ADVERTISEMENT

ಉಪನಗರ ರೈಲು: ಬೋಗಿ ಪೂರೈಸಲು ಬಿಡ್‌

​ಪ್ರಜಾವಾಣಿ ವಾರ್ತೆ
Published 17 ಮೇ 2023, 20:42 IST
Last Updated 17 ಮೇ 2023, 20:42 IST
ಉಪನಗರ ರೈಲು ಮಾರ್ಗದ ಕಾರಿಡಾರ್‌–2 ಕಾಮಗಾರಿ ಜಾಲಹಳ್ಳಿ ಬಳಿ ಆರಂಭವಾಗಿರುವುದು
ಉಪನಗರ ರೈಲು ಮಾರ್ಗದ ಕಾರಿಡಾರ್‌–2 ಕಾಮಗಾರಿ ಜಾಲಹಳ್ಳಿ ಬಳಿ ಆರಂಭವಾಗಿರುವುದು   

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಗೆ (ಬಿಎಸ್‌ಆರ್‌ಪಿ) ಬೋಗಿಗಳನ್ನು ಪೂರೈಸಲು ಮೂರು ಕಂಪನಿಗಳು ಬಿಡ್‌ ಮಾಡಿವೆ.

ಕೆ-ರೈಡ್ (ಕರ್ನಾಟಕ ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಯಮಿತ) ಈ ಬಗ್ಗೆ ಕಂಪನಿಗಳಿಂದ ಬಿಡ್‌ ಆಹ್ವಾನಿಸಿತ್ತು. ಮೂರು ಆಸಕ್ತ ಬಿಡ್ಡರ್‌ಗಳು ಸ್ಪಂದಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಿಎಎಫ್, ಭಾರತ್ ಹೆವಿ ಎಲೆಕ್ಟ್ರಿಕಲ್ಸ್ ಲಿಮಿಟೆಡ್ (ಬಿಎಚ್‌ಇಎಲ್ ಮತ್ತು ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ (ಬಿಇಎಂಎಲ್) ಕಂಪನಿಗಳು ಆಸಕ್ತಿಯನ್ನು ವ್ಯಕ್ತಪಡಿಸಿವೆ. ಮೇ 16ರಂದು ಬಿಡ್‌ದಾರರ ಸಮಕ್ಷಮದಲ್ಲಿ ಟೆಂಡರ್ ತೆರೆಯಲಾಗಿದೆ ಎಂದು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.