ADVERTISEMENT

‘ಸಮಾಜಕ್ಕೆ ಬೇಕು ದಾರಿತೋರುವ ಬರಹಗಳು’

ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಅಭಿಮತ

​ಪ್ರಜಾವಾಣಿ ವಾರ್ತೆ
Published 23 ನವೆಂಬರ್ 2022, 20:50 IST
Last Updated 23 ನವೆಂಬರ್ 2022, 20:50 IST
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ‘ಡಾ. ರಾಜ್ ಆ 108 ದಿನಗಳು’ ‘ಸುಡು ಬಯಲು’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಡಿ. ಉಮಾಪತಿ, ಆರ್.ಪಿ. ಸಾಂಬ ಸದಾಶಿವ ರೆಡ್ಡಿ, ಪದ್ಮಾ ನಾಗರಾಜ್, ಕಾಂತರಾಜು, ಎಸ್.ನಾಗಣ್ಣ, ಎಂ.ಎಸ್.ಮಣಿ, ಎಚ್‌.ಎಂ. ರೇವಣ್ಣ, ಪ್ರಕಾಶ್ ರಾಥೋಡ್ ಇದ್ದಾರೆ -       ಪ್ರಜಾವಾಣಿ ಚಿತ್ರ
ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ‘ಡಾ. ರಾಜ್ ಆ 108 ದಿನಗಳು’ ‘ಸುಡು ಬಯಲು’ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ಡಿ. ಉಮಾಪತಿ, ಆರ್.ಪಿ. ಸಾಂಬ ಸದಾಶಿವ ರೆಡ್ಡಿ, ಪದ್ಮಾ ನಾಗರಾಜ್, ಕಾಂತರಾಜು, ಎಸ್.ನಾಗಣ್ಣ, ಎಂ.ಎಸ್.ಮಣಿ, ಎಚ್‌.ಎಂ. ರೇವಣ್ಣ, ಪ್ರಕಾಶ್ ರಾಥೋಡ್ ಇದ್ದಾರೆ -       ಪ್ರಜಾವಾಣಿ ಚಿತ್ರ   

ಬೆಂಗಳೂರು: ಸಮಕಾಲೀನ ಸಮಾಜ ವನ್ನು ಎಚ್ಚರಿಸುವ, ಭವಿಷ್ಯದ ಬದುಕಿಗೆ ದಾರಿ ತೋರುವ ಬರಹಗಳು ಇಂದಿನ ಅಗತ್ಯ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಕಾಂತರಾಜು ಹೇಳಿದರು.

ನಗರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಆರ್‌.ಪಿ.ಸಾಂಬಸದಾಶಿವ ರೆಡ್ಡಿ ಅವರ ‘ಡಾ.ರಾಜ್‌ ಆ 108 ದಿನಗಳು’ ಹಾಗೂ ಡಾ.ಎಂ.ಎಸ್‌.ಮಣಿ ಅವರ ‘ಸುಡು ಬಯಲು’ ಕೃತಿಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.

ಕೆಲ ವಿಷಯಗಳನ್ನು ಬಹಿರಂಗವಾಗಿ ಹೇಳಿದರೆ ಸಮಸ್ಯೆಗಳು ಹೆಚ್ಚಾಗುತ್ತವೆ. ಸಮಾಜವೇ ತೊಂದರೆಗೆ ಸಿಲುಕುತ್ತದೆ. ರಾಜ್‌ಕುಮಾರ್ ಅಪಹರಣವಾದಾಗ ಅವರಿದ್ದ ಸ್ಥಿತಿಗತಿಯ ಚಿತ್ರಣ, ಬಿಡುಗಡೆಗೆ ನಡೆದ ಪ್ರಯತ್ನಗಳನ್ನು ಸಂಪೂರ್ಣವಾಗಿ ಬಹಿರಂಗ ಮಾಡುವುದು ಕಷ್ಟವಾಗಿತ್ತು. ಅಂತಹ ಸೂಕ್ಷ್ಮ ವಿಷಯಗಳ ಕುರಿತು ರೆಡ್ಡಿ ಅವರ ಕೃತಿ ಬೆಳಕು ಚೆಲ್ಲಿದೆ ಎಂದು ವಿವರಿಸಿದರು.

ADVERTISEMENT

‘ಸುಡು ಬಯಲು’ ಕೃತಿಸಮಾಜದ ವಾಸ್ತವಗಳ ಚಿತ್ರಣ. ಮೌಢ್ಯಗಳ ವಿರೋಧಿ ಮನೋಭಾವ, ಜನರನ್ನು ಸಂಕಷ್ಟದ ಸಮಯದಲ್ಲಿ ಜಾಗೃತಿಗೊಳಿಸುವ ಲೇಖನಗಳು ಗಮನ ಸೆಳೆಯುತ್ತವೆ ಎಂದರು.

ಪತ್ರಕರ್ತ ಡಿ.ಉಮಾಪತಿ, ರಾಜ್‌ ಅಪಹರಣ ಪ್ರಕರಣದ ಎಲ್ಲ ವಾಸ್ತವಗಳು ಹೊರಗೆ ಬಂದಿಲ್ಲ‌. ಅಂದು ಸಮಾಜದ ಹಿತದೃಷ್ಟಿ ಮುಖ್ಯವಾಗಿತ್ತು. ರೆಡ್ಡಿ ಅವರು ಹಲವು ಸತ್ಯಸಂಗತಿಗಳನ್ನು ಬೆಳಕಿಗೆ ತಂದರೂ, ಇನ್ನೂ ಕುತೂಹಲ ಉಳಿದಿವೆ.ಕನ್ನಡದಲ್ಲಿ ಸುಡು ಬಯಲಿನಂತಹ ಕೃತಿಗಳು ವಿರಳ ಎಂದು ಹೇಳಿದರು.

‘ಡಾ.ರಾಜ್‌’ ಕೃತಿ ಕುರಿತು ಸಂಪಾದಕ ಎಸ್‌.ನಾಗಣ್ಣ, ‘ಸುಡು ಬಯಲು’ ಕುರಿತು ಕರ್ನಾಟಕ ಮಾಧ್ಯಮ ಅಕಾಡೆಮಿ ಮಾಜಿ ಅಧ್ಯಕ್ಷ ಎಂ.ಸಿದ್ದರಾಜು ಮಾತನಾಡಿದರು.

ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಎಂ.ಬಿ.ಪಾಟೀಲ, ಮಾಜಿ ಸಚಿವ ಎಚ್‌.ಎಂ.ರೇವಣ್ಣ, ಮಾಜಿ ಸಭಾಪತಿ ವಿ.ಆರ್.ಸುದರ್ಶನ್, ವಿಧಾನ ಪರಿಷತ್ ಸದಸ್ಯ ಪ್ರಕಾಶ್ ರಾಥೋಡ್, ಬೆಂಗಳೂರು ಪ್ರೆಸ್‌ಕ್ಲಬ್‌ ಅಧ್ಯಕ್ಷ ಶ್ರೀಧರ್, ಪತ್ರಕರ್ತರಾದ ಗಂಗಾಧರ ಮೊದಲಿಯಾರ್, ಐ.ಎಚ್‌.ಸಂಗಮದೇವ, ಪದ್ಮಾ ನಾಗ ರಾಜ್, ಲೇಖಕರಾದ ಎಂ.ಎಸ್.ಮಣಿ, ಸಾಂಬಸದಾಶಿವ ರೆಡ್ಡಿ, ನೀಲಕಂಠ‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.