಿದ್ದಾರೆ.

ಮುನಿರತ್ನ ಅವರ ಮುನ್ನಡೆ– 33,185

ಇನ್ನೂ 12 ಸುತ್ತುಗಳ ಮತ ಎಣಿಕೆ ಬಾಕಿ ಇದೆ.

ಭಾರಿ ಮುನ್ನಡೆಯತ್ತ ಮುನಿರತ್ನ

12ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಮುನಿರತ್ನ ಅವರು 64,703 ಮತಗಳನ್ನು ಪಡೆದಿದ್ದಾರೆ. 

ಸಮೀಪದ ಸ್ಪರ್ಧಿ ಕಾಂಗ್ರೆಸ್‌ನ ಕುಸುಮಾ 33,527 ಮತಗಳನ್ನು ಪಡೆದಿದ್ದಾರೆ.

ಜೆಡಿಎಸ್‌ನ ಕೃಷ್ಣ ಮೂರ್ತಿ3336 ಮತ ಗಳಿಸಿದ್ದಾರೆ.

ಮತದಾರರ ತೀರ್ಪಿಗೆ ತಲೆಬಾಗಲೇ ಬೇಕು: ಡಿಕೆಶಿ

ಬೆಂಗಳೂರು: ಮತದಾರರು ನೀಡಿದ ತೀರ್ಪಿಗೆ ಎಲ್ಲರೂ ತಲೆ ಬಾಗಲೇಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಉಪ ಚುನಾವಣೆಯ ನಡೆದ ಆರ್‌.ಆರ್‌. ನಗರ ಮತ್ತು ಶಿರಾ ಈ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಹಿನ್ನಡೆಯಲ್ಲಿದೆ. ಈ ಮಧ್ಯೆ, ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ಮತ ಎಣಿಕೆ ಮುಗಿಯಲು ಇನ್ನೂ ಒಂದೂವರೆಗೆ ಗಂಟೆ ಇದೆ. ಫಲಿತಾಂಶದಲ್ಲಿ ಏನು ಬೇಕಾದರೂ ಆಗುವುದು. ನೋಡೋಣ’ ಎಂದರು.

11ನೇ ಸುತ್ತಿನಲ್ಲೂ ಬಿಜೆಪಿಗೆ ಭಾರಿ ಮುನ್ನಡೆ

ಆರ್‌.ಆರ್‌. ನಗರದಲ್ಲಿ 11ನೇ ಸುತ್ತಿನಲ್ಲೂ ಭಾರಿ ಮುನ್ನಡೆ  ಕಾಯ್ದು ಕೊಂಡ ಮುನಿರತ್ನ.

ಮುನಿರತ್ನ (ಬಿಜೆಪಿ)–60,668

ಕುಸುಮಾ (ಕಾಂಗ್ರೆಸ್‌) 28,111

ಆರ್‌.ಆರ್‌. ನಗರದ: 10ನೇ ಸುತ್ತಿನ ಅಂತ್ಯದ ಬಳಿಕ ಅಭ್ಯರ್ಥಿಗಳು ಪಡೆದ ಮತಗಳ ವಿವರ

ಮುನಿರತ್ನ (ಬಿಜೆಪಿ)– 55,103

ಕುಸುಮಾ (ಕಾಂಗ್ರೆಸ್‌)–27,923

ಕೃಷ್ಣಮೂರ್ತಿ (ಜೆಡಿಎಸ್‌)–2,256

ಮುನಿರತ್ನ ಅವರ ಮುನ್ನಡೆ– 27,180 ಮತಗಳು

ಭಾರಿ ಮುನ್ನಡೆ ಸಾಧಿಸಿದ ಮುನಿರತ್ನ: ಬೆಂಬಲಿಗರ ಸಂಭ್ರಮ

ಬೆಂಗಳೂರು: ಭಾರಿ ಕುತೂಹಲ ಮೂಡಿಸಿರುವ ಉಪ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆರ್‌.ಆರ್. ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರಿ ಮುನ್ನಡೆಯಲ್ಲಿದ್ದಾರೆ.

