ADVERTISEMENT

ಚಾಮರಾಜಪೇಟೆ ಈದ್ಗಾ ಮೈದಾನದಲ್ಲಿ 16 ನದಿಗಳ ಜಲ ಪ್ರೋಕ್ಷಣೆ: ಲಹರಿ ವೇಲು

​ಪ್ರಜಾವಾಣಿ ವಾರ್ತೆ
Published 27 ಆಗಸ್ಟ್ 2022, 21:32 IST
Last Updated 27 ಆಗಸ್ಟ್ 2022, 21:32 IST
ಲಹರಿ ವೇಲು
ಲಹರಿ ವೇಲು   

ಬೆಂಗಳೂರು:‘ದೇಶದ 16 ಪವಿತ್ರ ನದಿಗಳ ಜಲವನ್ನು ಮೈದಾನದಲ್ಲಿ ಪ್ರೋಕ್ಷಣೆ ಮಾಡುವ ಮೂಲಕ ಗಣೇಶ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡುಲಾಗುವುದು. ಪ್ರತಿವರ್ಷ ಮೂರ್ತಿಯನ್ನು ನಮ್ಮ ಲಹರಿ ಸಂಸ್ಥೆಯ ಮೂಲಕ ನೀಡಲಾಗುವುದು’ ಎಂದು ಚಾಮರಾಜಪೇಟೆ ನಾಗರಿಕರ ಒಕ್ಕೂಟ ಮತ್ತು ಗಣೇಶೋತ್ಸವ ಸಮಿತಿ ಮುಖ್ಯಸ್ಥ ಲಹರಿ ವೇಲು ಹೇಳಿದರು.

‘ಕೇವಲ ಒಂದು ಧರ್ಮಕ್ಕೆ ಸೀಮಿತವಾಗಿದ್ದ ಪ್ರದೇಶದಲ್ಲಿ ಗಣೇಶೋತ್ಸವಕ್ಕೆ ಅವಕಾಶ ಸಿಗುತ್ತಿರುವುದು ಹೋರಾಟಕ್ಕೆ ಸಂದ ಫಲ’ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

‘ಗಣೇಶ ಪ್ರತಿಷ್ಠಾಪನೆಗೆ ಅವಕಾಶ ನೀಡಬೇಕೆಂದು 11 ವಿವಿಧ ಸಂಘಟನೆಗಳು ಅರ್ಜಿ ಸಲ್ಲಿಸಿದ್ದು, ಅದರಲ್ಲಿ ಸ್ಥಳೀಯ ಎರಡು ಸಂಘಟನೆಗಳಿಗೆ ಅವಕಾಶ ನೀಡುವ ಭರವಸೆಯಿದೆ. ಗಣೇಶೋತ್ಸವದಲ್ಲಿ ಭಾಗವಹಿಸಲು ಪ್ರತಿಯೊಬ್ಬರಿಗೂ ಮುಕ್ತ ಅವಕಾಶವಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯುವುದಿಲ್ಲ’ ಎಂದು ಭರವಸೆ ವ್ಯಕ್ತಪಡಿಸಿದರು.

ADVERTISEMENT

‘ಗಣೇಶ ಹಬ್ಬ ಮುಗಿದ ನಂತರ ಮೈದಾನಕ್ಕೆ ಹೆಸರಿಡು ವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.