ADVERTISEMENT

`ಪ್ರಪಂಚ ಜ್ಞಾನಕ್ಕೆ ಶಿಕ್ಷಣ ಅವಶ್ಯಕ'

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 6:48 IST
Last Updated 2 ಏಪ್ರಿಲ್ 2013, 6:48 IST

ಭಾಲ್ಕಿ: ಶಿಕ್ಷಣ ಜ್ಞಾನದ ಬೀಗದ ಕೈ, ಶಿಕ್ಷಣವಿದ್ದರೆ ಪ್ರಪಂಚದ ಜ್ಞಾನ ಪಡೆಯಬಹುದು ಎಂದು  ಬುದ್ಧ ವಿಹಾರ ಅಣದೂರಿನ ಭಂತೆ ಧಮ್ಮೋನಂದರು ಪ್ರತಿಪಾದಿಸಿದರು.

ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಗ್ರಾಮದ ಸಮತಾ ಸೈನಿಕ ಅಂತರರಾಷ್ಟ್ರೀಯ ಶಾಲೆಯ ದ್ವಿತಿಯ ವಾರ್ಷಿಕೋತ್ಸವ ಸಾನಿಧ್ಯ ವಹಿಸಿ ಮಾತನಾಡಿದ ಅವರು, ಶೋಷಿತ ಜನರು ಶೈಕ್ಷಣಿಕವಾಗಿ ಮುಂದೆ ಬರುವ ವರೆಗೆ ದೇಶದ ಅಭಿವೃದ್ಧಿ ಸಾಧ್ಯವಿಲ್ಲ. ದೇಶದ ಅಭಿವೃದ್ಧಿಯಾಗಬೇಕಾದರೆ, ಎಲ್ಲರೂ ಶೈಕ್ಷಣಿಕವಾಗಿ ಮುಂದೆ ಬರಬೇಕು. ಸಮಾಜದಲ್ಲಿ ಉನ್ನತ ಜ್ಞಾನ ಪಡೆಯಬೇಕಾದರೆ, ಶಿಕ್ಷಣ ಅತ್ಯವಶ್ಯಕವಾಗಿದೆ ಎಂದು ಹೇಳಿದರು.
ಜಿ.ಪಂ. ಮಾಜಿ ಸದಸ್ಯ ಕೃಷ್ಣಪ್ಪಾ ನಾವದಗಿ ಉದ್ಘಾಟಿಸಿ ಮಾತನಾಡಿದರು.

ಗುಲ್ಬರ್ಗಾದ ಡಾ.ಅಂಬೇಡ್ಕರ್ ಪದವಿ ಮಹಾವಿದ್ಯಾಲಯದ ಉಪನ್ಯಾಸಕ ಡಾ.ಮಲ್ಲಿಕಾರ್ಜುನ ಎಸ್. ಖರ್ಗೆ ಮಾತನಾಡಿ, ಭೂಮಿಗೆ ಬಿದ್ದ ಬೀಜ, ಎದೆಗೆ ಬಿದ್ದ ಅಕ್ಷರ ಎಂದಿಗೂ ವ್ಯರ್ಥ ಹೋಗುವುದಿಲ್ಲ ಎಂದು ಹೇಳಿದರು.

ಗುಲ್ಬರ್ಗಾದ ಇನ್ನೋರ್ವ ಉಪನ್ಯಾಸಕ ಡಾ.ಗಾಂಧಿ ಮಾತನಾಡಿ, ಶಿಕ್ಷಣ ಪಡೆದರೆ ಮಾತ್ರ ಜೀವನ ಪೂರ್ತಿಗೊಳಿಸಿಕೊಳ್ಳಲು ಸಾಧ್ಯ ಎಂದು ಹೇಳಿದರು.
ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಲಾಯಿತು. ಜಿ.ಪಂ.ಸದಸ್ಯ ತಂಗುಬಾಯಿ ಪರಾಂಜಪೆ, ಡಾ.ಅಮೃತ ಬಾಲವಾಲೆ, ವಿಠಲದಾಸ ಪ್ಯಾಗೆ, ದಿಲಿಪ ನಿರಗುಡೆ, ಅಮೀರಾಬಿ ಪರತಾಪೂರೆ, ಪಂಚಶೀಲಾ ಗೊಡಬೋಲೆ ಇದ್ದರು. ಆಡಳಿತಾಧಿಕಾರಿ ರಾಜೇಂದ್ರ ಬಿ ಮಾನೆ ಸ್ವಾಗತಿಸಿದರು. ಜಯಶ್ರೀ ಆರ್ ಮಾನೆ ನಿರೂಪಿಸಿದರು. ಪ್ರಕಾಶ ಗೊಡಬೋಲೆ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.