ADVERTISEMENT

‘ಸಾಧನಾಚಾರ್ಯ ಪ್ರಶಸ್ತಿ’ಗೆ ಪಿಟೀಲು ವಾದಕ ಮೈಸೂರು ಎಂ. ನಾಗರಾಜ್ ಆಯ್ಕೆ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2025, 14:40 IST
Last Updated 5 ಆಗಸ್ಟ್ 2025, 14:40 IST
ಮೈಸೂರು ನಾಗರಾಜ್‌
ಮೈಸೂರು ನಾಗರಾಜ್‌   

ಬೆಂಗಳೂರು: ರಾಜಾಜಿನಗರದ ಸ್ವರ ಸೌರಭ ಸಂಸ್ಥೆ ನೀಡುವ ಸಂಗೀತ ವಿದ್ಯಾಸಾಗರ ಆರ್.ಆರ್. ಕೇಶವಮೂರ್ತಿ ಸ್ಮಾರಕ ‘ಸಾಧನಾಚಾರ್ಯ ಪ್ರಶಸ್ತಿ’ಗೆ ಪಿಟೀಲು ವಾದಕ ಮೈಸೂರು ಎಂ. ನಾಗರಾಜ್ ಆಯ್ಕೆಯಾಗಿದ್ದಾರೆ. 

ಸಂಸ್ಥೆಯು ಇದೇ 10ರಂದು ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ಹಮ್ಮಿಕೊಂಡಿದೆ. ಅಂದು ಬೆಳಿಗ್ಗೆ 10 ಗಂಟೆಗೆ ಸುಮಾ ಸುಧೀಂದ್ರ ಹಾಗೂ ಶಫೀಕ್ ಖಾನ್ ಅವರಿಂದ ವೀಣೆ ಮತ್ತು ಸಿತಾರ್ ಜುಗಲ್‌ಬಂದಿ ನಡೆಯಲಿದೆ. ಬಳಿಕ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭದ ಅಧ್ಯಕ್ಷತೆಯನ್ನು ಶ್ಯಾಮಸುಂದರ ಶರ್ಮ ವಹಿಸುತ್ತಾರೆ. 

ಸಂಜೆ 5 ಗಂಟೆಗೆ ಸುಮಾ ಹೆಗಡೆ ಅವರಿಂದ ಸಂತೂರ್ ವಾದನ ನಡೆಯಲಿದೆ. ಸಂಜೆ 6.15ಕ್ಕೆ ಮೈಸೂರು ನಾಗರಾಜ್ ಮತ್ತು ಮೈಸೂರು ಕಾರ್ತಿಕ್ ಅವರಿಂದ ದ್ವಂದ್ವ ಪಿಟೀಲು ವಾದನ ಕಾರ್ಯಕ್ರಮ ನಡೆಯಲಿದೆ ಎಂದು ಸಂಸ್ಥೆಯ ಸಂಸ್ಥಾಪಕ ವೆಂಕಟೇಶ್ ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.