ADVERTISEMENT

ವೋಡಾಫೋನ್‌– ಬೆಂಗಳೂರು ವಿಶ್ವವಿದ್ಯಾಲಯ ನಡುವೆ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2019, 19:37 IST
Last Updated 15 ಫೆಬ್ರುವರಿ 2019, 19:37 IST
ವೋಡಾಫೋನ್‌ ಪ್ರತಿಷ್ಠಾನದ ಜತೆ ಒಪ್ಪಂದಕ್ಕೆ ನಿಲಯ ರಂಜನ್‌ ಮತ್ತು ಪ್ರೊ.ವೇಣುಗೋಪಾಲ್‌ ಸಹಿ ಮಾಡಿದರು.
ವೋಡಾಫೋನ್‌ ಪ್ರತಿಷ್ಠಾನದ ಜತೆ ಒಪ್ಪಂದಕ್ಕೆ ನಿಲಯ ರಂಜನ್‌ ಮತ್ತು ಪ್ರೊ.ವೇಣುಗೋಪಾಲ್‌ ಸಹಿ ಮಾಡಿದರು.   

ಬೆಂಗಳೂರು: ವಿದ್ಯಾರ್ಥಿಗಳಿಗೆ ಹೆಚ್ಚಿನ ಉದ್ಯೋಗಾವಕಾಶ ಕಲ್ಪಿಸುವ ಉದ್ದೇಶದಿಂದ ವೋಡಾಫೋನ್‌ ಇಂಡಿಯನ್‌ ಫೌಂಡೇಷನ್‌ ಜತೆಗೆಬೆಂಗಳೂರು ವಿಶ್ವವಿದ್ಯಾಲಯ ಒಪ್ಪಂದ ಮಾಡಿಕೊಂಡಿದೆ.

‘ತಾಂತ್ರಿಕ ಕೌಶಲ್ಯಗಳನ್ನು ಹೇಳಿಕೊಡುವುದರ ಜತೆಗೆ ವಿದ್ಯಾರ್ಥಿಗಳ ಸಾಮರ್ಥ್ಯವನ್ನೂ ಹೆಚ್ಚಿಸಲಾಗುವುದು. ಇದಕ್ಕಾಗಿ ಬೋಧನೆ ಮತ್ತು ಅನುಭವದ ಕಲಿಕೆಗಾಗಿ ಪಠ್ಯಕ್ರಮವನ್ನು ಅಪ್‌ಡೇಟ್‌ ಮಾಡಲಾಗುವುದು’ ಎಂದು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್‌ ತಿಳಿಸಿದರು.

‘ಒಪ್ಪಂದದ ಭಾಗವಾಗಿ ವೊಡಾಫೋನ್‌ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಪ್ರಯೋಗಾಲಯ ಸ್ಥಾಪಿಸಲಿದೆ. ಎಂಜಿನಿಯರಿಂಗ್‌ ವಿದ್ಯಾರ್ಥಿಗಳು ಮತ್ತು ಇತರ ವಿದ್ಯಾರ್ಥಿಗಳಿಗೂ ಇದರಿಂದ ಪ್ರಯೋಜನ ಆಗಲಿದೆ’ ಎಂದರು.

ADVERTISEMENT

ಒಪ್ಪಂದಕ್ಕೆ ಕುಲಪತಿ ವೇಣುಗೋಪಾಲ್‌ ಮತ್ತು ವೋಡಾಫೋನ್‌ ಐಡಿಯಾದ ಸಿಎಸ್‌ಆರ್‌ ಮುಖ್ಯಸ್ಥ ಡಾ.ನಿಲಯ ರಂಜನ್‌ ಸಹಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.