ADVERTISEMENT

ಟಿಎಚ್‌ಇ ರ‍್ಯಾಂಕಿಂಗ್‌: ಕೆಐಐಟಿ–ಡಿಯು ಉತ್ತಮ ಸಾಧನೆ

​ಪ್ರಜಾವಾಣಿ ವಾರ್ತೆ
Published 22 ಜೂನ್ 2025, 15:47 IST
Last Updated 22 ಜೂನ್ 2025, 15:47 IST
   

ಬೆಂಗಳೂರು: ಭುವನೇಶ್ವರದ ಪಾಟಿಯಾದಲ್ಲಿರುವ ಕೆಐಐಟಿ–ಡೀಮ್ಡ್‌ ವಿಶ್ವವಿದ್ಯಾಲಯ (ಕೆಐಐಟಿ–ಡಿಯು) ‘ಟೈಮ್ಸ್ ಹೈಯರ್ ಎಜುಕೇಶನ್(ಟಿಎಚ್‌ಇ)ಇಂಪ್ಯಾಕ್ಟ್ ಗ್ಲೋಬಲ್ ರ‍್ಯಾಂಕ್‌ – 2025’ರಲ್ಲಿ ಉತ್ತಮ ಸಾಧನೆ ಮಾಡಿದೆ.

ಎಚ್‌ಟಿಇ ಇಂಪ್ಯಾಕ್ಟರ್‌ ಗ್ಲೋಬಲ್ ರ‍್ಯಾಂಕ್‌ನ ಮೂರು ವಿಭಾಗಗಳಲ್ಲಿ ಕೆಐಐಟಿ ಉತ್ತಮ ರ‍್ಯಾಂಕ್ ಪಡೆದಿದೆ. ಭಾರತದಲ್ಲಿ ಅಸಮಾನತೆ ಹೋಗಲಾಡಿಸುವ ಹಾಗೂ ಶಾಂತಿ, ನ್ಯಾಯ ಮತ್ತು ಶಕ್ತಿಯುತ ಸಂಸ್ಥೆಗಳ ನಿರ್ಮಾಣ ಹಾಗೂ ಶುದ್ಧ ಇಂಧನ ನೀಡುವಲ್ಲಿ ಪ್ರಥಮ ಸ್ಥಾನ ಪಡೆದಿದೆ. ಗುಣಮಟ್ಟದ ಶಿಕ್ಷಣ ವಿಭಾಗದಲ್ಲಿ ಮೂರನೇ ಸ್ಥಾನ ಪಡೆದಿದೆ’ ಎಂದು ವಿಶ್ವವಿದ್ಯಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

‘ನಮ್ಮ ವಿಶ್ವವಿದ್ಯಾಲಯವು ಎಲ್ಲ ವಿಭಾಗಗಳಲ್ಲೂ ಉತ್ತಮ ಸಾಧನೆ ಮಾಡಿದೆ’ ಎಂದು ಕೆಐಐಟಿ ಮತ್ತು ಕೆಐಎಸ್‌ಎಸ್‌ನ ಸಂಸ್ಥಾಪಕ ಡಾ. ಅಚ್ಯುತ ಸಮಂತ ಸಂತಸ ವ್ಯಕ್ತಪಡಿಸಿದ್ದಾರೆ.

ADVERTISEMENT

ಟೈಮ್ಸ್‌ ಹೈಯರ್ ಎಜುಕೇಷನ್ ಈ ವರ್ಷ ನಡೆಸಿದ ಇಂಪ್ಯಾಕ್ಟ್ ರ್‍ಯಾಂಕಿಂಗ್ ಪ್ರಕ್ರಿಯೆಯಲ್ಲಿ 130 ದೇಶಗಳಿಂದ 2,400ಕ್ಕೂ ಹೆಚ್ಚು ವಿಶ್ವವಿದ್ಯಾಲಯಗಳು ಭಾಗವಹಿಸಿದ್ದವು. ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ (ಎಸ್‌ಡಿಜಿ) ವಿಶ್ವವಿದ್ಯಾಲಯಗಳ ಕೊಡುಗೆಗಳು ಮತ್ತು ಸಮಗ್ರ ಮೌಲ್ಯಮಾಪನ ಮತ್ತು ಸುಸ್ಥಿರತೆಗೆ ಸಂಶೋಧನೆ, ಮುಂದಾಳತ್ವ, ತಲುಪುವ ವ್ಯಾಪ್ತಿ, ಬೋಧನೆಗಳ ಬದ್ಧತೆಯನ್ನು ಆಧರಿಸಿ ರ‍್ಯಾಂಕ್ ನೀಡಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.