ಬೆಂಗಳೂರು: ರಾಜ್ಯದಲ್ಲೇ ಹಳೆಯ ಕಾರುಗಳಮೊದಲ ಉದ್ಯಾನ ಬೊಮ್ಮನಹಳ್ಳಿಯಲ್ಲಿ ನಿರ್ಮಾಣವಾಗಿದ್ದು ಫೆ. 27ರಂದು ಸಂಜೆ 6ಕ್ಕೆ ಉದ್ಘಾಟನೆಗೊಳ್ಳಲಿದೆ.
‘ನೂರು ಅಡಿ ಎತ್ತರದವರೆಗೆ ಜೋಡಿಸಿಟ್ಟ ವಿಂಟೇಜ್ ಕಾರುಗಳು ಈ ಪಾರ್ಕ್‌ನಲ್ಲಿ ಇರಲಿವೆ. 3ಸಾವಿರ ಜನ ಕುಳಿತುಕೊಳ್ಳಬಹುದಾದ ಬಯಲು ರಂಗಮಂದಿರವಿದೆ. ಮಕ್ಕಳಿಗೆ ಆಟವಾಡಲು ಸಮುದ್ರದ ಮರಳಿನ ಸ್ಯಾಂಡ್ಪಿಟ್ ಇಲ್ಲಿದೆ. ಹಕ್ಕಿಗಳ ಕಲವರವ, ಆಮೆಗಳು ಹಾಗೂ ಮೊಲಗಳ ಸದ್ದು ಇಲ್ಲಿ ಆಲಿಸಬಹುದು’ ಎಂದು ಬೊಮ್ಮನಹಳ್ಳಿ ಬಿಬಿಎಂಪಿ ಸದಸ್ಯ ರಾಮ್ಮೋಹನರಾಜು ಹೇಳಿದರು.
‘ಬಳಕೆಯಾಗದೇ ಇದ್ದ ಜಾಗವನ್ನು ಇಲ್ಲಿ ಸುಂದರವಾಗಿ ರೂಪಿಸಲಾಗಿದೆ. ತೆರೆದ ಜಿಮ್ ಇಲ್ಲಿದೆ. ಶಾಸಕ ಸತೀಶ್ರೆಡ್ಡಿ, ಸಂಸದರಾಗಿದ್ದ ದಿವಂಗತ ಅನಂತ ಕುಮಾರ್ಅವರ ಸಹಕಾರದಿಂದ ಇದು ಸಾಧ್ಯವಾಗಿದೆ’ ಎಂದು ಅವರು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರಾದ ಆರ್. ಅಶೋಕ, ಸತೀಶ್ ರೆಡ್ಡಿ, ಬಿಬಿಎಂಪಿ ಮೇಯರ್ ಗಂಗಾಂಬಿಕೆ ಭಾಗವಹಿಸಲಿದ್ದಾರೆ ಎಂದರು.
**
* 100 ಅಡಿ ಎತ್ತರದ ವಿಂಟೇಜ್ ಕಾರ್‌ಗಳ ಕಂಬ
* ಬಯಲು ರಂಗ ಮಂದಿರ
* ಕನ್ನಡ ಅಕ್ಷರಗಳ ಕಾಂಪೌಂಡ್
* ಮೇಕ್ ಇನ್ ಇಂಡಿಯಾ ಕಲಾಕೃತಿಗಳು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.