ಒಟ್ಟು 25 ಸುತ್ತುಗಳ ಪೈಕಿ ಈಗಾಗಲೇ ಒಂಬತ್ತು ಸುತ್ತುಗಳ ಮತ ಎಣಿಕೆ ಮುಕ್ತಾಯಗೊಂಡಿದ್ದು, ಮುನಿರತ್ನ ಅವರು 25 ಸಾವಿರಕ್ಕೂ ಮತಗಳ ಅಂತರದಿದ ಮುಂದಿದ್ದಾರೆ. ಆ ಮೂಲಕ, ಗೆಲುವಿನ ಕಡೆಗೆ ಸ್ಪಷ್ಟ ಹೆಜ್ಜೆ ಇಟ್ಟಿದ್ದಾರೆ. ಕಾಂಗ್ರೆಸ್‌ನ ಕುಸುಮಾ ಎರಡನೇ ಸ್ಥಾನದಲ್ಲಿದ್ದು, ಜೆಡಿಎಸ್‌ನ ಕೃಷ್ಣ ಮೂರ್ತಿ ಮೂರನೇ ಸ್ಥಾನದಲ್ಲಿದ್ದಾರೆ.

ಒಂಬತ್ತನೇ ಸುತ್ತಿನ ಅಂತ್ಯಕ್ಕೆ ಮುನಿರತ್ನ 50,387 ಮತಗಳನ್ನು ಪಡೆದರೆ, ಅವರ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಕುಸುಮಾ 25,161 ಮತಗಳನ್ನು ಪಡೆದಿದ್ದಾರೆ. ಜಿಡಿಎಸ್‌ನ ಕೃಷ್ಣಮೂರ್ತಿ ಅವರಿಗೆ 1862 ಮತಗಳು ಮಾತ್ರ ಬಂದಿವೆ. ಮುನಿರತ್ನ ಅವರ ಅಂತರ 25,226 ಮತಗಳು. ಈವರೆಗೆ ಎಣಿಕೆ ನಡೆದ ಎಲ್ಲ ಸುತ್ತುಗಳಲ್ಲೂ ಮುನಿರತ್ನ ಮುನ್ನಡೆ ಕಾಯ್ದುಕೊಂಡೇ ಬಂದಿದ್ದಾರೆ.

ಅದಾಗಲೇ ಮುನಿರತ್ನ ಬೆಂಬಲಿಗರು ಸಂಭ್ರಮಾಚರಣೆ ಆರಂಭಿಸಿದ್ದಾರೆ. ಮತ ಎಣಿಕೆ ಕೇಂದ್ರದ ಎದುರು ಬಿಜೆಪಿಯ ನೂರಾರು ಕಾರ್ಯಕರ್ತರು ಜಮಾಯಿಸಿದ್ದು, ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಮುನಿರತ್ನ ಪರ ಘೋಷಣೆ ಕೂಗುತ್ತಿದ್ದಾರೆ.  ಗುಂಪುಗೂಡಿದವರನ್ನು ಪೊಲೀಸರು ಚದುರಿಸುತ್ತಿದ್ದಾರೆ.

ಮುನಿರತ್ನಗೆ 25,143 ಮತಗಳ ಮುನ್ನಡೆ

ಒಂಬತ್ತನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ-25,143

ಮುನಿರತ್ನ (ಬಿಜೆಪಿ)– 50387

ಕುಸುಮಾ (ಕಾಂಗ್ರೆಸ್‌)–25,244

8ನೇ ಸುತ್ತಿನ ಅಂತ್ಯಕ್ಕೆ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ - 22,527

