ಬೆಂಗಳೂರು: ಯಲಹಂಕ ಮೇಲ್ಸೇತುವೆಗೆ ಸಿದ್ಧಾರೂಢರ ಹೆಸರಿಡುವಂತೆ ರಾಮೋಹಳ್ಳಿಯ ಸಿದ್ಧಾರೂಢ ಮಿಷನ್ ಆಶ್ರಮದ ಅಧ್ಯಕ್ಷ ಆರೂಢಭಾರತೀ ಸ್ವಾಮೀಜಿ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದಾರೆ.
‘ಯಾವುದೇ ರಸ್ತೆ ಅಥವಾ ಕಟ್ಟಡಗಳಿಗೆ ಆದರ್ಶ ವ್ಯಕ್ತಿಗಳ ಹೆಸರಿಡುವುದರಿಂದ ಅವರ ಆದರ್ಶಗಳು ಜನಮನದಲ್ಲಿ ಜೀವಂತವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಯಲಹಂಕ ಮೇಲ್ಸೇತುವೆಗೆ ವೀರ ಸಾವರ್ಕರ್ ಹೆಸರನ್ನಿಡುವುದು ಸೂಕ್ತ. ಒಂದು ವೇಳೆ ಕರ್ನಾಟಕದ ವ್ಯಕ್ತಿಯ ಹೆಸರನ್ನೇ ಇಡಬೇಕಾದಲ್ಲಿ ಸಿದ್ಧಾರೂಢರ ಹೆಸರನ್ನು ಪರಿಗಣಿಸಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.