ಪ್ರಾತಿನಿಧಿಕ ಚಿತ್ರ
ಬೆಂಗಳೂರು: ಮಹದೇವಪುರ ವಲಯದ ಎಇಸಿಎಸ್ ಲೇಔಟ್‌ನಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ಅನಧಿಕೃತವಾಗಿ ನಿರ್ಮಿಸಿದ್ದ ಕಟ್ಟಡದ ಭಾಗಗಳನ್ನು ತೆರವುಗೊಳಿಸಲಾಯಿತು ಎಂದು ವಲಯ ಆಯುಕ್ತ ರಮೇಶ್ ತಿಳಿಸಿದರು.
ಎಇಸಿಎಸ್ ಲೇಔಟ್‌ನ ಸಿ-ಬ್ಲಾಕ್ 1ನೇ ಮುಖ್ಯರಸ್ತೆಯಲ್ಲಿ ನಿವೇಶನ ಸಂ. 735ರ ಮಾಲೀಕರಾದ ಭಾಸ್ಕರ್ ಅವರು 38 x 59 ಅಡಿ ವಿಸ್ತೀರ್ಣದಲ್ಲಿ ನಕ್ಷೆ ಮಂಜೂರಾತಿ ಪಡೆಯದೆ ನೆಲಮಾಳಿಗೆ ಮತ್ತು ಆರು ಅಂತಸ್ತು ಕಟ್ಟಡ ನಿರ್ಮಾಣ ಮಾಡಿದ್ದರು. ಬಿಬಿಎಂಪಿ– 2020 ಕಾಯ್ದೆಯಡಿ ತಾತ್ಕಾಲಿಕ ಆದೇಶ ಹಾಗೂ ಸ್ಥಿರೀಕರಣ ಆದೇಶದ ನೋಟೀಸ್‌ಗಳನ್ನು ಜಾರಿ ಮಾಡಿದ್ದರೂ, ಕಟ್ಟಡ ನಿರ್ಮಾಣ ಕಾರ್ಯ ನಿಲ್ಲಿಸಿರಲಿಲ್ಲ ಎಂದು ಮಾಹಿತಿ
ನೀಡಿದರು.
ಹೆಚ್ಚುವರಿಯಾಗಿ ನಿರ್ಮಿಸಿರುವ ಎರಡು ಮಹಡಿಗಳ ತೆರವಿಗೆ ಮೂರು ಕೊರೆಯುವ ಯಂತ್ರಗಳು ಹಾಗೂ 10 ಸಿಬ್ಬಂದಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ. ತೆರವಿನ ವೆಚ್ಚವನ್ನು ಕಟ್ಟಡ ಮಾಲೀಕರಿಂದ ವಸೂಲಿ ಮಾಡಲಾಗುವುದು ಎಂದು
ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.