ಒಟ್ಟು ಮತಗಳು 

ಮುನಿರತ್ನ (ಬಿಜೆಪಿ)– 44,802

ಕುಸುಮಾ (ಕಾಂಗ್ರೆಸ್‌)–22,130

ಏಳನೇ ಸುತ್ತಿನ ಮತ ಎಣಿಕೆ ವಿವರ

ಏಳನೇ ಸುತ್ತಿನ ಅಂತ್ಯಕ್ಕೆ ಅಭ್ಯರ್ಥಿಗಳು ಪಡೆದ ಒಟ್ಟು ಮತಗಳು


ಮುನಿರತ್ನ (ಬಿಜೆಪಿ)– 39,087

ಕುಸುಮಾ (ಕಾಂಗ್ರೆಸ್‌)–19,315

ಕೃಷ್ಣ ಮೂರ್ತಿ (ಜೆಡಿಎಸ್)– 1572

ಮುನಿರತ್ನಗೆ 19,532 ಮತಗಳ ಮುನ್ನಡೆ

ಮುನಿರತ್ನಗೆ 17532 ಮತಗಳ ಮುನ್ನಡೆ

ಆರನೇ ಸುತ್ತುಗಳ ಮತ ಎಣಿಕೆ ಮುಕ್ತಾಯ/ ಬಿಜೆಪಿ ಅಭ್ಯರ್ಥಿ ಮುನಿರತ್ನ ಮುನ್ನಡೆ 17532

ಈ ಸುತ್ತಿನಲ್ಲಿ ಅಭ್ಯರ್ಥಿಗಳು ಪಡೆದ ಮತಗಳ ವಿವರ 

ಮುನಿರತ್ನ (ಬಿಜೆಪಿ)– 5322

ಕುಸುಮಾ (ಕಾಂಗ್ರೆಸ್‌)– 2570

ಕೃಷ್ಣಮೂರ್ತಿ (ಜೆಡಿಎಸ್‌)– 459

ಒಟ್ಟು ಮತಗಳು 

ಮುನಿರತ್ನ (ಬಿಜೆಪಿ)– 34,189

ಕುಸುಮಾ (ಕಾಂಗ್ರೆಸ್‌)–16,513

ಕೃಷ್ಣ ಮೂರ್ತಿ (ಜೆಡಿಎಸ್)–1,288

ಮುನಿರತ್ನ ಭಾರಿ ಮುನ್ನಡೆ

ಆರನೇ ಸುತ್ತುಗಳ ಮತ ಎಣಿಕೆ ಮುಕ್ತಾಯ/ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ 14843 ಮತಗಳ ಭಾರೀ ಮುನ್ನಡೆ 

5 ಸುತ್ತುಗಳ ಮತ ಎಣಿಕೆ ಮುಕ್ತಾಯ: ಮುನಿರತ್ನ ಭಾರೀ ಮುನ್ನಡೆ

5 ಸುತ್ತುಗಳ ಮತ ಎಣಿಕೆ ಮುಕ್ತಾಯ: ಬಿಜೆಪಿ ಅಭ್ಯರ್ಥಿ ಮುನಿರತ್ನ ಭಾರೀ ಮುನ್ನಡೆ
ಮುನಿರತ್ನ -14,784

ಆರ್‌.ಆರ್‌. ನಗರ ಸುತ್ತುಗಳಲ್ಲಿ ಪ್ರತಿ ಸುತ್ತಿನಲ್ಲಿ ಪಡೆದ ಮತಗಳ ವಿವರ

ಮೊದಲ ಸುತ್ತು

ಮುನಿರತ್ನ (ಬಿಜೆಪಿ)– 6164

ಕುಸುಮಾ (ಕಾಂಗ್ರೆಸ್‌)– 2909

ಕೃಷ್ಣಮೂರ್ತಿ (ಜೆಡಿಎಸ್‌)– 138

ಎರಡನೇ ಸುತ್ತು

ಮುನಿರತ್ನ (ಬಿಜೆಪಿ)–5511

ಕುಸುಮಾ (ಕಾಂಗ್ರೆಸ್‌)– 2994

ಕೃಷ್ಣಮೂರ್ತಿ (ಜೆಡಿಎಸ್‌)– 275

ಮೂರನೇ ಸುತ್ತು

ಮುನಿರತ್ನ (ಬಿಜೆಪಿ)–4900

ಕುಸುಮಾ (ಕಾಂಗ್ರೆಸ್‌)– 2763

ಕೃಷ್ಣಮೂರ್ತಿ (ಜೆಡಿಎಸ್‌)–206

ಮೂರನೇ ಸುತ್ತಿನ ಮತಗಳ ವಿವರ

ಮುನಿರತ್ನ (ಬಿಜೆಪಿ)– 15,110

ಕುಸುಮಾ (ಕಾಂಗ್ರೆಸ್‌)– 8692

ಮೂರನೇ ಸುತ್ತಿನಲ್ಲಿ ಮುನಿರತ್ನಗೆ 9 ಸಾವಿರ ಮತಗಳ ಮುನ್ನಡೆ

3ನೇ ಸುತ್ತಿನಲ್ಲೂ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. ಮತಗಳ ಅಂತರ 9 ಸಾವಿರಕ್ಕೂ ಹೆಚ್ಚು. ಮುನಿರತ್ನ ಪರ ಘೋಷಣೆ ಕೂಗಿ ಕಾರ್ಯಕರ್ತರು  ಸಂಭ್ರಮಾಚರಣೆ ಮಾಡುತ್ತಿದ್ದಾರೆ. 

