ADVERTISEMENT

ಯಲಹಂಕ: ಬಿಎಂಎಸ್‌ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ

​ಪ್ರಜಾವಾಣಿ ವಾರ್ತೆ
Published 21 ಮೇ 2019, 19:26 IST
Last Updated 21 ಮೇ 2019, 19:26 IST
ನಾಗನಗೌಡ ಜಕ್ಕನಗೌಡರ್, ದಯಾನಂದ ಪೈ, ಜಿ.ಎನ್.ಮೋಹನ್‌ ಬಾಬು ಅವರು ಕಾಲೇಜಿನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.
ನಾಗನಗೌಡ ಜಕ್ಕನಗೌಡರ್, ದಯಾನಂದ ಪೈ, ಜಿ.ಎನ್.ಮೋಹನ್‌ ಬಾಬು ಅವರು ಕಾಲೇಜಿನ ಸ್ಮರಣ ಸಂಚಿಕೆಯನ್ನು ಬಿಡುಗಡೆ ಮಾಡಿದರು.   

ಯಲಹಂಕ: ‘ಸುಧಾರಿತ ತಂತ್ರಜ್ಞಾನದಿಂದ ಮುಂಬರುವ ದಿನಗಳಲ್ಲಿ 50 ಲಕ್ಷ ಜನರು ಕೆಲಸ ಕಳೆದುಕೊಳ್ಳಲಿದ್ದು,
ಉದ್ಯೋಗಕ್ಕೆ ಹೆಚ್ಚಿನ ಪೈಪೋಟಿ ಸೃಷ್ಟಿಯಾಗಲಿದೆ’ ಎಂದು ಗ್ಲೋಬಲ್‌ ಎಡ್ಜ್‌ ಸಾಫ್ಟ್‌ವೇರ್‌ ಸಂಸ್ಥೆಯ ಉಪಾಧ್ಯಕ್ಷ
ನಾಗನಗೌಡ ಜಕ್ಕನಗೌಡರ್ ಹೇಳಿದರು.

ಬಿಎಂಎಸ್ ತಾಂತ್ರಿಕ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಇಂದಿನ ದಿನಮಾನದಲ್ಲಿಸವಾಲುಗಳನ್ನು ಮೆಟ್ಟಿನಿಲ್ಲುವ ಛಲ ಬೆಳೆಸಿಕೊಳ್ಳಬೇಕು. ಜಾಗತಿಕ ಮಟ್ಟದ ಅಗತ್ಯತೆಗಳಿಗೆ ಅನುಗುಣವಾಗಿ ವಿಶೇಷ ವೃತ್ತಿ ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಬೇಕು’ ಎಂದರು.

ADVERTISEMENT

ಕಾಲೇಜಿನ ಟ್ರಸ್ಟಿ ದಯಾನಂದ ಪೈ,‘ವಿದ್ಯಾರ್ಥಿಗಳು ದೊಡ್ಡಮಟ್ಟದ ಕನಸುಗಳನ್ನು ಕಾಣುವ ಮೂಲಕ ಸಾಧನೆಯ ಕಡೆಗೆ ಗಮನಹರಿಸಬೇಕು’ ಎಂದರು.

ಪ್ರಾಂಶುಪಾಲ ಜಿ.ಎನ್.ಮೋಹನ್‌ ಬಾಬು,‘ವಿದ್ಯಾರ್ಥಿಗಳು ವೃತ್ತಿಜೀವನ ಮತ್ತು ಸಮಾಜದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸುವ ಸಾಮರ್ಥ್ಯವನ್ನು ಬೆಳೆಸಿಕೊಳ್ಳಬೇಕು’ ಎಂದು ತಿಳಿಸಿದರು.

ಕಾಗ್ನಿಜೆಂಟ್ ಕಂಪನಿ ವತಿಯಿಂದ ಉತ್ತಮ ವಿದ್ಯಾರ್ಥಿ ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.