ADVERTISEMENT

ಕೋವಿಡ್‌–19: ಈ ಬಾರಿ ವರ್ಚುವಲ್‌ ದುರ್ಗಾಪೂಜೆ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 21:19 IST
Last Updated 11 ಅಕ್ಟೋಬರ್ 2020, 21:19 IST
ದುರ್ಗಾ ಮಾತೆ
ದುರ್ಗಾ ಮಾತೆ   

ಬೆಂಗಳೂರು: ನಗರದ ಸರ್ಜಾಪುರ ಮತ್ತು ಎಚ್‌ಎಸ್‌ಆರ್‌ ಬಡಾವಣೆಪ್ರದೇಶಗಳಲ್ಲಿ ಪ್ರತಿವರ್ಷ ಅದ್ದೂರಿಯಾಗಿ ದುರ್ಗಾ ಪೂಜಾ ಉತ್ಸವ ಆಯೋಜಿಸುತ್ತಿದ್ದ ಬಂಗಾಳಿ ನಿವಾಸಿಗಳ ಸಂಸ್ಥೆ ಈ ಬಾರಿ ವರ್ಚುವಲ್‌ ರೂಪದಲ್ಲಿ ಆಯೋಜಿಸಲು ನಿರ್ಧರಿಸಿದೆ.

ದುರ್ಗಾ ಪೂಜೆ ಮತ್ತು ಉತ್ತಮ ಅಲಂಕಾರ ವಿಭಾಗದಲ್ಲಿ ಸಂಸ್ಥೆಯುಮೈತ್ರಿ ಬಂಧನ್‌ ಮತ್ತು ಬೊಂಗಿಯೊ ಸಮಾಜದ ಸದಸ್ಯರಿಗೆ ಬಹುಮಾನವನ್ನೂ ನೀಡುತ್ತಿತ್ತು.ಆದರೆ, ಸರ್ಕಾರ ಕೋವಿಡ್‌ ನಿಯಂ ತ್ರಣಕ್ಕೆ ಸೂಚಿಸಿರುವ ಮಾರ್ಗಸೂಚಿಯನ್ವಯ ಈ ಬಾರಿ ಪೂಜಾ ಉತ್ಸವ ಹಮ್ಮಿಕೊಳ್ಳುತ್ತಿದ್ದು, ಆನ್‌ಲೈನ್‌ನಲ್ಲಿಯೇ ಕಾರ್ಯಕ್ರಮಗಳು ನಡೆಯಲಿವೆ ಎಂದು ಬೆಂಗಾಲಿ ಅಸೋಸಿಯೇಷನ್‌ ಫಾರ್‌ ದಿ ರೆಸಿಡೆಂಟ್ಸ್ ಆಫ್‌ ಸರ್ಜಾಪುರ ಆ್ಯಂಡ್ ಎಚ್‌ಎಸ್‌ಆರ್‌ ಏರಿಯಾ (ಬರ್ಷಾ) ಹೇಳಿದೆ.

ಡಿಜಿಟಲ್‌ ರೂಪದಲ್ಲಿ ಕಾರ್ಯಕ್ರಮ ಪ್ರಸಾರ, ಸ್ಟುಡಿಯೊ ಕಾರ್ಯಕ್ರಮಗಳು ನಡೆಯಲಿವೆ. ಇದೇ ಸಂದರ್ಭದಲ್ಲಿ ದೇಶದ ಖ್ಯಾತ ಚಿತ್ರನಿರ್ದೇಶಕಸತ್ಯಜಿತ್ ರೇ ಅವರ ಜನ್ಮಶತಮಾನೋತ್ಸವ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗಿದೆ. ಕೋಲ್ಕತ್ತಾದ ಅನೇಕ ಕಲಾವಿ ದರು ಆನ್‌ಲೈನ್‌ ಮೂಲಕ ಕಾರ್ಯಕ್ರಮ ನಡೆಸಿಕೊಡುತ್ತಿದ್ದು, ಫೇಸ್‌ಬುಕ್‌ ಮತ್ತು ಇತರೆ ಸಾಮಾಜಿಕ ಮಾಧ್ಯಮಗಳ ಮೂಲಕ ನೇರಪ್ರಸಾರ ವ್ಯವಸ್ಥೆ ಮಾಡ ಲಾಗುವುದು ಎಂದು ಸಂಸ್ಥೆ ಹೇಳಿದೆ.

ADVERTISEMENT

ಅ.22ರಿಂದ 26ರವರೆಗೆ ದುರ್ಗಾ ಪೂಜಾ ಉತ್ಸವ ಜರುಗಲಿದ್ದು, ಎಚ್‌ ಎಸ್‌ಆರ್‌ ಬಡಾವಣೆಯಲ್ಲಿನ ಸಿದ್ಧಾರ್ಥ ಕಲ್ಯಾಣ ಮಂಟಪದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗುತ್ತದೆ.

ಕಾರ್ಯಕ್ರಮ ವೀಕ್ಷಣೆ, ಮಾಹಿತಿಗೆ: https://www.facebook.com/barshabangalore ಫೇಸ್‌ಬುಕ್‌ ಪೇಜ್: https://www.barshabangalore.com ವೆಬ್‌ಸೈಟ್‌ಗೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.