ADVERTISEMENT

ಇ–ಕಾಮರ್ಸ್‌ಗೆ ಬೀದಿ ವ್ಯಾಪಾರಿಗಳ ಆಕ್ಷೇಪ

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2019, 19:47 IST
Last Updated 2 ಏಪ್ರಿಲ್ 2019, 19:47 IST

ಬೆಂಗಳೂರು: ‘ಇ–ಕಾಮರ್ಸ್‌ ಮತ್ತು ಜಿಎಸ್‌ಟಿಯಿಂದಾಗಿ ಬೀದಿ ವ್ಯಾಪಾರಿಗಳ ಜೀವನೋಪಾಯದ ಮೇಲೆ ಆಗಿರುವ ಪರಿಣಾಮಗಳನ್ನು ಸಮಿತಿಯೊಂದರಿಂದ ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಬೇಕು’ ಎಂದು ಬೆಂಗಳೂರು ಜಿಲ್ಲಾ ಬೀದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ ಒತ್ತಾಯಿಸಿದೆ.

‘ಕೇಂದ್ರ ಸರ್ಕಾರ 2014ರಲ್ಲಿ ಬೀದಿ ವ್ಯಾಪಾರಿಗಳ (ಜೀವನೋಪಾಯ ರಕ್ಷಣೆ ಹಾಗೂ ಬೀದಿ ವ್ಯಾಪಾರದ ನಿಯಂತ್ರಣ) ಕಾಯ್ದೆ ತಂದರೂ, ಬೀದಿ ವ್ಯಾಪಾರಿಗಳ ಜೀವನ ಸುಧಾರಿಸಿಲ್ಲ. ಇ–ಕಾಮರ್ಸ್‌ ಕಂಪನಿಗಳು ಅಧಿಕ ರಿಯಾಯಿತಿ ನೀಡಿ ಗ್ರಾಹಕರನ್ನು ಸೆಳೆಯುತ್ತಿವೆ. ಇದರಿಂದ ಬೀದಿ ವ್ಯಾಪಾರಿಗಳಿಗೆ ಹೆಚ್ಚು ನಷ್ಟವಾಗುತ್ತಿದೆ’ ಎಂದು ಒಕ್ಕೂಟ ಪ್ರಕಟಣೆಯಲ್ಲಿ ದೂರಿದೆ.

‘ಇ–ಕಾಮರ್ಸ್‌ ನೀತಿ ಎಲ್ಲ ಭಾರತೀಯ ಭಾಷೆಗಳಿಗೆ ಅನುವಾದ ಮಾಡಿಸಿ, ಚರ್ಚೆಗೆ ಒಳಪಡಿಸಬೇಕು. ಬಳಿಕ ಅದನ್ನು ಅಂತಿಮಗೊಳಿಸಿ, ಅಂಗೀಕರಿಸಬೇಕು’ ಎಂದು ಆಗ್ರಹಿಸಿದೆ.

ADVERTISEMENT

‘ಬೀದಿ ಬದಿ ವ್ಯಾಪಾರಿಗಳ ಜೀವನವನ್ನು ಸುಧಾರಿಸುವ ಬಗೆಯನ್ನು ಸಹ ಇ–ಕಾಮರ್ಸ್‌ ನೀತಿಯಲ್ಲಿ ಸೇರಿಸಬೇಕು’ ಎಂದು ಒತ್ತಾಯಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.