ADVERTISEMENT

ಜೈವಿಕ ಇಂಧನ ಸಸಿ ನೆಡಲು ಕರೆ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2012, 6:37 IST
Last Updated 8 ಡಿಸೆಂಬರ್ 2012, 6:37 IST

ಬೀದರ್: ಪರ್ಯಾಯ ಇಂಧನ ವ್ಯವಸ್ಥೆಗಾಗಿ ರೈತರು ಜೈವಿಕ ಇಂಧನ ಸಸಿಗಳನ್ನು ನೆಡಬೇಕು ಎಂದು ಅರಣ್ಯ ಇಲಾಖೆ ಅಧಿಕಾರಿ ವಿರೂಪಾಕ್ಷ ಸ್ವಾಮಿ ಸಲಹೆ ಮಾಡಿದರು.

ಜೈವಿಕ ಇಂಧನ ಯೋಜನೆ ಅನುಷ್ಠಾನ ಕುರಿತು ಬೀದರ್ ತಾಲ್ಲೂಕಿನ ಮರಕಲ್ ಗ್ರಾಮದಲ್ಲಿ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೈವಿಕ ಇಂಧನ ಸಸಿಗಳು ಸಾಕಷ್ಟು ಪ್ರಯೋಜನಕಾರಿ ಆಗಿದ್ದು, ರೈತರು ಇಂಥ ಸಸಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬೆಳೆಯಬೇಕು ಎಂದರು.

ನೈಸರ್ಗಿಕ ಸಮತೋಲನ ಕಾಯ್ದುಕೊಳ್ಳಲು ಜೈವಿಕ ಇಂಧನ ಸಸಿಗಳು ಸಹಕಾರಿ ಆಗಬಲ್ಲವು ಎಂದು ಸಸಿ ವಿತರಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ ಬಾಪು ಗ್ರಾಮೀಣ ಅಭಿವದ್ಧಿ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾಟೀಲ್ ತಿಳಿಸಿದರು.

ಗ್ರಾಮ ಪಂಚಾಯಿತಿ ಅಧ್ಯಕ್ಷ ಜಗನ್ನಾಥ ಕೈಕಾಡೆ, ಆಯುರ್ಯೋಗ ಸಂಸ್ಥೆ ಅಧ್ಯಕ್ಷ ರಾಜೇಂದ್ರಕುಮಾರ್ ಮಣಗೇರಿ, ಪ್ರಮುಖರಾದ ಬಸವರಾಜ ಬುಯ್ಯೊ, ವೈಜಿನಾಥ, ಗಣಪತರಾವ್, ನಾಗೇಂದ್ರ ಪ್ರಸಾದ ಮತ್ತಿತರರು ಇದ್ದರು.

ತಾಲ್ಲೂಕಿನ ನಾಗೂರಾ ಗ್ರಾಮದಲ್ಲಿ ಈಚೆಗೆ ಜೈವಿಕ ಇಂಧನ ಸಸಿ ನೆಡುವ ಕಾರ್ಯಕ್ರಮ ನಡೆಯಿತು. ಬಾಪು ಗ್ರಾಮೀಣ ಅಭಿವದ್ಧಿ ಸಂಸ್ಥೆಯ ಅಧ್ಯಕ್ಷ ಕಾಶಿನಾಥ ಪಾಟೀಲ್, ರೈತರಾದ ಮಲ್ಲಿಕಾರ್ಜುನ ಚಟ್ನಳ್ಳಿಕರ್, ಅನೀಲಕುಮಾರ್ ಕಡಾಳೆ, ಪ್ರಮುಖರಾದ ಮಹೇಶ್ ಮತ್ತಿತರರು ಇದ್ದರು. 500 ಜೈವಿಕ ಇಂಧನ ಸಸಿ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.