ADVERTISEMENT

ಸಾಕಾರಗೊಳ್ಳದ ಸ್ಮಾರಕ; ಅಭಿಮಾನಿಗಳ ಬೇಸರ

ವಿಷ್ಣುವರ್ಧನ್‌ 68ನೇ ಹುಟ್ಟುಹಬ್ಬ ಆಚರಣೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2018, 20:02 IST
Last Updated 18 ಸೆಪ್ಟೆಂಬರ್ 2018, 20:02 IST
ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯನ್ನು ಅಲಂಕರಿಸಲಾಗಿತ್ತು
ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಯನ್ನು ಅಲಂಕರಿಸಲಾಗಿತ್ತು   

ಬೆಂಗಳೂರು: ಅಭಿಮಾನಿಗಳು ದಂಗೆ ಎದ್ದಾಗ ಮಾತ್ರ ವಿಷ್ಣು ಸ್ಮಾರಕ ನಿರ್ಮಾಣಕ್ಕೆ ಕಾಲ ಕೂಡಿ ಬರಲಿದೆ ಎಂದು ಹಿರಿಯ ಕಲಾವಿದ ರಮೇಶ್ ಭಟ್ ಮಾರ್ಮಿಕವಾಗಿ ನುಡಿದರು.

ವಿಷ್ಣುವರ್ಧನ್ ಅವರ 68ನೇ ಹುಟ್ಟುಹಬ್ಬದ ಪ್ರಯುಕ್ತ ಅಭಿಮಾನ್ ಸ್ಟುಡಿಯೋದಲ್ಲಿರುವ ವಿಷ್ಣು ಸಮಾಧಿಗೆ ಭೇಟಿ ನೀಡಿ ಮಾತನಾಡಿದ ಅವರು, ‘ನಾಡಿನ ಬಹುತೇಕ ರಾಜಕಾರಣಿಗಳು ಭೂ ನುಂಗಣ್ಣರೇ ಆಗಿದ್ದಾರೆ. ವಿಷ್ಣು ಸ್ಮಾರಕ್ಕೆ ಮಾತ್ರ ಸ್ಥಳ ದೊರಕಿಸಿಕೊಡಲು ರಾಜ್ಯ ಸರ್ಕಾರಕ್ಕೆ ಸಾಧ್ಯವಾಗುತ್ತಿಲ್ಲ. ವಿಷ್ಣು ಅವರು ನಿಧನರಾಗಿ 9 ವರ್ಷಗಳೇ ಕಳೆದರೂ ಈವರೆಗೂ ಸ್ಮಾರಕ ನಿರ್ಮಾಣಕ್ಕೆ ಕನಿಷ್ಠ ರೂಪು ರೇಷೆಗಳನ್ನು ರೂಪಿಸದೆ ಇರುವುದು ನಾಚಿಕೆಗೇಡಿನ ಸಂಗತಿ’ ಎಂದು ಹರಿಹಾಯ್ದರು.

‘ನಾಡಿನ ಸಮಸ್ತ ಕನ್ನಡಿಗರು ಒಂದು ರೂಪಾಯಿ ದೇಣಿಗೆ ನೀಡಿದರೂ ವಿಷ್ಣು ಸ್ಮಾರಕವನ್ನು ನಿರ್ಮಿಸಬಹುದು. ಸರ್ಕಾರದ ವತಿಯಿಂದ ವಿಳಂಬವಾದರೆ ಅಭಿಮಾನಿಗಳೇ ಈ ಕಾರ್ಯ ನೆರವೇರಿಸಲಿದ್ದಾರೆ’ ಎಂದು ನಟ ಪ್ರೇಮ್ ಹೇಳಿದರು.

ADVERTISEMENT

ಮಲ್ಲತ್ತ ಹಳ್ಳಿ ವಿಷ್ಣು ಅಭಿಮಾನಿ ಸಂಘದ ಅಧ್ಯಕ್ಷ ಲೋಕೇಶ್ ಗೌಡ ಮಾತನಾಡಿದರು.

ಕಾರ್ಯಕ್ರಮದ ಆವರಣದಲ್ಲಿ ಕಡಗಗಳ ಮಾರಾಟದ ಭರಾಟೆ ಜೋರಾಗಿತ್ತು. ರಕ್ತದಾನ ಶಿಬಿರ, ಉಚಿತ ದಂತ ಪಂಕ್ತಿ ಜೋಡಣೆ ನಡೆದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.