ADVERTISEMENT

ಲಲಿತಮ್ಮ, ನಾಗೇಶ್‌ಗೆ ‘ಎಸ್.ಪಿ. ವರದರಾಜು ಪ್ರಶಸ್ತಿ’

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2023, 21:44 IST
Last Updated 6 ಫೆಬ್ರುವರಿ 2023, 21:44 IST
   

ಬೆಂಗಳೂರು: ನಟ ರಾಜ್‌ಕುಮಾರ್ ಅವರ ಸೋದರ ಎಸ್.ಪಿ. ವರದರಾಜು ಹೆಸರಿನಲ್ಲಿ ನೀಡಲಾಗುತ್ತಿರುವ ‘ಎಸ್.ಪಿ. ವರದರಾಜು ಪ್ರಶಸ್ತಿ’ಗೆ ಈ ಬಾರಿ ರಂಗಭೂಮಿ ಕ್ಷೇತ್ರದಲ್ಲಿ ಕಲಾವಿದೆ ಡಿ. ಲಲಿತಮ್ಮ ಮತ್ತು ಚಲನಚಿತ್ರ ಕ್ಷೇತ್ರದಲ್ಲಿ ಕಲಾವಿದ ಬೆಂಗಳೂರು ನಾಗೇಶ್‌ ಆಯ್ಕೆಯಾಗಿದ್ದಾರೆ.

ವರದರಾಜು ಆತ್ಮೀಯರ ಬಳಗವು ರಂಗಭೂಮಿ ಹಾಗೂ ಸಿನಿಮಾ ಕ್ಷೇತ್ರದ ಸಾಧಕರಿಗೆ ಪ್ರತಿವರ್ಷ ಈ ಪ್ರಶಸ್ತಿ ನೀಡುತ್ತಿದೆ. ಡಿ. ಲಲಿತಮ್ಮ ಅವರು 8 ವರ್ಷದ ಬಾಲಕಿಯಾಗಿದ್ದಾಗಲೇ ರಂಗಭೂಮಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದಾರೆ. ಸಮಾಜ ಸೇವೆಯಲ್ಲೂ ಸಕ್ರಿಯ ರಾಗಿದ್ದಾರೆ. ಬೆಂಗಳೂರು ನಾಗೇಶ್ ಅವರು 250ಕ್ಕೂ ಹೆಚ್ಚು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಡಾ. ರಾಜ್‌ಕುಮಾರ್‌ ಅವರ ಜೊತೆ 22 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ರವೀಂದ್ರ ಕಲಾಕ್ಷೇತ್ರದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭವು ಫೆ.8ರಂದು ನಡೆಯಲಿದೆ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT