ADVERTISEMENT

ಉತ್ತರೋತ್ತಮ ಉತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 12 ಜೂನ್ 2025, 19:38 IST
Last Updated 12 ಜೂನ್ 2025, 19:38 IST
ಯಶವಂತ ಸರದೇಶಪಾಂಡೆ
ಯಶವಂತ ಸರದೇಶಪಾಂಡೆ   

ಬೆಂಗಳೂರು: ಹೋಟೆಲ್ ನಳಪಾಕ, ವಂದೇ ಕರ್ನಾಟಕ ಹಾಗೂ ಹುಬ್ಬಳ್ಳಿಯ ಗುರು ಇನ್‌ಸ್ಟಿಟ್ಯೂಟ್ ಜಂಟಿಯಾಗಿ ಇದೇ 14ರಂದು ಬೆಳಿಗ್ಗೆ 10ರಿಂದ ರಾತ್ರಿ 10ರವರೆಗೆ ಕೋಣನಕುಂಟೆಯ ಪ್ರೆಸ್ಟೀಜ್ ಸೆಂಟರ್ ಫಾರ್ ಪರ್ಫಾರ್ಮಿಂಗ್ ಆರ್ಟ್ಸ್‌ನಲ್ಲಿ ‘ಉತ್ತರೋತ್ತಮ ಉತ್ಸವ’ ಹಮ್ಮಿಕೊಂಡಿದೆ.

ಉತ್ತರ ಕರ್ನಾಟಕದ ಹಾಡು, ಕುಣಿತ, ನಾಟಕ, ಸಿನೆಮಾ ಮತ್ತ ಊಟ ಒಂದೇ ಸೂರಿನಡಿಯಲ್ಲಿ ದೊರೆಯಲಿದೆ. ಈ ಸಾಂಸ್ಕೃತಿಕ ಉತ್ಸವದಲ್ಲಿ ಐಶ್ವರ್ಯ ದೇಸಾಯಿ ಅವರಿಂದ ಹಿಂದೂಸ್ಥಾನಿ ಗಾಯನ, ಯಶವಂತ ಸರದೇಶಪಾಂಡೆ ನಿರ್ದೇಶನ ಮತ್ತು ಅಭಿನಯದ ನಾಟಕ ‘ಅಮರ ಮಧುರ ಪ್ರೇಮ’, ಸ್ಫೂರ್ತಿ ಜೋಶಿಯವರ ಕಥಕ್‌ ನೃತ್ಯ, ಸಂಗೀತ ಕಟ್ಟಿ ಕುಲಕರ್ಣಿ ಅವರಿಂದ ಸಂಗೀತ ವೈವಿಧ್ಯ ಕಾರ್ಯಕ್ರಮ ನಡೆಯಲಿದೆ.

ಗುರು ಇನ್‌ಸ್ಟಿಟ್ಯೂಟ್‌ನಿಂದ ‘ರಾಶಿಚಕ್ರ’ ಏಕವ್ಯಕ್ತಿ ಹಾಸ್ಯ ರಂಗಪ್ರಯೋಗ ಇರಲಿದೆ. ಅತಿಥಿಗಳಾಗಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ವಿಧಾನ ಪರಿಷತ್‌ ಸದಸ್ಯೆ ಉಮಾಶ್ರೀ, ನಟರಾದ ರವಿಚಂದ್ರನ್, ದೊಡ್ಡಣ್ಣ, ವಾಗ್ಮಿ ಗುರುರಾಜ ಕರಜಗಿ, ವೈದ್ಯ ಡಾ. ವಿವೇಕ ಜವಳಿ, ವಿಶ್ವವಾಣಿ ಸಂಪಾದಕ ವಿಶ್ವೇಶ್ವರ ಭಟ್, ಉದ್ಯಮಿಗಳಾದ ಅಶೋಕ ಖೇಣಿ, ಗೋವಿಂದ ಜೋಶಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.