ADVERTISEMENT

ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಿ: ಎಂ.ಡಿ.ಲಕ್ಷ್ಮೀನಾರಾಯಣ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2020, 17:02 IST
Last Updated 24 ನವೆಂಬರ್ 2020, 17:02 IST

ಬೆಂಗಳೂರು: ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು ಎಂದುಕರ್ನಾಟಕ ರಾಜ್ಯ ನೇಕಾರ ಸಮುದಾಯಗಳ ಒಕ್ಕೂಟವು ರಾಜ್ಯ ಸರ್ಕಾರವನ್ನು ಒತ್ತಾಯಿಸಿದೆ.

‘29 ಒಳಪಂಗಡಗಳಿರುವ ನೇಕಾರ ಸಮುದಾಯವುರಾಜ್ಯದಲ್ಲಿ ಒಟ್ಟು 60 ಲಕ್ಷ ಜನಸಂಖ್ಯೆಯನ್ನು ಹೊಂದಿದೆ. ದಿನವಿಡೀ ನೇಕಾರಿಕೆ ಮಾಡಿ ಹೊಟ್ಟೆ ಹೊರೆಯುವ ನೇಕಾರರು ಇತ್ತೀಚೆಗೆ ಜೀವನ ನಡೆಸುವುದೇ ಕಷ್ಟಕರವಾಗಿದೆ. ಅವರ ಜೀವನ ಮಟ್ಟ ಸುಧಾರಣೆಗೆ ನಿಗಮದ ಅಗತ್ಯವಿದೆ’ ಎಂದು ಒಕ್ಕೂಟದ ರಾಜ್ಯ ಘಟಕದ ಅಧ್ಯಕ್ಷ ಎಂ.ಡಿ.ಲಕ್ಷ್ಮೀನಾರಾಯಣ ತಿಳಿಸಿದ್ದಾರೆ.

‘ಸರ್ಕಾರವು ಇತ್ತೀಚೆಗೆ ಅನೇಕ ಜನಾಂಗಗಳಿಗೆ ಅಭಿವೃದ್ಧಿ ನಿಗಮಗಳನ್ನು ರಚಿಸಿ ಅನುಕೂಲ ಕಲ್ಪಿಸುತ್ತಿದೆ. ನೇಕಾರ ಸಮುದಾಯಕ್ಕೆ ಸೇರಿರುವ ದೇವಾಂಗ, ಪದ್ಮಶಾಲಿ, ಕುರುಹಿನಶೆಟ್ಟಿ, ತೋಗಟವೀರ, ಪಟ್ಟಸಾಲಿ, ಸ್ವಕುಳಸಾಳಿ, ಹಟಗಾರ, ಕೋಷ್ಟಿ, ಶಿವಸಮಸಾಲಿ, ಶೆಟ್ಟಿಗಾರ್‌ ಮೊದಲಾದ ಜಾತಿಗಳಿಗೆ ವಿಶೇಷ ಸವಲತ್ತು ಕಲ್ಪಿಸಲು ನೇಕಾರರ ಅಭಿವೃದ್ಧಿ ನಿಗಮ ಸ್ಥಾಪಿಸಬೇಕು’ ಎಂದು ಅವರು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಒತ್ತಾಯಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.