ADVERTISEMENT

ಶಾಲಾ ಸಿನಿಮೋತ್ಸವ: 2.5 ಲಕ್ಷ ವಿದ್ಯಾರ್ಥಿಗಳಿಂದ ವೀಕ್ಷಣೆ

​ಪ್ರಜಾವಾಣಿ ವಾರ್ತೆ
Published 14 ನವೆಂಬರ್ 2018, 19:34 IST
Last Updated 14 ನವೆಂಬರ್ 2018, 19:34 IST
.
.   

ಬೆಂಗಳೂರು: ರಾಜ್ಯದ 23 ಜಿಲ್ಲೆಗಳಲ್ಲಿನ ಸಾವಿರಾರು ಶಾಲೆಗಳ 2.5 ಲಕ್ಷ ವಿದ್ಯಾರ್ಥಿಗಳಿಗೆ ಈ ಬಾರಿಯ ‘ಮಕ್ಕಳ ದಿನಾಚರಣೆ’ ವಿಶೇಷವಾಗಿತ್ತು. ಮಕ್ಕಳು ಪಾಠ ಪ್ರವಚನದೊಂದಿಗೆ ಶಾಲೆಯಲ್ಲೇ ಸಿನಿಮಾಗಳನ್ನು ನೋಡಿದರು.

ಶಿಕ್ಷಣ ಇಲಾಖೆಯು ಎಲ್‌.ಎಕ್ಸ್‌.ಎಲ್‌ ಐಡಿಯಾಸ್‌ ಸಂಸ್ಥೆಯ ಸಹಯೋಗದೊಂದಿಗೆ ಎಜುಸ್ಯಾಟ್‌ ಮತ್ತು ಟೆಲಿ ಎಜುಕೇಷನ್‌ ತಾಂತ್ರಿಕ ಸೌಲಭ್ಯ ಬಳಸಿಕೊಂಡು 1ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಶಾಲಾ ಸಿನಿಮೋತ್ಸವ ಆಯೋಜಿಸಿತ್ತು. ಇಲ್ಲಿ 30 ದೇಶಗಳ 20 ಭಾಷೆಗಳಲ್ಲಿನ ಸಿನಿಮಾಗಳನ್ನು ವಿವಿಧ ತರಗತಿಯ ಮಕ್ಕಳಿಗೆ ತೋರಿಸಲಾಯಿತು.

ಪ್ರತಿ ತಾಲ್ಲೂಕಿನಲ್ಲಿನ ಕ್ಷೇತ್ರ ಸಂಪನ್ಮೂಲ ಸಮನ್ವಯ ಕೇಂದ್ರಗಳಲ್ಲಿಯೂ ಸಿನಿಮಾ ಪ್ರದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಇಲ್ಲಿಗೆ ಹತ್ತಿರದ ಶಾಲೆಗಳ ಮಕ್ಕಳು ಬಂದು ಚಿತ್ರಗಳನ್ನು ನೋಡಿ ಸಂತಸಪಟ್ಟರು. 4ರಿಂದ 5ನೇ ತರಗತಿ ಮಕ್ಕಳಿಗೆ 58 ನಿಮಿಷ, 6ರಿಂದ 8ನೇ ತರಗತಿಗೆ 108 ನಿಮಿಷ ಹಾಗೂ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗಾಗಿ 105 ನಿಮಿಷಗಳನ್ನು ಸಿನಿಮಾ ವೀಕ್ಷಣೆಗಾಗಿ ಸಮಯ ನಿಗದಿ ಮಾಡಲಾಗಿತ್ತು.

ADVERTISEMENT

ಪ್ರದರ್ಶಿಸಿದ ಪ್ರಮುಖ ಚಲನಚಿತ್ರಗಳು: ವಿಸಲ್‌, ಡಾಲ್ಸ್‌ ಲೇಟರ್ಸ್‌, ಸೆಲ್ಫಿಕ್ಯಾಟ್‌, ಆಲ್‌ ಇನ್‌ ಗುಡ್‌ ಟೈಮ್‌, ಸೂಪರ್‌ ಪರ್ಸನ್‌, ದಿ ಚಿಲ್ಡರ್ನ್ಸ್ ಮೇಯರ್‌, ಸೆಲೆಬ್ರೇಷನ್ಸ್‌, ದಿ ಹೌಸ್‌ ಆಫ್‌ ಕಲರ್ಸ್‌, ಅಹಮದ್ಸ್‌ ಹೈರ್‌, ಮೈ ಬೆಸ್ಟ್‌ ಫ್ರೆಂಡ್ಸ್‌ ಶೂಸ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.