ADVERTISEMENT

ಚಿಟಗುಪ್ಪಾ: ರಾಷ್ಟ್ರೀಯ ಹೆದ್ದಾರಿ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 5:40 IST
Last Updated 16 ಡಿಸೆಂಬರ್ 2013, 5:40 IST

ಚಿಟಗುಪ್ಪಾ: ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 9 ಅನ್ನು ಚತುಷ್ಪಥ ರಸ್ತೆಯಾಗಿ ಉನ್ನತೀಕರಿಸುವ ಕಾರ್ಯವನ್ನು ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರ ಆರಂಭಿಸಿದೆ.

ಗಡಿ ಪ್ರವೇಶದ ಭಂಗೂರ ಗ್ರಾಮದಿಂದ ರಾಜೇಶ್ವರ ವರೆಗೆ ಹೆದ್ದಾರಿ ಅಕ್ಕಪಕ್ಕದಲ್ಲಿ ಬೆಳೆದಿರುವ ಮರಗಳನ್ನು ಕಡಿಯುವ ಕೆಲಸ ಭರದಿಂದ ಸಾಗಿದೆ. ಮಾವು, ಆಲ, ನೀಲಗಿರಿ ಜಾತಿಯ ಮರಗಳು ಧರೆಗುರುಳಿ­ಸುತ್ತಿರುವುದು ಪರಿಸರ ಪ್ರೇಮಿಗಳಿಗೆ ನೋವುಂಟು­ಮಾಡಿದೆ.

ಹೆದ್ದಾರಿ ಮಧ್ಯದಿಂದ 25 ಮೀಟರ್ ವಿಸ್ತೀರ್ಣದ ಅಂತರದಲ್ಲಿ ಬರುವ ಎರಡು ಬದಿಯ ಎಲ್ಲಾ ಮರಗಳನ್ನು ಕಡಿಯುವುದಕ್ಕೆ ಅರಣ್ಯ ಇಲಾಖೆಯಿಂದ ಟೆಂಡರ್ ಪ್ರಕ್ರಿಯೆ ನಡೆದಿದ್ದು, ಭಂಗೂರ ಗ್ರಾಮದಿಂದ ರಾಜೇಶ್ವರವರೆಗೆ ವಿವಿಧ ಬಗೆಯ ಮರ­ಗಳನ್ನು ಕಡಿಯಲಾಗುತ್ತಿದೆ.

25 ಮೀಟರ್ ಅಂತರದಿಂದ ಹೊರಗೆ ಉಳಿದ ಮರಗಳು ಆ ಭೂಮಿ ಒಡೆತನದ ರೈತರಿಗೆ ಉಳಿಯಲಿವೆ’ ಎಂದು ಹುಮನಾಬಾದ್ ವಲಯ ಅರಣ್ಯ ಅಧಿಕಾರಿ ಚಿಕ್ಕಮಠ ಮಾಹಿತಿ ನೀಡಿದ್ದಾರೆ. ಚತುಷ್ಪಥ ರಸ್ತೆಯು ರಸ್ತೆ ನಿರ್ಮಾಣ ಕಾರ್ಯದ ಬಳಿಕ ಅರಣ್ಯ ಇಲಾಖೆಯು ಹೆದ್ದಾರಿಯ ಎರಡು ಬದಿಗಳಲ್ಲಿ  ವಿವಿಧ ತಳಿಯ  ಹೊಸ ಸಸಿಗಳು ನೆಡಲಾಗುತ್ತದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.