ADVERTISEMENT

ಯುವತಿಯರ ಅಡ್ಡಗಟ್ಟಿ ಕಿರುಕುಳ; ಯುವಕನ ಬಂಧನ

​ಪ್ರಜಾವಾಣಿ ವಾರ್ತೆ
Published 2 ಜೂನ್ 2019, 19:44 IST
Last Updated 2 ಜೂನ್ 2019, 19:44 IST
ಶ್ರೀನಿವಾಸ್ ರೆಡ್ಡಿ
ಶ್ರೀನಿವಾಸ್ ರೆಡ್ಡಿ   

ಬೆಂಗಳೂರು: ಜೀವನ್‌ಬಿಮಾ ನಗರ ಬಳಿಯ ನ್ಯೂ ತಿಪ್ಪಸಂದ್ರದಲ್ಲಿ ಯುವತಿಯರನ್ನು ಅಡ್ಡಗಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪದಡಿ ಶ್ರೀನಿವಾಸ್ ರೆಡ್ಡಿ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.

‘ಸ್ಥಳೀಯ ನಿವಾಸಿ ಆದ ಶ್ರೀನಿವಾಸ್, ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇದ್ದ. ಮನೆ ಸಮೀಪದ ರಸ್ತೆಗಳಲ್ಲಿ ಓಡಾಡುತ್ತಿದ್ದ ಯುವತಿಯರಿಗೆ ಕಿರುಕುಳ ನೀಡುತ್ತಿದ್ದ’ ಎಂದು ಪೊಲೀಸರು ಹೇಳಿದರು.

‘ನ್ಯೂ ತಿಪ್ಪಸಂದ್ರದಲ್ಲಿ ಪೇಯಿಂಗ್ ಗೆಸ್ಟ್‌ ಇದ್ದು, 20ಕ್ಕೂ ಹೆಚ್ಚು ಯುವತಿಯರು ವಾಸವಿದ್ದಾರೆ. ಆ ಯುವತಿಯರು ಕಾಲೇಜಿಗೆ ಹೋಗುವಾಗ ಹಾಗೂ ವಾಪಸ್ ಬರುವಾಗ ಆರೋಪಿ ಪೀಡಿಸುತ್ತಿದ್ದ. ಅವಾಚ್ಯ ಶಬ್ದಗಳಿಂದ ನಿಂದಿಸುತ್ತಿದ್ದ. ಆತನ ವರ್ತನೆಯಿಂದ ಬೇಸತ್ತ ಯುವತಿಯೊಬ್ಬರು, ಆತನ ಫೋಟೊ ಸಮೇತ ಠಾಣೆಗೆ ದೂರು ನೀಡಿದ್ದರು. ಅದರನ್ವಯ ಪ್ರಕರಣ ದಾಖಲಿಸಿಕೊಂಡು ಆತನನ್ನು ಬಂಧಿಸಲಾಗಿದೆ’ ಎಂದು ತಿಳಿಸಿದರು.

ADVERTISEMENT

‘ಈ ಹಿಂದೆ ಯುವತಿಯೊಬ್ಬರು ಆರೋಪಿಯ ವರ್ತನೆ ಪ್ರಶ್ನಿಸಿದ್ರು. ಅಷ್ಟಕ್ಕೆ ಕೋಪಗೊಂಡಿದ್ದ ಆತ, ಯುವತಿಗೆ ಜೀವಬೆದರಿಕೆ ಹಾಕಿದ್ದ. ಅವರನ್ನು ಹಿಂಬಾಲಿಸಿ ಕಿರುಕುಳ ನೀಡಿದ್ದ’ ಎಂದೂ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.