ADVERTISEMENT

ಸ್ವಾಭಿಮಾನಿ ಪುಸ್ತಕ ಬಹುಮಾನ ಪ್ರಕಟ

​ಪ್ರಜಾವಾಣಿ ವಾರ್ತೆ
Published 25 ಮೇ 2021, 21:26 IST
Last Updated 25 ಮೇ 2021, 21:26 IST

ಬೆಂಗಳೂರು: ಸ್ವಾಭಿಮಾನಿ ಕರ್ನಾಟಕ ವೇದಿಕೆ ನೀಡುವ ‘ಸ್ವಾಭಿಮಾನಿ ಪುಸ್ತಕ ಬಹುಮಾನ’ ಪ್ರಕಟವಾಗಿದ್ದು, ಡಾ. ಮಿರ್ಜಾ ಬಷೀರ್ ಅವರ ‘ಹಾರುವ ಹಕ್ಕಿ ಮತ್ತು ಇರುವೆ’ ಕಥಾ ಸಂಕಲನ ಸೇರಿದಂತೆ ಐದು ಕೃತಿಗಳು ಆಯ್ಕೆಯಾಗಿವೆ.

ಮಂಜುಳಾ ಹಿರೇಮಠ ಅವರ ‘ಗಾಯಗೊಂಡವರಿಗೆ’ ಕವನ ಸಂಕಲನ, ಸ್ಮಿತಾ ಅಮೃತರಾಜ್ ಅವರ ‘ಒಂದು ವಿಳಾಸದ ಹಿಂದೆ’ ಪ್ರಬಂಧ ಸಂಕಲನ, ಜಾಣಗೆರೆ ವೆಂಕಟರಾಮಯ್ಯ ಅವರ ‘ಜಲಯುದ್ಧ’ ಕಾದಂಬರಿ, ಕಾ.ತ. ಚಿಕ್ಕಣ್ಣ ಅವರ ‘ಕಣ್ಣಂಚಿನ ನೆರಳು’ ಕೃತಿಯು ಬಹುಮಾನಕ್ಕೆ ಭಾಜನವಾಗಿದೆ.

ವೇದಿಕೆಯು 20ನೇ ವಾರ್ಷಿಕೋತ್ಸದ ಪ್ರಯುಕ್ತ ಏರ್ಪಡಿಸಿದ್ದ ಸ್ಪರ್ಧೆಗೆ 2020ರಲ್ಲಿ ಪ್ರಕಟವಾದ 150ಕ್ಕೂ ಅಧಿಕ ಕೃತಿಗಳು ಬಂದಿದ್ದವು. ಅದರಲ್ಲಿ ಐದು ಪುಸ್ತಕಗಳನ್ನು ಆಯ್ಕೆ ಮಾಡಲಾಗಿದೆ. ಪ್ರಶಸ್ತಿಯು ತಲಾ ₹ 5 ಸಾವಿರ ನಗದು ಬಹುಮಾನ ಒಳಗೊಂಡಿದೆ.

ADVERTISEMENT

ವಿಮರ್ಶಕ ಎಸ್.ಆರ್. ವಿಜಯಶಂಕರ, ಲೇಖಕ ದ್ವಾರನಕುಂಟೆ ಪಾತಣ್ಣ ಹಾಗೂ ಪತ್ರಕರ್ತ ರಘುನಾಥ ಚ.ಹ. ತೀರ್ಪುಗಾರರಾಗಿದ್ದರು. ಕೋವಿಡ್‌ ನಿಯಂತ್ರಣಕ್ಕೆ ಬಂದ ಬಳಿಕ ಬೆಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಆಯೋಜಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.