ADVERTISEMENT

ನಗರದಲ್ಲಿ ಪ್ರತಿಭಟನೆ ಬಿಸಿ: ಸಂಚಾರ ದಟ್ಟಣೆ ಕಿರಿಕಿರಿ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2018, 19:44 IST
Last Updated 19 ನವೆಂಬರ್ 2018, 19:44 IST

ಬೆಂಗಳೂರು: ಸಾಲಮನ್ನಾ ಮಾಡಲು ಒತ್ತಾಯಿಸಿ ನಗರದಲ್ಲಿ ಸೋಮವಾರ ರೈತರು ಪ್ರತಿಭಟನೆ ನಡೆಸಿದ್ದರಿಂದಾಗಿ, ಸ್ವಾತಂತ್ರ್ಯ ಉದ್ಯಾನದ ಸುತ್ತಮುತ್ತ ಸಂಚಾರ ದಟ್ಟಣೆ ಉಂಟಾಯಿತು.

ಮೆಜೆಸ್ಟಿಕ್‌ಗೆ ಬೆಳಿಗ್ಗೆ ಬಂದಿದ್ದ ರೈತರು, ಅಲ್ಲಿಂದ ಸ್ವಾತಂತ್ರ್ಯ ಉದ್ಯಾನದವರೆಗೂ ನಡೆದುಕೊಂಡೇ ಹೋದರು. ಅದೇ ವೇಳೆ ಶೇಷಾದ್ರಿ ಮೇಲ್ಸೇತುವೆಯಲ್ಲಿ ವಾಹನ ಸಂಚಾರ ಬಂದ್ ಮಾಡಲಾಯಿತು. ಮೆರವಣಿಗೆ ಹಿಂದೆಯೇ ಬರುತ್ತಿದ್ದ ವಾಹನಗಳು, ದಟ್ಟಣೆಯಲ್ಲಿ ಸಿಲುಕಿ ಸಾಲುಗಟ್ಟಿ ನಿಲ್ಲಬೇಕಾಯಿತು. ಶೇಷಾದ್ರಿಪುರ ಮೇಲ್ಸೇತುವೆ, ಮೆಜೆಸ್ಟಿಕ್, ಗಾಂಧಿನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ದಟ್ಟಣೆ ಕಂಡುಬಂತು.

ಉದ್ಯಾನದ ಎದುರಿನ ರಸ್ತೆಯಲ್ಲೇ ರೈತರು ಕುಳಿತಿದ್ದರಿಂದ, ಆ ಮಾರ್ಗದಲ್ಲಿ ಸಂಚರಿಸಬೇಕಿದ್ದ ವಾಹನಗಳ ಮಾರ್ಗ ಬದಲಾವಣೆ ಮಾಡಲಾಯಿತು. ಯಶವಂತಪುರ, ಮಾಗಡಿ ರಸ್ತೆ, ಮೆಜೆಸ್ಟಿಕ್‌ನಿಂದ ಬಂದ ವಾಹನಗಳನ್ನು ರೇಸ್‌ಕೋರ್ಸ್‌ ರಸ್ತೆ ಮೂಲಕ ಮುಂದಕ್ಕೆ ಕಳುಹಿಸಲಾಯಿತು. ಎಲ್ಲ ಕಡೆಯೂ ವಾಹನಗಳು ನಿಧಾನಗತಿಯಲ್ಲೇ ಸಾಗಿದವು.

ADVERTISEMENT

ಕಾಗೆ ಮರಿ ರಕ್ಷಣೆ: ರೈತರ ಪ್ರತಿಭಟನೆ ನಡೆಯುತ್ತಿದ್ದ ವೇಳೆಯಲ್ಲೇ ಉದ್ಯಾನದ ಮರವೊಂದರಲ್ಲಿ ಪ್ಲಾಸ್ಟಿಕ್ ದಾರಕ್ಕೆ ಕಾಗೆ ಮರಿಯೊಂದು ಸಿಲುಕಿಕೊಂಡಿತ್ತು. ಅಗ್ನಿಶಾಮಕ ದಳದ ಸಿಬ್ಬಂದಿ, ದಾರವನ್ನು ಬಿಡಿಸಿ ಮರಿಯನ್ನು ರಕ್ಷಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.