ADVERTISEMENT

ಗ್ರಾಫಿಕ್ ಕಲಾ ಪ್ರದರ್ಶನಕ್ಕಿಲ್ಲ ಸ್ಟುಡಿಯೊ

ಅನುದಾನ ಒದಗಿಸದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ l 5 ವರ್ಷವಾದರೂ ಪೂರ್ಣವಾಗದ ಕಾಮಗಾರಿ

ವರುಣ ಹೆಗಡೆ
Published 2 ಫೆಬ್ರುವರಿ 2023, 19:56 IST
Last Updated 2 ಫೆಬ್ರುವರಿ 2023, 19:56 IST
ಕನ್ನಡ ಭವನ
ಕನ್ನಡ ಭವನ   

ಬೆಂಗಳೂರು: ಗ್ರಾಫಿಕ್ ಕಲಾಕೃತಿಗಳ ರಚನೆ, ಪ್ರದರ್ಶನಗಳಿಗೆ ವೇದಿಕೆ ಕಲ್ಪಿಸಬೇಕಿದ್ದ ಗ್ರಾಫಿಕ್ ಸ್ಟುಡಿಯೊ, ಐದು ವರ್ಷ ಕಳೆದರೂ ಕಾರ್ಯಾರಂಭ ಮಾಡಿಲ್ಲ. ಈಗ ಅನುದಾನದ ಕೊರತೆಯಿಂದ ನಿರ್ಮಾಣ ಕಾಮಗಾರಿಯು ಸ್ಥಗಿತಗೊಂಡಿದೆ.

ಕರ್ನಾಟಕ ಲಲಿತಕಲಾ ಅಕಾಡೆಮಿಗೆ ಸೇರಿದ್ದ ಈ ಸ್ಟುಡಿಯೊದ ಕಟ್ಟಡ ಮಲ್ಲತ್ತಹಳ್ಳಿ ಕಲಾಗ್ರಾಮದಲ್ಲಿತಲೆಯೆತ್ತಿದೆ. ಎಂ.ಎಸ್.ಮೂರ್ತಿ ಅವರು ಅಕಾಡೆಮಿ ಅಧ್ಯಕ್ಷರಾಗಿದ್ದಅವಧಿಯಲ್ಲಿ ಈ ಯೋಜನೆಗೆ ಅನುಮೋದನೆ ದೊರೆತು, 2017ರ ಆಗಸ್ಟ್‌ ತಿಂಗಳಲ್ಲಿ ಅಂದಿನ ಕನ್ನಡ ಮತ್ತು ಸಂಸ್ಕೃತಿ ಸಚಿವೆ ಉಮಾಶ್ರೀ ಶಂಕುಸ್ಥಾಪನೆ ನೆರವೇರಿಸಿದ್ದರು.

ಇದೀಗ ಕಟ್ಟಡ ನಿರ್ಮಾಣವಾಗಿದ್ದು, ಅಂತಿಮ ಸ್ಪರ್ಶಕ್ಕೆ ಅನುದಾನದ ಕೊರತೆ ಎದುರಾಗಿದೆ. ₹1 ಕೋಟಿ
ಹೆಚ್ಚುವರಿ ಅನುದಾನ ನೀಡುವಂತೆ ಅಕಾಡೆಮಿಯ ನಿಕಟಪೂರ್ವ ಅಧ್ಯಕ್ಷ ಡಿ.ಮಹೇಂದ್ರ ಅವರು ಇಲಾಖೆಗೆ ಪತ್ರ ಬರೆದು
ಒತ್ತಾಯಿಸಿದ್ದರು. ಅನುದಾನcಬಿಡುಗಡೆಯಾಗದಿದ್ದರಿಂದ ಈಗ ಕಾಮಗಾರಿ ನನೆಗುದಿಗೆ ಬಿದ್ದಿದೆ.

ADVERTISEMENT

ಗ್ರಾಫಿಕ್ ಸ್ಟುಡಿಯೊದ ನಿರ್ಮಾಣಕ್ಕೆ ಸರ್ಕಾರ ಮೊದಲ ಹಂತದಲ್ಲಿ 2017ರಲ್ಲಿ ₹3.31 ಲಕ್ಷ ಅನುದಾನ ಬಿಡುಗಡೆ ಮಾಡಿತ್ತು. ಬಳಿಕ ಅನುದಾನ ಬಿಡುಗಡೆ ಆಗಿರಲಿಲ್ಲ. 2020ರಲ್ಲಿ ಸರ್ಕಾರ ₹ 3.33 ಕೋಟಿ ಬಿಡುಗಡೆ ಮಾಡಿತ್ತು. 2020ರ ಡಿಸೆಂಬರ್ ಅಂತ್ಯಕ್ಕೆ ಕಾಮಗಾರಿಪೂರ್ಣಗೊಳಿಸುವಂತೆ ಗುತ್ತಿಗೆದಾರರಿಗೆ ಸಂಸ್ಕೃತಿ ಇಲಾಖೆ ಸೂಚಿಸಿತ್ತು. ಆದರೆ, ಕೋವಿಡ್‌
ನಿಂದಾಗಿ ಕಾಮಗಾರಿಗೆ ಹಿನ್ನಡೆಯಾಗಿತ್ತು. ಕಳೆದ ವರ್ಷಾಂತ್ಯಕ್ಕೆ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣ
ಗೊಂಡಿದೆ. ಹೆಚ್ಚುವರಿ ಅನುದಾನ ಬಿಡುಗಡೆಯಾಗದಿದ್ದರಿಂದ ಕಟ್ಟಡಕ್ಕೆ ಬೀಗ ಹಾಕಲಾಗಿದೆ.

ಗರಿ ಸ್ಟುಡಿಯೊ ಮಾದರಿ: ಗ್ರಾಫಿಕ್ ಸ್ಟುಡಿಯೊವನ್ನು 9,846 ಚದರ ಅಡಿ ವಿಸ್ತೀರ್ಣದಲ್ಲಿ ನಿರ್ಮಿಸಿದ್ದು, ಎರಡು ಮಹಡಿ ಹೊಂದಿದೆ. ವಿನ್ಯಾಸವು ದೆಹಲಿಯ ಗರಿ ಸ್ಟುಡಿಯೊ ಮಾದರಿ ಹೊಂದಿದೆ. ನೆಲಮಹಡಿಯಲ್ಲಿ 4 ಸ್ಟುಡಿಯೊ ನಿರ್ಮಿಸಲಾಗಿದೆ. ಪ್ರತಿ ಸ್ಟುಡಿಯೊ
ದಲ್ಲಿಯೂ ಪಡಸಾಲೆ, ಉಗ್ರಾಣ, ಶೌಚಾಲಯ ಇದೆ. ‘ಸ್ಟುಡಿಯೊ ಕಾಮಗಾರಿ ಶೇ80 ರಷ್ಟಆಗಿದೆ. ಕಟ್ಟಡ ಕಾಮಗಾರಿ ಮುಗಿದಿದೆ. ಇಲಾಖೆ ವಾರ್ಷಿಕ ಕ್ರಿಯಾ ಯೋಜನೆಯಲ್ಲಿ ಹಣ ಮೀಸಲಿಡದ ಪರಿಣಾಮ ಕಾಮಗಾರಿ ಈಗ ಸ್ಥಗಿತಗೊಂಡಿದೆ. ಮುಂಬರುವ ಕ್ರಿಯಾ ಯೋಜನೆಯಲ್ಲಿ ಪ್ರತ್ಯೇಕವಾಗಿ ₹1ಕೋಟಿ ಮೀಸಲಿಡಬೇಕು’ ಎಂದು ಡಿ.ಮಹೇಂದ್ರ ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.