ADVERTISEMENT

ಯಕ್ಷಗಾನ ಪ್ರಸಂಗ: ಕಲಾವಿದರಿಂದ ಅರ್ಜಿ ಆಹ್ವಾನ

​ಪ್ರಜಾವಾಣಿ ವಾರ್ತೆ
Published 23 ಜುಲೈ 2022, 21:08 IST
Last Updated 23 ಜುಲೈ 2022, 21:08 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಮೂಡಲಪಾಯ ಯಕ್ಷಗಾನ ಪ್ರಸಂಗ ಪ್ರದರ್ಶನಕ್ಕೆ ಸಂಬಂಧಿಸಿದಂತೆ ವೃತ್ತಿಪರ ತಂಡಗಳಲ್ಲಿ ಅವಕಾಶ ಪಡೆಯಲು 18ರಿಂದ 35 ವರ್ಷದೊಳಗಿನ ಕಲಾವಿದರಿಂದ ‌ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ತು ಅರ್ಜಿ ಆಹ್ವಾನಿಸಿದೆ.

ಮೂಡಲಪಾಯ ಯಕ್ಷಗಾನ ಕಲೆಯು ದಕ್ಷಿಣ ಕರ್ನಾಟಕದ 10 ಜಿಲ್ಲೆಗಳಲ್ಲಿ ಪ್ರಚಲಿತವಿದೆ. ಮೂಡಲ ಪಾಯ ಯಕ್ಷಗಾನ ಪ್ರಸಂಗಗಳ ಪ್ರದರ್ಶ ನಕ್ಕೆ ಸಂಬಂಧಿಸಿದಂತೆ ಆ.22ರಿಂದ ಹತ್ತು ದಿನಗಳು ಪೂರ್ವಭಾವಿ ಸಿದ್ಧತಾ ಕಾರ್ಯಾಗಾರ ನಡೆಯಲಿದೆ. ಸೆ.1ರಿಂದ ನವೆಂಬರ್ ತಿಂಗಳ ಅಂತ್ಯದವರೆಗೆ ಮೂಡಲಪಾಯದ ಭಾಗವತರು, ಮದ್ದಳೆ ಮತ್ತು ಮುಖವೀಣೆ ಕಲಾವಿದರ ನೇತೃತ್ವದಲ್ಲಿ ತರಬೇತಿ ನಡೆಯಲಿದೆ ಎಂದು ಪರಿ ಷತ್ತಿನ ಪ್ರಧಾನ ಕಾರ್ಯದರ್ಶಿ ಶಶಿಧರ್ ಭಾರಿಘಾಟ್ ಹೇಳಿದ್ದಾರೆ.

ಆಸಕ್ತರು ಅರ್ಜಿ ನಮೂನೆಯನ್ನು ಆ.16ರೊಳಗೆಸಂಚಾಲಕರು, ಮೂಡಲಪಾಯ ಯಕ್ಷರಂಗ ಪಯಣ, ಕರ್ನಾಟಕ ಸಂಘ, ಆರ್.ಪಿ.ರಸ್ತೆ, ಮಂಡ್ಯ-571401 ಈ ವಿಳಾಸಕ್ಕೆ ಅಥವಾ ಇ-ಮೇಲ್ ವಿಳಾಸ karnatakasanghamandya@gmail.comಗೆ ಕಳಿಸುವಂತೆ ಪ್ರಕಟಣೆ ತಿಳಿಸಿದೆ.

ADVERTISEMENT

ಸಂಪರ್ಕ ಸಂಖ್ಯೆ:9448194456 ಅಥವಾ 9448542411

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.