ಅರುಣ್
ಬೆಂಗಳೂರು: ರಸ್ತೆಯಲ್ಲಿ ನಡೆದು ತೆರಳುತ್ತಿದ್ದ ಸಾರ್ವಜನಿಕರ ಮೇಲೆ ಮಾರಕಾಸ್ತ್ರ ಬೀಸುತ್ತಿದ್ದ ಆರು ಮಂದಿಯನ್ನು ಚಂದ್ರಾಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕಾಮಾಕ್ಷಿಪಾಳ್ಯ ಕಾವೇರಿಪುರದ ಮೂರನೇ ಕ್ರಾಸ್ ನಿವಾಸಿ ಎಸ್.ಅರುಣ್ (19), ಕೆಂಗುಂಟೆ ಅಂಬೇಡ್ಕರ್ ಕ್ರಾಸ್ ಬಳಿಯ ಮೂರನೇ ಕ್ರಾಸ್ ನಿವಾಸಿ ಪ್ರಜ್ವಲ್ (18) ಮೂಡಲಪಾಳ್ಯ ಗಾಳಿ ಆಂಜನೇಯ ದೇವಸ್ಥಾನದ ಬಳಿಯ ನಿವಾಸಿ ರವಿ (19), ಕಾಮಾಕ್ಷಿಪಾಳ್ಯ ಒಂದನೇ ಮುಖ್ಯರಸ್ತೆ, ಎರಡನೇ ಕ್ರಾಸ್‌ನ ನಿವಾಸಿ ದಿಲೀಪ್ ಅಲಿಯಾಸ್ ಡಾಲಿ (20) ಸೇರಿ ಆರು ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.
ಸೆ.13ರಂದು ಮುಂಜಾನೆ ಆರು ಮಂದಿ ಆರೋಪಿಗಳು ಮೂರು ದ್ವಿಚಕ್ರ ವಾಹನದಲ್ಲಿ ತಿರುಗಾಟ ನಡೆಸುತ್ತಾ ರಸ್ತೆಯಲ್ಲಿ ನಡೆದು ತೆರಳುತ್ತಿದ್ದವರ ಮೇಲೆ ಮಾರಕಾಸ್ತ್ರ ಬೀಸುತ್ತಿದ್ದರು. ಬಸವೇಶ್ವರನಗರದ ರಸ್ತೆಬದಿಯಲ್ಲಿ ನಿಲುಗಡೆ ಮಾಡಿದ್ದ ಮೂರು ಕಾರುಗಳ ಗ್ಲಾಸ್ ಒಡೆದು ಹಾಕಿದ್ದರು. ಮಾಲೀಕರು ನೀಡಿದ ದೂರು ಆಧರಿಸಿ ಆರೋಪಿಗಳನ್ನು ಬಂಧಿಸಲಾಯಿತು ಎಂದು ಪೊಲೀಸರು ಹೇಳಿದರು.
ಆರೋಪಿಗಳ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಎರಡು ಆಯುಧಗಳು ಹಾಗೂ ಮೂರು ದ್ವಿಚಕ್ರ ವಾಹನಗಳನ್ನು ಜಪ್ತಿ ಮಾಡಲಾಗಿದೆ ಎಂದು ಪೊಲೀಸರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.