ADVERTISEMENT

ಸಂಪ್‍ನಲ್ಲಿ ಮಹಿಳೆ ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2020, 17:48 IST
Last Updated 4 ನವೆಂಬರ್ 2020, 17:48 IST

ಬೆಂಗಳೂರು: ಮಾಲೀಕರ ಮನೆಯ ಸಂಪ್‍ನಲ್ಲಿ 57 ವರ್ಷದ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಬಾಗಲಗುಂಟೆ ಠಾಣೆ ವ್ಯಾಪ್ತಿಯಲ್ಲಿ ಬುಧವಾರ ನಡೆದಿದೆ.

ಮೃತರನ್ನು ಮನೆಕೆಲಸ ಮಾಡುತ್ತಿದ್ದ ಸಾಕಮ್ಮ ಎಂದು ಗುರುತಿಸಲಾಗಿದೆ. ದಾಸರಹಳ್ಳಿ ಮೆಟ್ರೊ ನಿಲ್ದಾಣದ ಬಳಿ ಇರುವ ಉದ್ಯಮಿಯೊಬ್ಬರ ಮನೆಯಲ್ಲಿ ಈಕೆ ಕೆಲಸ ಮಾಡುತ್ತಿದ್ದರು.

ದುರ್ವಾಸನೆ ಬರುತ್ತಿರುವುದನ್ನು ಮನೆಯ ಸಿಬ್ಬಂದಿ ಗಮನಿಸಿ, ನೀರಿನ ಸಂಪ್ ತೆರೆದು ನೋಡಿದಾಗ ಕೊಳೆತ ಸ್ಥಿತಿಯಲ್ಲಿಶವ ಪತ್ತೆಯಾಗಿದೆ.

ADVERTISEMENT

'ತಾಯಿ ಕಾಣೆಯಾಗಿದ್ದಾರೆ ಎಂದು ಮೃತರ ಮಗ ಎರಡು ದಿನದ ಹಿಂದೆ ಪೊಲೀಸರಿಗೆ ದೂರು ನೀಡಿದ್ದರು. ಸಾಕಮ್ಮ ಕಾಲು ಜಾರಿ ಸಂಪ್‍ನೊಳಗೆ ಬಿದ್ದಿರಬಹುದು ಅಥವಾ ಆತ್ಮಹತ್ಯೆಗೂ ಯತ್ನಿಸಿರಬಹುದು. ಈ ಕುರಿತು ತನಿಖೆ ನಡೆಯುತ್ತಿದೆ' ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.