ADVERTISEMENT

ಎಚ್‌ಎಸ್‌ಆರ್‌ ಬಡಾವಣೆ ವಿವೇಕಾನಂದ ಜಯಂತಿ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2019, 19:30 IST
Last Updated 2 ಫೆಬ್ರುವರಿ 2019, 19:30 IST
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಉದ್ಯಮಿ ಶ್ರೀನಿವಾಸರೆಡ್ಡಿ, ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ, ಶಾಸಕ ಸತೀಶ್ ರೆಡ್ಡಿ, ತತ್ವನಂದರೂಪ ಸ್ವಾಮಿ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ಇದ್ದಾರೆ.
ಕಾರ್ಯಕ್ರಮದಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರ ರಾವ್, ಉದ್ಯಮಿ ಶ್ರೀನಿವಾಸರೆಡ್ಡಿ, ಪಾಲಿಕೆ ಸದಸ್ಯ ಗುರುಮೂರ್ತಿ ರೆಡ್ಡಿ, ಶಾಸಕ ಸತೀಶ್ ರೆಡ್ಡಿ, ತತ್ವನಂದರೂಪ ಸ್ವಾಮಿ, ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್ ಇದ್ದಾರೆ.   

ಬೆಂಗಳೂರು: ‘ಸ್ವಾಮಿ ವಿವೇಕಾನಂದರು ದೇಶವನ್ನು ಅತೀವವಾಗಿ ಪ್ರೀತಿಸುವ ಧನಾತ್ಮಕ ರಾಷ್ಟ್ರ ಪ್ರೇಮಿಯಾಗಿದ್ದರು’ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮುರಳೀಧರರಾವ್ ಹೇಳಿದರು.

ಸ್ವದೇಶಿ ಆಂದೋಲನ ಸಂಸ್ಥೆ ವತಿಯಿಂದ ಶನಿವಾರ ಎಚ್ಎಸ್ಆರ್ ಬಡಾವಣೆಯಲ್ಲಿ ಹಮ್ಮಿಕೊಂಡಿದ್ದ ವಿವೇಕಾನಂದರ ಜಯಂತಿಯಲ್ಲಿ ಅವರು ಮಾತನಾಡಿದರು.

‘ಭಾರತಮಾತೆಗೆ ಅಪಮಾನ ಮಾಡುವ ಪ್ರವೃತ್ತಿಗಳು ಹೆಚ್ಚುತ್ತಿರುವುದು ಆತಂಕಕಾರಿ. ಹೀಗಾಗಿ ದೇಶಪ್ರೇಮ ಹಾಗೂ ರಾಷ್ಟ್ರೀಯತೆ ವಿಚಾರಗಳ ಬಗ್ಗೆ ಯುವಜನತೆಯಲ್ಲಿ ಅರಿವು ಮೂಡಿಸಬೇಕಾದ ಅಗತ್ಯವಿದೆ. ವಿವೇಕಾನಂದರ ವಿಚಾರಧಾರೆಯೂ ಇದೇ ಆಗಿತ್ತು’ ಎಂದರು.

ADVERTISEMENT

ಶಾಸಕ ಸತೀಶ್ ರೆಡ್ಡಿ ಮಾತನಾಡಿ, ‘ಜಯಂತಿ ಆಚರಿಸುವುದೆಂದರೆ ವಿವೇಕಾನಂದರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವುದೇ ಆಗಿದೆ. ಆಚರಣೆಗಳು ತಾಂತ್ರಿಕವಾಗಿರದೇ ಅರ್ಥಪೂರ್ಣವಾಗಿರಬೇಕು’ ಎಂದರು.

ಅದಮ್ಯ ಚೇತನ ಸಂಸ್ಥೆಯ ತೇಜಸ್ವಿನಿ ಅನಂತಕುಮಾರ್, ಹಲಸೂರು ಮಠದ ತತ್ವನಂದರೂಪ ಸ್ವಾಮಿ, ಸಾಯಿರಾಂ ಶಿಕ್ಷಣ ಸಂಸ್ಥೆ ಮುಖ್ಯಸ್ಥ ಶ್ರೀನಿವಾಸರೆಡ್ಡಿ, ಪಾಲಿಕೆ ಸದಸ್ಯ ಗುರುಮೂರ್ತಿರೆಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.