ADVERTISEMENT

ನಾಳೆ ‘ಚಿನ್ನ ಚಿತ್ತಾರ’

kasaragodu chinna

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2018, 19:30 IST
Last Updated 7 ಸೆಪ್ಟೆಂಬರ್ 2018, 19:30 IST
ಕಾಸರಗೋಡು ಚಿನ್ನಾ
ಕಾಸರಗೋಡು ಚಿನ್ನಾ   

ಹೊರನಾಡಿನಲ್ಲಿದ್ದೂ ಕನ್ನಡ ನಾಡು–ನುಡಿ ಸಂಸ್ಕೃತಿಗಳಿಗಾಗಿ ತುಡಿಯುತ್ತಿರುವವರು ಕಾಸರಗೋಡು ಚಿನ್ನಾ. ಕರ್ನಾಟಕ ಮತ್ತು ಕೇರಳದ ಸಾಂಸ್ಕೃತಿಕ ಕೊಂಡಿ. ನಟನೆ, ನಿರ್ದೇಶನ, ಸಂಗೀತ, ಸಾಹಿತ್ಯ, ಭಾಷಾಂತರ, ಸಂಘಟನೆ, ರಂಗಭೂಮಿ, ಸಿನಿಮಾ ಹೀಗೆ ಕಲೆಯ ಎಲ್ಲಾ ಆಯಾಮಗಳಿಗೆ ತೆರೆದುಕೊಂಡಿರುವ ಅಪರೂಪದ ವ್ಯಕ್ತಿತ್ವ ಅವರದ್ದು. ಚಿನ್ನಾ ಅವರ ಸ್ನೇಹ ಸುಗಂಧಕ್ಕೆ ಮಾರುಹೋಗದವರಿಲ್ಲ. ಕನ್ನಡ ನಾಡಿನಿಂದ ಕೇರಳದ ಕಾಸರಗೋಡಿಗೆ ಹೋದವರು ಚಿನ್ನಾ ಅವರ ಆತಿಥ್ಯಕ್ಕೆ ಮನಸೋಲದಿರದೇ ಇರಲಾರರು.

60ರ ಕಾಲಘಟ್ಟದಲ್ಲಿರುವ ಚಿನ್ನಾ ಅವರ ಸ್ನೇಹಕ್ಕೆ ರಾಜಧಾನಿಯಲ್ಲಿ ಸೆ. 9ರಂದು ಗೆಳೆಯರು ಅಭಿನಂದನೆ ಮತ್ತು ರಂಗಗೌರವ ಆಯೋಜಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT