ADVERTISEMENT

ಪ್ರತಿಷ್ಠಿತ ಕಂಪನಿಗಳ ಸ್ಟಿಕರ್ ಅಂಟಿಸಿ ಹೆಚ್ಚು ದರಕ್ಕೆ ಟಿವಿ ಮಾರಾಟ: ಆರೋಪಿ ಬಂಧನ

15 ಟಿವಿ, ₹ 75 ಸಾವಿರ ವಶ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 6:32 IST
Last Updated 7 ಜುಲೈ 2020, 6:32 IST
ಆರೋಪಿ ಸುರೇಶ್
ಆರೋಪಿ ಸುರೇಶ್   

ಬೆಂಗಳೂರು: ಸಾಧಾರಣ ಟಿವಿಗಳಿಗೆ ಪ್ರತಿಷ್ಠಿತ ಕಂಪನಿಗಳ ಸ್ಟಿಕರ್​​ ಅಂಟಿಸಿ ಹೆಚ್ಚು ಹಣಕ್ಕೆ ಮಾರಾಟ ಮಾಡಿ ವಂಚಿಸುತ್ತಿದ್ದ ಆರೋಪಿಯನ್ನು ಸಿಸಿಬಿಪೊಲೀಸರು ಬಂಧಿಸಿದ್ದಾರೆ.

ಚಾಮರಾಜಪೇಟೆಯ ಸುರೇಶ್ (45) ‌ಬಂಧಿತ ಆರೋಪಿ. ಆರೋಪಿಯಿಂದ 15 ಟಿವಿ, ₹ 75 ಸಾವಿರ ನಗದು ಜಪ್ತಿ ಮಾಡಲಗಿದೆ.

ಸುರೇಶ್‌ ಸಾಧಾರಣ ಟಿವಿಗಳನ್ನು ಖರೀದಿಸಿ ಅದಕ್ಕೆ ಸೋನಿ ಕಂಪನಿಯ ಸ್ಟಿಕರ್​​ ಅಂಟಿಸಿ ಅಸಲಿ ಟಿವಿಯಂತೆ ಬಿಂಬಿಸಿ, ಹೆಚ್ಚು ಹಣಕ್ಕೆ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ. ಈ ವಿಷಯ ಗೊತ್ತಾಗಿ ಕಂಪನಿಯವರು ಸಿಸಿಬಿ ಪೊಲೀಸರಿಗೆ ದೂರು ನೀಡಿದ್ದರು.

ADVERTISEMENT

ದೂರಿನ ಆಧಾರದ ಮೇರೆಗೆ ಸಿಸಿಬಿ ಪೊಲೀಸರು ವಿಶೇಷ ತಂಡ ರಚನೆ ‌ಮಾಡಿ ದಾಳಿ‌ ನಡೆಸಿ, ಆರೋಪಿ ಬಂಧಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.