ADVERTISEMENT

ಉದ್ದು, ಹೆಸರು ಖರೀದಿ ಕೇಂದ್ರ ಆರಂಭ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 5:56 IST
Last Updated 5 ಅಕ್ಟೋಬರ್ 2017, 5:56 IST

ಚಿಟಗುಪ್ಪ: ಬೀದರ್ ತಾಲ್ಲೂಕಿನ ಸಿರಕಟನಳ್ಳಿ ಗ್ರಾಮದಲ್ಲಿ ಬುಧವಾರ ಹೆಸರು, ಉದ್ದು ಖರೀದಿ ಕೇಂದ್ರವನ್ನು ಬೀದರ್ ಎಪಿಎಂಸಿ ಅಧ್ಯಕ್ಷ ಭೀಮಾಶಂಕರ ಪಾಟೀಲ ಉದ್ಘಾಟಿಸಿದರು.

‘ರೈತರ ಪರಿಶ್ರಮಕ್ಕೆ ತಕ್ಕ ಫಲ ಸೂಕ್ತ ಬೆಲೆ ಕಲ್ಪಿಸಿಕೊಡಲು ಕೇಂದ್ರ ಸರ್ಕಾರ ಈ ಯೋಜನೆ ಆರಂಭಿಸಿದೆ. ಬೆಳೆಗೆ ತಕ್ಕ ಬೆಲೆ ಬರುವುದರಿಂದ ರೈತರ ಆರ್ಥಿಕ ಪ್ರಗತಿಗೆ ಸಾಧ್ಯ’ ಎಂದರು.

ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ನಿಯಮಿತದ ಅಧ್ಯಕ್ಷ ಮನ್ನಾನ್ ಪಟೇಲ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪಾರಮ್ಮ ಮಾಣಿಕ, ಕೃಷಿ ಅಧಿಕಾರಿ ಬಗದಲ್ ರಾಜಕುಮಾರ್, ಪಿಕೆಪಿಎಸ್ ಸದಸ್ಯರಾದ ಅಪ್ಪರಾವ್ ಮುಸ್ತರಿ,

ADVERTISEMENT

ಕಾಶಿನಾಥ ಹಡಪದ್, ಕಾರ್ಯದರ್ಶಿ ವೀರಯ್ಯ ಸ್ವಾಮಿ, ಗಣ್ಯರಾದ ಶಿವಕುಮಾರ ಸ್ವಾಮಿ, ಮುಜಿಬೋದ್ದೀನ್ ಪಟೇಲ್, ಶೀವರಾಜ್ ಮಾಲಿಪಾಟೀಲ್, ಮಲ್ಲಿಕಾರ್ಜುನ ವಡ್ಡನಕೇರಿ, ಶರಣಪ್ಪ ಕುಂಬಾರ್, ಬಸವರಾಜ್ ಪಾಟೀಲ ಮತ್ತು ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಜನವಾಡ:ಬೀದರ್ ತಾಲ್ಲೂಕಿನ ಔರಾದ್(ಎಸ್) ಗ್ರಾಮದಲ್ಲಿ ಹೆಸರು, ಉದ್ದು ಖರೀದಿ ಕೇಂದ್ರವನ್ನು ಬುಧವಾರ ಉದ್ಘಾಟಿಸಲಾಯಿತು.

ಪಿಕೆಪಿಎಸ್ ಅಧ್ಯಕ್ಷ ರಾಜರೆಡ್ಡಿ ಶಾಬಾದ್ ಉದ್ಘಾಟಿಸಿ ಮಾತನಾಡಿ, ‘ರೈತರು ಕೇಂದ್ರದ ಸದುಪಯೋಗ ಪಡೆದುಕೊಳ್ಳಬೇಕು’ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಶೈಲೇಂದ್ರ ಬೆಲ್ದಾಳೆ ಮಾತನಾಡಿ, ‘ಸಂಸದ ಭಗವಂತ ಖೂಬಾ ಅವರ ಪ್ರಯತ್ನದಿಂದ ಕೇಂದ್ರ ಸರ್ಕಾರದ ವತಿಯಿಂದ ಜಿಲ್ಲೆಯ ವಿವಿಧೆಡೆ ಖರೀದಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ’ ಎಂದು ಹೇಳಿದರು.

ಸಹಾಯಕ ಕೃಷಿ ಅಧಿಕಾರಿ ರಾಜಪ್ಪ ಎಖ್ಖೆಳ್ಳಿ, ಪಿಕೆಪಿಎಸ್ ಉಪಾಧ್ಯಕ್ಷ ಮಲ್ಲಿಕಾರ್ಜನ ಕಾಮಣ್ಣ, ಮುಖ್ಯ ಕಾರ್ಯನಿರ್ವಾಹಕ ವಿಠ್ಠಲರೆಡ್ಡಿ, ಬಿಜೆಪಿ ಬೀದರ್ ದಕ್ಷಿಣ ಘಟಕದ ಅಧ್ಯಕ್ಷ ಜಗನ್ನಾಥ ಪಾಟೀಲ, ಚಟ್ನಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಘಾಳೆಪ್ಪ ಚಟ್ನಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.