ADVERTISEMENT

ಶಾಲಾ ಬಸ್ ಅಪಘಾತ: ವಿದ್ಯಾರ್ಥಿಗಳಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 26 ಜೂನ್ 2025, 16:15 IST
Last Updated 26 ಜೂನ್ 2025, 16:15 IST
ಅಪಘಾತಕ್ಕೀಡಾದ ಶಾಲಾ ವಾಹನ
ಅಪಘಾತಕ್ಕೀಡಾದ ಶಾಲಾ ವಾಹನ   

ನೆಲಮಂಗಲ: ಬೆಂಗಳೂರು ಉತ್ತರ ತಾಲ್ಲೂಕಿನ ಲಕ್ಷ್ಮಿಪುರದಲ್ಲಿ ಗುರುವಾರ ಬೆಳಿಗ್ಗೆ ಶಾಲಾ ವಾಹನ ಮತ್ತು ಲಾರಿ ಮಧ್ಯೆ ಅಪಘಾತ ಸಂಭವಿಸಿದ್ದು, ಶಾಲಾ ಮಕ್ಕಳಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಶಾಲಾ ವಾಹನದ ಚಾಲಕ ಎದುರಿನ ವಾಹನ ಹಿಂದಿಕ್ಕುವಾಗ ಅಪಘಾತವಾಗಿದೆ.

ಘಟನೆಯಲ್ಲಿ ಐವರು ಮಕ್ಕಳಿಗೆ ಗಾಯವಾಗಿದೆ. ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಎಲ್ಲರನ್ನೂ ಮನೆಗೆ ಕಳುಹಿಸಲಾಗಿದೆ ಎಂದು ಪೊಲೀಸರು ಹೇಳಿದರು.

ADVERTISEMENT

ತಿಂಗಳ ಹಿಂದೆಯೂ ಶಾಲಾ ವಾಹನಗಳ ಮಧ್ಯೆ ಅಪಘಾತವಾಗಿತ್ತು. ಎಲ್ಲ ಶಾಲೆಗಳಿಗೂ ಎಚ್ಚರಿಕೆ ನೀಡಿದ್ದರೂ, ನಿರ್ಲಕ್ಷ್ಯದಿಂದ ವಾಹನ ಚಾಲನೆ ಮಾಡುತ್ತಿರುವವರನ್ನು ಬದಲಾವಣೆ ಮಾಡಿಲ್ಲ ಎಂದು ಇನ್‌ಸ್ಪೆಕ್ಟರ್ ಮುರಳೀಧರ್ ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.