ADVERTISEMENT

ಧರ್ಮ ಇದ್ದ ಕಡೆ ನ್ಯಾಯವಿರುತ್ತದೆ: ನ್ಯಾಯಮೂರ್ತಿ‌ ರಾಮಚಂದ್ರ

​ಪ್ರಜಾವಾಣಿ ವಾರ್ತೆ
Published 6 ಏಪ್ರಿಲ್ 2025, 16:31 IST
Last Updated 6 ಏಪ್ರಿಲ್ 2025, 16:31 IST
<div class="paragraphs"><p>ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್‌ ಟ್ರಸ್ಟ್ ಆಯೋಜಿಸಿದ್ದ 87ನೇ ರಾಮನವಮಿ ಸಂಗೀತೋತ್ಸವದಲ್ಲಿ&nbsp; ವಿದ್ವಾನ್ ಸಂದೀಪ್ ನಾರಾಯಣ್ ಅವರಿಗೆ ‘ಎಸ್‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.</p></div>

ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್‌ ಟ್ರಸ್ಟ್ ಆಯೋಜಿಸಿದ್ದ 87ನೇ ರಾಮನವಮಿ ಸಂಗೀತೋತ್ಸವದಲ್ಲಿ  ವಿದ್ವಾನ್ ಸಂದೀಪ್ ನಾರಾಯಣ್ ಅವರಿಗೆ ‘ಎಸ್‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

   

ಪ್ರಜಾವಾಣಿ ಚಿತ್ರ

ಬೆಂಗಳೂರು: ‘ಸಮಾಜದಲ್ಲಿ ಸ್ವಾರ್ಥ, ದ್ವೇಷ ಮನೋಭಾವನೆ ಹೆಚ್ಚಾಗುತ್ತಿದೆ. ಇಂಥ ಧಾರ್ಮಿಕ ಆಚರಣೆಗಳ ಮೂಲಕ ಉತ್ತಮ‌ ಗುಣಗಳನ್ನು ಬೆಳೆಸಿಕೊಂಡು ಮಾದರಿ ಜೀವನ ನಡೆಸಬೇಕು’ ಎಂದು ಹೈಕೋರ್ಟ್‌‌ ನ್ಯಾಯಮೂರ್ತಿ‌ ರಾಮಚಂದ್ರ ಡಿ. ಹುದ್ದಾರ ತಿಳಿಸಿದರು.

ಶ್ರೀರಾಮ ಸೇವಾ ಮಂಡಳಿ ರಾಮನವಮಿ ಸೆಲಬ್ರೇಷನ್‌ ಟ್ರಸ್ಟ್ ನಗರದ ಕೋಟೆ ಪ್ರೌಢಶಾಲೆ ಆವರಣದಲ್ಲಿ ಹಮ್ಮಿಕೊಂಡಿರುವ '87ನೇ ಶ್ರೀ ರಾಮನವಮಿ ಸಂಗೀತೋತ್ಸವ ಉದ್ಘಾಟನೆ ಮತ್ತು 'ಎಸ್.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ' ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ADVERTISEMENT

‘ಧರ್ಮ‌ ಇದ್ದ ಕಡೆ ನ್ಯಾಯ ಇರುತ್ತದೆ. ಧರ್ಮದಲ್ಲಿ ಅಧರ್ಮ ಕೂಡಿದರೆ ಸಮಾಜ ಹಾಳಾಗುತ್ತದೆ. ಪ್ರತಿಯೊಬ್ಬ ಮನುಷ್ಯ ಆದರ್ಶವಾಗುವ ಮೂಲಕ ಸಮಾಜದ ಸುಧಾರಣೆಗೆ ತಮ್ಮ ಜೀವನವನ್ನು ಮುಡುಪಾಗಿ ಇಡಬೇಕು’ ಎಂದು ಸಲಹೆ ನೀಡಿದರು.

‘ರಾಮನ ಆದರ್ಶವನ್ನು ನಾವೆಲ್ಲರೂ ಪಾಲಿಸಿದರೆ ಸಮಾಜ ಸುಧಾರಣೆ ಮಾಡಬಹುದು. ಒಳ್ಳೆಯ ಗುಣಗಳನ್ನು ಅಳವಡಿಸಿಕೊಂಡು ಮಾದರಿ‌ ಜೀವನ ನಡೆಸಬೇಕು’ ಎಂದರು.

ಮಾಜಿ ಮುಖ್ಯಮಂತ್ರಿ ಎಸ್. ಎಂ.ಕೃಷ್ಣ ಅವರ ಪತ್ನಿ ಪ್ರೇಮಾ ಕೃಷ್ಣ ಮಾತನಾಡಿ, ‘ಕೃಷ್ಣ ಅವರಿಗೆ ಸಂಗೀತ ಎಂದರೆ ತುಂಬಾ ಇಷ್ಟ. ಪ್ರತಿ ವರ್ಷ ತಪ್ಪದೇ ರಾಮೋತ್ಸವದ ಸಂಗೀತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುತ್ತಿದ್ದರು’ ಎಂದು ನೆನಪಿಸಿಕೊಂಡರು‌.

‘ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ರಾಮಸೇವಾ ಮಂಡಳಿಯ ರಾಮನವಮಿ ಸಂಗೀತೋತ್ಸವ ದೇಶಕ್ಕೆ ಮಾದರಿಯಾಗಿದೆ. ಇಂಥ ಸಂಗೀತೋತ್ಸವದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಆಯೋಜಕರಿಗೆ ಅಭಾರಿಯಾಗಿದ್ದೇನೆ’ ಎಂದರು.

ಕಾರ್ಯಕ್ರಮದಲ್ಲಿ ರಾಮಚಂದ್ರ ಹುದ್ದಾರ ಅವರು ವಿದ್ವಾನ್‌ ಸಂದೀಪ ನಾರಾಯಣ್ ಅವರಿಗೆ ‘ಎಸ್‌‌‌.ಎಂ.ಕೃಷ್ಣ ಸ್ಮಾರಕ ರಾಷ್ಟ್ರೀಯ ಸಂಗೀತ ಪ್ರಶಸ್ತಿ’ ಪ್ರದಾನ ಮಾಡಿದರು. ಪ್ರಶಸ್ತಿಯು ₹ 1 ಲಕ್ಷ ನಗದು, ಸ್ಮರಣಿಕೆ ಮತ್ತು ಫಲ ತಾಂಬೂಲವನ್ನು ಒಳಗೊಂಡಿದೆ. ಎಸ್.ಎಂ‌. ಕೃಷ್ಣ ಕುಟುಂಬದವರು ರಾಮಸೇವಾ ಮಂಡಳಿಯಲ್ಲಿ ಈ ಪ್ರಶಸ್ತಿಯನ್ನು ಸ್ಥಾಪಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.