ಬೆಂಗಳೂರು: ‘ಮೀಮ್’ ಮೂರನೇ ಆವೃತ್ತಿಯ ಭಾಗವಾಗಿ ನಡೆಯಲಿರುವ ಕವಿಗೋಷ್ಠಿಗೆ ಕವಿತೆಗಳನ್ನು ಆಹ್ವಾನಿಸಲಾಗಿದೆ.
ಮಹಮ್ಮದ್ ಪೈಗಂಬರ್ ಅವರ ಕುರಿತಾಗಿ ಕವಿತೆ ರಚಿಸಿರಬೇಕು. ಸ್ವರಚಿತ ಹಾಗೂ ಅಪ್ರಕಟಿತವಾಗಿರಬೇಕು. ಆಯ್ದ ಕವಿಗಳಿಗೆ ತಮ್ಮ ಕವಿತೆಗಳನ್ನು ವಾಚಿಸಲು ಮತ್ತು ಖ್ಯಾತ ಲೇಖಕರಿಂದ ನಡೆಯಲಿರುವ ಸಾಹಿತ್ಯ ಕಾರ್ಯಾಗಾರದಲ್ಲಿ ಭಾಗವಹಿಸಲು ಅವಕಾಶವಿರುತ್ತದೆ. ಸೆಪ್ಟೆಂಬರ್ 21ರಂದು ಬೆಂಗಳೂರಿನ ಸಾಹಿತ್ಯ ಪರಿಷತ್ ಸಭಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಸೆಪ್ಟೆಂಬರ್ 1ಕ್ಕಿಂತ ಮೊದಲು ಕವಿತೆಗಳನ್ನು meemkannada@gmail.com ಗೆ ಕಳುಹಿಸಲು ಸಂಘಟಕರು ಕೋರಿದ್ದಾರೆ.
ಕೋಯಿಕ್ಕೋಡ್‌ನ ಮರ್ಕಝ್ ನಾಲೆಜ್‌ಸಿಟಿ ಅಧೀನದ ‘ವಿರಾಸ್ ಕನ್ನಡ ವಿದ್ಯಾರ್ಥಿಗಳ ಸಂಘಟನೆ’ಯು ಕಾರ್ಯಕ್ರಮ ಆಯೋಜಿಸಿದೆ. ಮಾಹಿತಿಗಾಗಿ ಮೊಬೈಲ್: 7902936986 ಸಂಪರ್ಕಿಸಬಹುದು.
ಬೆಂಗಳೂರು: ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಗಸ್ಟ್ 23ರಂದು ರಾತ್ರಿ 10ಕ್ಕೆ ಪೌರಾಣಿಕ ಯಕ್ಷಗಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ.
ಜ್ವಾಲಾ ಪ್ರತಾಪ, ಭೀಷ್ಮ ವಿಜಯ, ರಕ್ತರಾತ್ರಿ ಪ್ರಸಂಗಗಳು ಪ್ರದರ್ಶನಗೊಳ್ಳಲಿದ್ದು, ಹಿಮ್ಮೇಳದಲ್ಲಿ ಕೊಳಗಿ, ಮೂಡುಬೆಳ್ಳೆ, ಸೃಜನ್ ಗಣೇಶ್, ಭರತ್ ಶೆಟ್ಟಿ ಸಿದ್ಧಕಟ್ಟೆ ಮುಂತಾದ ಪ್ರಸಿದ್ಧ ಕಲಾವಿದರು ಭಾಗವಹಿಸಲಿದ್ದಾರೆ. ಮುಮ್ಮೇಳದಲ್ಲಿ ಕೊಂಡದಕುಳಿ, ತೋಟಿಮನೆ, ಪ್ರಸನ್ನ, ಯಲಗುಪ್ಪ, ಹಿಲಿಯಾಣ, ಕಿರಾಡಿ, ರಾಜೇಶ್ ಭಂಡಾರಿ, ಹೆನ್ನಾಬೈಲ್, ದೇವಲ್ಕುಂದ, ಕನ್ನಾರ್ ಭಾಗವಹಿಸಲಿದ್ದಾರೆ. ರಮೇಶ್ ಭಂಡಾರಿ, ಸೀತಾರಾಮ್ ಕಟೀಲು, ಎಳಬೇರು ಅವರ ಹಾಸ್ಯ ಇರಲಿದೆ ಎಂದು ಸಂಘಟಕ ನವೀನ್ ಶೆಟ್ಟಿ ತಿಳಿಸಿದ್ದಾರೆ.
ವಿವರ ಮತ್ತು ಆಸನ ಕಾಯ್ದಿರಿಸಲು ಮೊಬೈಲ್ :9900802670, 9353463402 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.