ADVERTISEMENT

ಟ್ಯಾಂಕರ್‌ ಹರಿದು ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 19:50 IST
Last Updated 5 ಸೆಪ್ಟೆಂಬರ್ 2019, 19:50 IST

ಬೆಂಗಳೂರು: ವೈಟ್‌ಫೀಲ್ಡ್ ಸಮೀಪದ ಹಗದೂರು ಬಳಿ ಗುರುವಾರ ರಾತ್ರಿ ನೀರಿನ ಟ್ಯಾಂಕರ್‌ನ ಚಕ್ರ ಮೈ ಮೇಲೆ ಹರಿದಿದ್ದರಿಂದ ಪ್ರೇಮಾ (35) ಎಂಬುವರು ಮೃತಪಟ್ಟಿದ್ದಾರೆ.

ಪ್ರೇಮಾ ಅವರು ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು. ಅತಿ ವೇಗವಾಗಿ ಟ್ಯಾಂಕರ್ ಚಲಾಯಿಸಿಕೊಂಡು ಬಂದ ಚಾಲಕ, ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆಸಿದ್ದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT