ಕಾರ್ಯಕ್ರಮದಲ್ಲಿ ರಂಗಭಾಷಿಯಂ ಸೆಲ್ವಾಸೆಂಬಿಯನ್, ಕಾರ್ತಿಕ್ ರಾಜೇಂದ್ರನ್, ರಣಧೀರ್ ಕುಮಾರ್ ಹಾಗೂ ಕ್ಷೀರ ಸಾಗರ್ ಸಾಹೂ, ವಿನೋದ್ ಕುಮಾರ್ ಎಟಾಚೇರಿ, ಪ್ರಭುಜಿತ್ ಮೊಹಾಪಾತ್ರ ಮತ್ತು ಪಿಂಟು ಭುನಿಯಾ ಅವರನ್ನು ಅಭಿನಂದಿಸಲಾಯಿತು.
ಬೆಂಗಳೂರು: ಸ್ಟ್ಯಾನ್‌ಫೋರ್ಡ್ ವಿಶ್ವವಿದ್ಯಾಲಯ ಗುರುತಿಸಿರುವ ಜಗತ್ತಿನ ಅತ್ಯುತ್ತಮ ಶೇ 2 ರಷ್ಟು ವಿಜ್ಞಾನಿಗಳ ಪಟ್ಟಿಯಲ್ಲಿ ಆಂಧ್ರಪ್ರದೇಶದ ಎಸ್‌ಆರ್‌ಎಂ ವಿಶ್ವವಿದ್ಯಾಲಯದ ಏಳು ಪ್ರಾಧ್ಯಾಪಕರು ಸ್ಥಾನ ಪಡೆದಿದ್ದಾರೆ.
‘ಎಲ್ಸ್‌ವೇರ್’ ಜರ್ನಲ್ ಈ ಪಟ್ಟಿಯನ್ನು ಪ್ರಕಟಿಸಿದೆ. ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾದ ರಂಗಭಾಷಿಯಂ ಸೆಲ್ವಾಸೆಂಬಿಯನ್, ಕಾರ್ತಿಕ್ ರಾಜೇಂದ್ರನ್, ರಣಧೀರ್ ಕುಮಾರ್ ಹಾಗೂ ಕ್ಷೀರ ಸಾಗರ್ ಸಾಹೂ ಅವರು ನಗದು ಬಹುಮಾನಕ್ಕೂ (ತಲಾ ₹ 50 ಸಾವಿರ) ಭಾಜನರಾಗಿದ್ದಾರೆ.
ವಿನೋದ್ ಕುಮಾರ್ ಎಟಾಚೇರಿ, ಪ್ರಭುಜಿತ್ ಮೊಹಾಪಾತ್ರ ಮತ್ತು ಪಿಂಟು ಭುನಿಯಾ ಸಹ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ವಿವಿ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಸಿ.ಎಚ್. ಸತೀಶ್ ಕುಮಾರ್, ‘ಈ ಮನ್ನಣೆಯು ವಿಶ್ವವಿದ್ಯಾಲಯದ ಬಹುಶಿಸ್ತೀಯ ಸಂಶೋಧನೆಗೆ ಸಾಕ್ಷಿಯಾಗಿದೆ. ವಿಶ್ವ ದರ್ಜೆಯ ಸಂಶೋಧನೆಗಳನ್ನು ಕೈಗೊಳ್ಳುತ್ತಿದ್ದು, ಈ ವಿಜ್ಞಾನಿಗಳು ಸಮಾಜಕ್ಕೆ ಮಾದರಿಯಾಗಿದ್ದಾರೆ’ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.