ADVERTISEMENT

1,122 ಗಾಯಕರಿಂದ ವಚನ ಗಾಯನ

​ಪ್ರಜಾವಾಣಿ ವಾರ್ತೆ
Published 5 ಫೆಬ್ರುವರಿ 2025, 16:08 IST
Last Updated 5 ಫೆಬ್ರುವರಿ 2025, 16:08 IST
   

ಬೆಂಗಳೂರು: ರಂಗ ಸಂಸ್ಥಾನದ ವತಿಯಿಂದ 1,122 ಗಾಯಕರಿಂದ ‘ವಚನ ಗಾಯನ ವೈಭವ’ವನ್ನು ಫೆಬ್ರುವರಿ 7ರಂದು ಆಯೋಜಿಸಲಾಗಿದೆ.

ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿರುವ ಸಂಸ ಬಯಲು ರಂಗ ಮಂದಿರದಲ್ಲಿ ನಡೆಯುವ ‘ವಚನ ಗಾಯನ ವೈಭವ’ದಲ್ಲಿ ಹನ್ನೊಂದು ವಚನಗಳನ್ನು ಏಕಕಾಲದಲ್ಲಿ ಸಮೂಹ ಗಾಯನದ ಮೂಲಕ ಪ್ರಸ್ತುತಪಡಿಸಲಾಗುತ್ತದೆ ಎಂದು ರಂಗ ಸಂಸ್ಥಾನದ ಅಧ್ಯಕ್ಷ ಬಂಡ್ಲಹಳ್ಳಿ ವಿಜಯಕುಮಾರ ತಿಳಿಸಿದ್ದಾರೆ.

ವಚನಗಳಿಗೆ ಎಚ್‌.ಕೆ. ನಾರಾಯಣ, ವಿಜಯಕುಮಾರ, ವೆಂಕಟೇಶ್‌ ಅಲ್ಕೋಡ್‌ ಹಾತೂ ಅರ್ಚನಾ ಭೋಜ್‌ ಅವರು ರಾಗ ಸಂಯೋಜನೆ ಮಾಡಿದ್ದಾರೆ. ತರಳಬಾಳು ಶಾಖಾ ಮಠದ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದೆ ಎಂದು ಅವರು ಹೇಳಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.