ಕೆ.ಆರ್.ಪುರ: ಲಿಂಗರಾಜಪುರದ ಇತಿಹಾಸ ಪ್ರಸಿದ್ಧ ಶ್ರೀಸಂತಾನ ವೇಣುಗೋಪಾಲಸ್ವಾಮಿ ದೇವರ ಪುನರ್ ಪ್ರತಿಷ್ಠಾಪನೆ ಹಾಗೂ ಶ್ರೀಮುತ್ಯಾಲಮ್ಮದೇವಿಯ ನೂತನ ಶಿಲಾ ವಿಗ್ರಹದ ಪ್ರಾಣ ಪ್ರತಿಷ್ಟಾಪನಾ ಕಾರ್ಯಕ್ರಮವು ಮಹಾಕುಂಭಾಬಿಷೇಕದೊಂದಿಗೆ ಗುರುವಾರ ನಡೆಯಲಿದೆ.
ಮಂಗಳವಾರ ಸಂಜೆ ಗಣಪತಿ ಪೂಜೆ, ಸ್ವಸ್ತಿ ಪುಣ್ಯಾಹ ವಾಚನ, ಪಂಚಗವ್ಯ ಪೂರ್ವಕ ಸ್ಥಳ ಶುದ್ಧಿ, ರಕ್ಷಬಂಧನಾ, ಆಚಾರ್ಯ ಋತ್ವಿಕವರಣ, ಗಂಗಾಪೂಜೆ, ಗೋವು ಪೂಜೆ, ಯಾಗಶಾಲಾ ಪ್ರವೇಶ, ಧ್ವಜಾರೋಹಣ, ವಾಸ್ತು ರಕ್ಷೋಘ್ನ ಸುದರ್ಶನ ಹೋಮ, ಅಗೋಶಾಸ್ತ್ರ, ಪೂರ್ಣಾಹುತಿ, ಮಹಾಮಂಗಳರಾತಿ ನಡೆದವು.
ಗುರುವಾರ ಬೆಳಿಗ್ಗೆ ಕಳಶಸ್ಥಾಪನೆ, ನವಗ್ರಹ ಹೋಮ, ಪುರುಷ ಸೂಕ್ತ ಹೋಮ, ಮಹಾಲಕ್ಷ್ಮಿ ಹೋಮ, ದುರ್ಗಾಹೋಮ, ಸಂತಾನ ವೇಣುಗೋಪಾಲ ಜಪ ಮತ್ತು ಪೂರ್ಣಾಹುತಿ, ಮಹಾಮಂಗಳಾರತಿ ಸಂಜೆ ಶಾಂತಿ ಪಾಠ, ವೇದ ಪಾರಾಯಣ, ಶ್ರೀಸಂತಾನ ವೇಣುಗೋಪಾಲಸ್ವಾಮಿ ಹಾಗೂ ಶ್ರೀಮುತ್ಯಾಲಮ್ಮದೇವಿ ಮೂರ್ತಿಯ ಬಿಂಬಿಶುದ್ದಿ, ಜಲದಿವಾಸ, ಧಾನ್ಯ ದಿವಾಸ, ಸಯ್ಯಾದಿವಾಸ, ಪುಷ್ಪದಿವಾಸ, ಷೋಡಷ ಉಪಚಾರ ಪೂಜೆ ನಡೆಯಲಿದೆ.
ನಂತರ ಶ್ರೀಸಂತಾನ ವೇಣುಗೋಪಾಲಸ್ವಾಮಿ ಹಾಗೂ ಶ್ರೀಮುತ್ಯಾಲಮ್ಮದೇವಿಯ ಪ್ರಾಣ ಪ್ರತಿಷ್ಠಾಪನಾ ಕಾರ್ಯಕ್ರಮವು ನೇತ್ರೋನ್ಮಿಲನ, ಕಲಾವೃದ್ಧಿ ಹೋಮ, ಮಹಾಪೂರ್ಣಹುತಿ, ಮಹಾಕುಂಭಾಭೀಷೆಕದೊಂದಿಗೆ ನಡೆಯಲಿದೆ. ಕಾರ್ಯಕ್ರಮಕ್ಕೆ ಶ್ರೀಆದಿಚುಂಚನಗಿರಿ ಪೀಠಾಧ್ಯಕ್ಷ ನಿರ್ಮಲಾನಂದಸ್ವಾಮೀಜಿ, ಹಾಸನ ಶಾಖಾಮಠದ ಶ್ರೀಶಂಭುನಾಥ ಸ್ವಾಮೀಜಿ, ಇಂಧನ ಸಚಿವ ಕೆ.ಜೆ.ಜಾರ್ಜ್, ಸಂಸದ ಪಿ.ಸಿ.ಮೋಹನ್ ಭಾಗವಹಿಸಲಿದ್ದಾರೆ ಎಂದು ದೇವಸ್ಥಾನದ ಟ್ರಸ್ಟಿ ಪಟೇಲ್ ರವಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.