ಪಾರ್ಶ್ವವಾಯು
(ಸಾಂದರ್ಭಿಕ ಚಿತ್ರ)
ಬೆಂಗಳೂರು: ವಿಶ್ವ ಪಾರ್ಶ್ವವಾಯು ದಿನದ ಪ್ರಯುಕ್ತ ಬೆಂಗಳೂರು ಪಾರ್ಶ್ವವಾಯು ಸೇವಾ ಸಂಘವು ನಗರದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಪಾರ್ಶ್ವವಾಯು ಪೀಡಿತರು ಎದುರಿಸುವ ಸಮಸ್ಯೆ ಹಾಗೂ ಚಿಕಿತ್ಸೆ ಬಗ್ಗೆ ಜಾಗೃತಿ ಮೂಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ರಾಷ್ಟ್ರೀಯ ವೈದ್ಯಕೀಯ ಆಯೋಗದ ಮಾಜಿ ಅಧ್ಯಕ್ಷ ಡಾ.ಬಿ.ಎನ್. ಗಂಗಾಧರ್, ‘ಪಾರ್ಶ್ವವಾಯುವಿಗೆ ತುತ್ತಾದ ರೋಗಿ ಗಳಲ್ಲಿ ಶೇ 63ರಷ್ಟು ಮಂದಿಗೆ ಆಹಾರ ನುಂಗುವ ಸಾಮರ್ಥ್ಯ ಕಡಿಮೆಯಾಗುತ್ತದೆ. ಅವರಿಗೆ ವಿಶೇಷ ಚಿಕಿತ್ಸೆ ಮೂಲಕ ಸಮಸ್ಯೆನಿವಾರಿಸಬಹುದು’ ಎಂದರು. ಸಂಸ್ಥೆಯ ಅಧ್ಯಕ್ಷ ಮೋಹನ್ ರಾಮ್, ಕಾರ್ಯದರ್ಶಿ ಡಾ. ಅಮಿತ್ ಕುಲಕರ್ಣಿ, ಕರ್ನಾಟಕ ಸ್ಟ್ರೋಕ್ ಫೌಂಡೇಷನ್‌ನ ಅಧ್ಯಕ್ಷ ಡಾ.ಜಿ.ಟಿ. ಸುಭಾಷ್, ಉಪಾಧ್ಯಕ್ಷ ಡಾ.ವಿಕ್ರಮ್ ಹುಡೇದ, ಕಾರ್ಯದರ್ಶಿ ಡಾ.ಸೂರ್ಯ ನಾರಾಯಣ ಶರ್ಮ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.