ADVERTISEMENT

ಬಸವ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 8:43 IST
Last Updated 27 ಡಿಸೆಂಬರ್ 2012, 8:43 IST

ಬಸವಕಲ್ಯಾಣ: ಇಲ್ಲಿನ ಸಸ್ತಾಪುರ ಬಂಗ್ಲಾ ಹತ್ತಿರದಲ್ಲಿನ 95 ಅಡಿ ಎತ್ತರದ ಮಹಾದ್ವಾರದಲ್ಲಿನ ಅಭಿವೃದ್ಧಿ ಮಂಡಳಿಯಿಂದ ನಿರ್ಮಿಸಿದ ಬಸವಣ್ಣನವರ ಕಂಚಿನ ಅಶ್ವಾರೂಢ ಪುತ್ಥಳಿಯನ್ನು ಬುಧವಾರ ಸಂಜೆ ಅನಾವರಣಗೊಳಿಸಲಾಯಿತು.

ಹಾರಕೂಡ ಚೆನ್ನವೀರ ಶಿವಾಚಾರ್ಯರು ದೀಪ ಬೆಳಗಿಸಿ ಅನಾವರಣಗೊಳಿಸಿದರು. ನಂತರ ಮಾತನಾಡಿದ ಅವ
ರು ಮಹಾದ್ವಾರದಲ್ಲಿ ಪುತ್ಥಳಿ ನಿರ್ಮಿಸಿರುವುದರಿಂದ ಶೋಭೆ ಹೆಚ್ಚಿದೆ ಎಂದರು.

ಹುಲಸೂರ ಶಿವಾನಂದ ಸ್ವಾಮೀಜಿ ಮಾತನಾಡಿ ಬಸವಕಲ್ಯಾಣ ಅಭಿವೃದ್ಧಿ ಮಂಡಳಿಯಿಂದ ಇಲ್ಲಿ ಒಳ್ಳೆಯ ವಿಕಾಸ ಕಾರ್ಯ ನಡೆದಿದೆ ಎಂದು ಶ್ಲಾಘಿ ಸಿದರು. ಶಾಸಕ ಬಸವರಾಜ ಪಾಟೀಲ ಅಟ್ಟೂರ್ ಮಾತನಾಡಿ ಅಭಿವೃದ್ಧಿ ಮಂಡಳಿಗೆ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಇದ್ದಾಗ ಹೆಚ್ಚಿನ ಅನುದಾನ ಬಿಡುಗಡೆಯಾಗಿದೆ ಎಂದರು. ಈಚೆಗೆ ಮಂಡಳಿಗೆ 5 ಕೋಟಿ ರೂಪಾಯಿ ಬಿಡುಗಡೆ ಮಾಡಲಾಗಿದೆ ಎಂದು ತಿಳಿಸಿದರು. ಶಾಸಕರಾಗಿ ತಾವು ಕೈಗೊಂಡ ಅಭಿವೃದ್ಧಿ ಯೋಜನೆಗಳ ಬಗ್ಗೆ ವಿವರಿಸಿದರು.

ಸಹಾಯಕ ಆಯುಕ್ತ ಪ್ರಕಾಶ ನಿಟ್ಟಾಲೆ ಸ್ವಾಗತಿಸಿದರು. ತಹಸೀಲ್ದಾರ ಶಿವರಾಜ ಹಲಬರ್ಗೆ ನಿರೂಪಿಸಿದರು. ನಗರಸಭೆ ಅಧ್ಯಕ್ಷೆ ಮಂಗಲಾಬಾಯಿ ಉದ್ರೆ, ಎಪಿಎಂಸಿ ಅಧ್ಯಕ್ಷ ಪ್ರಕಾಶ ಮೆಂಡೋಳೆ,

ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಅನಿಲಕುಮಾರ ರಗಟೆ, ಪ್ರಮುಖರಾದ ಕೃಷ್ಣಪ್ಪ ನಾವದಗಿ, ಗದಗೆಪ್ಪ ಹಲಶೆಟ್ಟಿ, ರಾಜಕುಮಾರ ಹೊಳಕುಂದೆ, ತಹಸೀನ ಅಲಿ ಜಮಾದಾರ, ಮಲ್ಲಿಕಾರ್ಜುನ ಚಿರಡೆ, ಎಂ.ಕೆ.ನಂದಿ ಮುಂತಾದವರು ಉಪಸ್ಥಿತರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.