ADVERTISEMENT

500 ಕೆ.ಜಿ ಪ್ಲಾಸ್ಟಿಕ್ ಜಪ್ತಿ

​ಪ್ರಜಾವಾಣಿ ವಾರ್ತೆ
Published 19 ಜುಲೈ 2019, 18:56 IST
Last Updated 19 ಜುಲೈ 2019, 18:56 IST
ಮಾರ್ಕಂಡೇಯ ನಗರದಲ್ಲಿ ಪ್ಲಾಸ್ಟಿಕ್ ಕವರ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದರು
ಮಾರ್ಕಂಡೇಯ ನಗರದಲ್ಲಿ ಪ್ಲಾಸ್ಟಿಕ್ ಕವರ್ ತಯಾರಿಸುತ್ತಿದ್ದ ಕಾರ್ಖಾನೆ ಮೇಲೆ ಶುಕ್ರವಾರ ದಾಳಿ ನಡೆಸಿದ ಬಿಬಿಎಂಪಿ ಅಧಿಕಾರಿಗಳು ಪರಿಶೀಲನೆ ನಡೆಸಿದರು   

ರಾಜರಾಜೇಶ್ವರಿನಗರ: ಅನಧಿಕೃತವಾಗಿ ಪ್ಲಾಸ್ಟಿಕ್ ಕವರ್ ತಯಾರಿಸುತ್ತಿದ್ದ ಘಟಕಗಳ ಮೇಲೆ ಬಿಬಿಎಂಪಿ ಆರೋಗ್ಯಾಧಿಕಾರಿಗಳು ಶುಕ್ರವಾರ ದಾಳಿ ನಡೆಸಿದರು.

ಕೊಟ್ಟಿಗೇಪಾಳ್ಯ ವಾರ್ಡ್‍ನ ಮಾರ್ಕಂಡೇಯನಗರ, ಶ್ರೀನಿವಾಸ ನಗರದಲ್ಲಿ ವಿಶ್ವಾಸ್ ಮತ್ತು ಚಂದ್ರಶೇಖರ ಅಯ್ಯರ್ ಎಂಬುವವರು ಅನಧಿಕೃತವಾಗಿ ನಡೆಸುತ್ತಿದ್ದ ಘಟಕದ ಮೇಲೆಆರೋಗ್ಯಾಧಿಕಾರಿ ಡಾ.ಕೋಮಲ ನೇತೃತ್ವದಲ್ಲಿ ಆರೋಗ್ಯ ಪರಿವೀಕ್ಷಕರಾದ ಕೆ.ಶಿವಲಿಂಗಯ್ಯ, ನಂಜುಂಡಯ್ಯ, ಡಿ.ಎಲ್.ನಾರಾಯಣ್ ದಾಳಿ ನಡೆಸಿ 500 ಕೆಜಿ ಪ್ಲಾಸ್ಟಿಕ್ ಕವರ್ ವಶಪಡಿಸಿಕೊಂಡರು.

ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ₹ 30 ಸಾವಿರ ದಂಡ ವಿಧಿಸಿದರು. ಅಲ್ಲದೇ ಘಟಕಕ್ಕೆ ಬೀಗ ಹಾಕಿದರು.

ADVERTISEMENT

ಹೋಟೆಲ್, ಮಾಲ್, ತರಕಾರಿ ಅಂಗಡಿ, ದಿನಸಿ ಅಂಗಡಿ, ತಳ್ಳುವಗಾಡಿ, ಬಟ್ಟೆ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್, ಪ್ಲಾಸ್ಟಿಕ್ ಚೀಲ, ಪ್ಲಾಸ್ಟಿಕ್ ಬ್ಯಾಗ್ ಕಂಡುಬಂದರೆ ಅಂಗಡಿ ಮುಚ್ಚಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.