ಎರಡನೇ ಸುತ್ತಿನಲ್ಲೂ ಬಿಜೆಪಿಯ ಮುನಿರತ್ನ ಮುನ್ನಡೆ

ಬಿಜೆಪಿಯ ಮುನಿರತ್ನ- 9950 ಮತ
ಕಾಂಗ್ರೆಸ್​ನ ಕುಸುಮಾ– 4890 ಮತ
ಜೆಡಿಎಸ್​ನ ಕೃಷ್ಣಮೂರ್ತಿ-  2344 ಮತ 


ಮುನಿರತ್ನ‌ ಮುನ್ನಡೆ- 5060

ಮೊದಲ ಸುತ್ತಿನ ವಿವರ

ಬಿಜೆಪಿಯ ಮುನಿರತ್ನ– 5,300 ಮತ
ಕಾಂಗ್ರೆಸ್​ನ ಕುಸುಮಾ– 2,082 ಮತ
ಜೆಡಿಎಸ್​ನ ಕೃಷ್ಣಮೂರ್ತಿ–  1,100 ಮತ

ಮುನಿರತ್ನಗೆ ಮೂರು ಸಾವಿರ ಮತಗಳ ಮುನ್ನಡೆ

ಆರ್‌.ಆರ್. ನಗರ ಕ್ಷೇತ್ರದ ಅಂಚೆ ಮತ ಮತ್ತು ಎಲೆಕ್ಟ್ರಾನಿಕ್‌ ಮತಗಳ ಎಣಿಕೆ ಆರಂಭವಾಗಿವೆ. ಮೊದಲ ಹಂತದ ಮತ ಎಣಿಕೆ ಮುಕ್ತಾಯವಾಗಿದ್ದು, 9,000ಕ್ಕೂ ಹೆಚ್ಚು ಮತಗಳ ಎಣಿಕೆ ನಡೆದಿದೆ. ಮೊದಲ ಸುತ್ತಿನಲ್ಲಿ ಬಿಜೆಪಿಯ ಮುನಿರತ್ನ ಮುನ್ನಡೆ ಸಾಧಿಸಿದ್ದಾರೆ. 3130 ಮತಗಳ ಅಂತರದಲ್ಲಿ ಅವರಿಗೆ ಮುನ್ನಡೆ ಸಿಕ್ಕಿದೆ. 

ಅಂಚೆ ಮತದಲ್ಲಿ ಮುನಿರತ್ನ ಮುನ್ನಡೆ

ಆರ್‌.ಆರ್. ನಗರ – ಅಂಚೆ ಮತ ಎಣಿಕೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಮುನ್ನಡೆ
ಕಾಂಗ್ರೆಸ್​ ಅಭ್ಯರ್ಥಿ ಕುಸುಮಾಗೆ ಹಿನ್ನಡೆ

ಮುನಿರತ್ನ (ಬಿಜೆಪಿ)– 253

ಕುಸುಮಾ (ಕಾಂಗ್ರೆಸ್)– 112

ಕೃಷ್ಣಮೂರ್ತಿ (ಜೆಡಿಎಸ್‌)– 6

ಮತ ಎಣಿಕೆ ಆರಂಭ

ರಾಜರಾಜೇಶ್ವರಿ ನಗರ ವಿಧಾನಸಭೆ ಕ್ಷೇತ್ರದ ಮತ ಎಣಿಕೆ ಕಾರ್ಯ ಆರಂಭವಾಗಿದೆ. ಮೊದಲಿಗೆ ಅಂಚೆ ಮತಗಳ ಎಣಿಕೆ ನಡೆಯುತ್ತಿದೆ. 

ನಿಜವಾಗುತ್ತಾ ಮತದಾನೋತ್ತರ ಸಮೀಕ್ಷೆ?

ಗದ್ದುಗೆ ಯಾರಿಗೆ

ಫಲಿತಾಂಶಕ್ಕೆ ಮೊದಲೇ ಲಾಬಿ

8 ಗಂಟೆಗೆ ಮತ ಎಣಿಕೆ ಆರಂಭ

ಮತ ಎಣಿಕೆಯು ಬೆಳಿಗ್ಗೆ 8 ಗಂಟೆಗೆ ಆರಂಭವಾಗಲಿದೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.