ADVERTISEMENT

ಕಾರಂಜಾ ಜಲಾಶಯದಿಂದ ನೀರು ಬಿಡುಗಡೆ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2017, 5:47 IST
Last Updated 14 ಅಕ್ಟೋಬರ್ 2017, 5:47 IST
ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಎರಡು ಗೇಟ್‌ಗಳನ್ನು ಶುಕ್ರವಾರ ತೆರೆದು ನೀರು ಹರಿಯ ಬಿಡಲಾಗಿದೆ
ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಎರಡು ಗೇಟ್‌ಗಳನ್ನು ಶುಕ್ರವಾರ ತೆರೆದು ನೀರು ಹರಿಯ ಬಿಡಲಾಗಿದೆ   

ಬೀದರ್: 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯ ಬಸವಕಲ್ಯಾಣದಲ್ಲಿ ಗರಿಷ್ಠ 12.3 ಸೆಂ.ಮೀ. ಮಳೆಯಾಗಿದೆ. ಒಂದು ಸಾವಿರ ಕ್ಯೂಸೆಕ್‌ ನೀರು ಹರಿದು ಬರುತ್ತಿರುವ ಕಾರಣ ಶುಕ್ರವಾರ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ಎರಡು ಗೇಟ್‌ಗಳನ್ನು ತೆರೆದು ನೀರು ಹರಿಯ ಬಿಡಲಾಗಿದೆ.

ಗುರುವಾರ ಹಾಗೂ ಶುಕ್ರವಾರ ಬೆಳಗಿನ ಜಾವ ಜಿಲ್ಲೆಯಲ್ಲಿ 2.5 ಸೆಂ.ಮೀ. ಸರಾಸರಿ ಮಳೆಯಾಗಿದೆ. ಬಸವಕಲ್ಯಾಣ ತಾಲ್ಲೂಕಿನ ಮಂಠಾಳದಲ್ಲಿ 5.6 ಸೆಂ.ಮೀ., ರಾಜೇಶ್ವರಿ 7.2 ಸೆಂ.ಮೀ., ಕೊಹಿನೂರ 2.0 ಸೆಂ.ಮೀ., ಮುಡಬಿ 5.6 ಸೆಂ.ಮೀ., ಹುಲಸೂರ 7.6 ಸೆಂ.ಮೀ., ಔರಾದ್‌ 4.6 ಸೆಂ.ಮೀ., ಸಂತಪುರ 2.9 ಸೆಂ.ಮೀ., ಠಾಣಾಕುಸನೂರ 3.2 ಸೆಂ.ಮೀ., ದಾಬಕಾ 5.8 ಸೆಂ.ಮೀ., ಭಾಲ್ಕಿ 9.4 ಸೆಂ.ಮೀ., ಬೀದರ್‌2.8 ಸೆಂ.ಮೀ., ಹಾಗೂ ಹುಮನಾಬಾದ್‌ನಲ್ಲಿ 2.5 ಸೆಂ.ಮೀ., ಮೀ. ಮಳೆ ಸುರಿದಿದೆ.

ಜಲಾಶಯ ಭರ್ತಿ: ‘ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಬ್ಯಾಲಹಳ್ಳಿ ಸಮೀಪದ ಕಾರಂಜಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ 7.60 ಟಿಎಂಸಿ ಅಡಿ ಇದ್ದು, ಶುಕ್ರವಾರ 6.83 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಮಳೆಯಿಂದಾಗಿ 1,000 ಕ್ಯೂಸೆಕ್‌ ನೀರು ಜಲಾಶಯಕ್ಕೆ ಹರಿದು ಬಂದಿದೆ’ ಎಂದು ಎಂದು ಕಾರಂಜಾ ಜಲಾಶಯದ ಕಾರ್ಯನಿರ್ವಾಹಕ ಎಂಜಿನಿಯರ್‌ ಬಿ.ಎಸ್‌. ಪಾಟೀಲ ತಿಳಿಸಿದ್ದಾರೆ.

ADVERTISEMENT

‘ಕಾರಂಜಾ ಕಾಲುವೆ ಹಾಗೂ ಮಾಂಜ್ರಾ ನದಿ ತಟದ ನಿವಾಸಿಗಳು ನದಿಯ ಬಳಿಗೆ ಹೋಗದಂತೆ, ಈಜಲು ಅಥವಾ ಬಟ್ಟೆ ತೊಳೆಯಲು ನದಿಯಲ್ಲಿ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿದೆ. ಶುಕ್ರವಾರ ಬೆಳಿಗ್ಗೆ ಎರಡು ಗೇಟ್‌ಗಳನ್ನು ಸ್ವಲ್ಪ ಮೇಲಕ್ಕೆ ಎತ್ತಲಾಗಿದೆ. ಮಳೆ ಮುಂದುವರಿದರೆ ಇನ್ನೂ ಎರಡು ಗೇಟ್‌ಗಳನ್ನು ತೆರೆಯಲಾಗುವುದು’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.