ADVERTISEMENT

ಪ್ರೇಮಿಗಳ ದಿನಾಚರಣೆಯಲ್ಲಿ ಶ್ವಾನಗಳ ಪ್ರೀತಿ ಪ್ರೇಮ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2021, 21:52 IST
Last Updated 14 ಫೆಬ್ರುವರಿ 2021, 21:52 IST
ಶ್ವಾನಪ್ರೇಮ ದಿನಾಚರಣೆಯಲ್ಲಿ ಕೇಕ್ ಕತ್ತರಿಸುತ್ತಿರುವುದು.
ಶ್ವಾನಪ್ರೇಮ ದಿನಾಚರಣೆಯಲ್ಲಿ ಕೇಕ್ ಕತ್ತರಿಸುತ್ತಿರುವುದು.   

ಬೊಮ್ಮನಹಳ್ಳಿ:ಬನ್ನೇರುಘಟ್ಟ ಸಮೀಪದ ಜಂಬೂಸವಾರಿ ದಿಣ್ಣೆಯಲ್ಲಿರುವ ಫೆಟಲ್ ಫಿಟ್‍ನೆಸ್ ಆ್ಯಂಡ್ ಸ್ಟುಡಿಯೋ (ಶ್ವಾನ ತರಬೇತಿ ಸಂಸ್ಥೆ) ಹಾಗೂ ಕೆ9 ಗುರುಕು ಸಂಸ್ಥೆ ಜಂಟಿಯಾಗಿ ‘ಶ್ವಾನಗಳ ಪ್ರೇಮ ದಿನ’ ಆಚರಿಸಿದೆ.

ಮುಧೋಳ ನಾಯಿ ಸೇರಿದಂತೆ ಇಂಗ್ಲೆಂಡ್, ಜರ್ಮನ್ ದೇಶಗಳ 80ಕ್ಕೂ ಹೆಚ್ಚು ವಿವಿಧ ತಳಿಯ ಶ್ವಾನಗಳು ಭಾಗವಹಿಸಿದ್ದವು. ಶ್ವಾನಗಳಿಗಾಗಿಯೇ ವಿಶೇಷವಾಗಿ ತಯಾರಿಸಿದ್ದ ಕೇಕ್ ಕತ್ತರಿಸಿ, ದಿನಾಚರಣೆಗೆ ಚಾಲನೆ ನೀಡಲಾಯಿತು. ತಮ್ಮ ಮುದ್ದಿನ ನಾಯಿಗಳೊಂದಿಗೆ ಬಂದಿದ್ದವರು ತಮ್ಮ ನಾಯಿಗಳ ಜತೆಯಲ್ಲಿ ಆಡುವಂತಹ ಕ್ರೀಡೆಗಳನ್ನು ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT