ADVERTISEMENT

ರಸ್ತೆ ವಿಭಜಕ ಮಧ್ಯೆ ಗಾಂಜಾ ಗಿಡ !

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2012, 6:55 IST
Last Updated 18 ಆಗಸ್ಟ್ 2012, 6:55 IST

ಹುಮನಾಬಾದ್: ಪಟ್ಟಣದ ಸೌಂದರ್ಯದ ಏಕೈಕ ಉದ್ದೆಶದಿಂದ ರಸ್ತೆ ವಿಭಜಕ ಮಧ್ಯೆ ಅಲಂಕೃತ ಗಿಡ ನೆಡುವುದನ್ನು ಕೇಳಿದ್ದಲ್ಲದೆ ನೋಡಿಯೂ ಇದ್ದೆವೆ. ಆದರೇ ಅದೇ ಸ್ಥಳದಲ್ಲಿ ಗಾಂಜಾ ಗಿಡಗಳು ಇರುವುದನ್ನು ಎಲ್ಲಿಯೂ ಕೇಳಿಯೂ ಇಲ್ಲ ನೋಡಿಯೂ ಇಲ್ಲ.

ರಸ್ತೆ ವಿಭಜಕ ವಿಷಯದಲ್ಲಿ ಹುಮನಾಬಾದ್ ಕೊಂಚ ಭಿನ್ನವಾಗಿದೆ. ಯಾಕೆಂದರೇ ಬೇರೆ ಯಾವುದೇ ಪಟ್ಟಣದ ರಸ್ತೆ ವಿಭಜಕಗಳಲ್ಲಿ ಸಿಗದ ಗಾಂಜಾ ಗಿಡಗಳು ಸಾಕಷ್ಟು ಗುಂಡಿಗಳ ಮಧ್ಯೆ ನೋಡುವುದಕ್ಕೆ  ಸಿಗುತ್ತವೆ.
ಬಲ್ಲ ಮೂಲಗಳ ಪ್ರಕಾರ ಒಂದು ತಿಂಗಳ ಹಿಂದೆಯಷ್ಟೇ ವಿಭಜಕದ ಅರ್ಧಕ್ಕೂ ಅಧಿಕ ಗುಂಡಿಗಳಲ್ಲಿ ಈ ಸಸಿ ಕಂಡಿದ್ದವು. ಈಚೆಗಷ್ಟೇ ಇವುಗಳ ಸಂಖ್ಯೆ ಕಡಿಮೆ ಆಗಿವೆ ಎನ್ನುವುದು ಕಣ್ಣಾರೆ ಕಂಡವರ ಅಭಿಪ್ರಾಯ.

ವಿಭಜಕದಲ್ಲಿ ನೆಟ್ಟ ಬೇರೆ ಗಿಡಗಳ ಸ್ಥಿತಿ ಮೇಲ್ನೊಟಕ್ಕೆ ಗಂಭೀರ  ಕಾಣುತ್ತದೆ. ಹಾಗೆಂದು ಅದೇ ಸ್ಥಿತಿ ಗಾಂಜಾ ಗಿಡಗಳಿಗೂ ಎದೆ ಎಂದು ಭಾವಿಸಿದರೇ ಖಂಡಿತಾ ತಪ್ಪಾಗುತ್ತೆ ! ಏಕೆಂದರೇ ಬೇರೆ ಎಲ್ಲ ಗಿಡಗಳಿಂದ ಈ ಗಿಡಗಳು ಉತ್ತಮವಾಗಿ ಬೆಳೆಯುತ್ತಿವೆ.

ಆದರೇ ಈ ಸಸಿಗಳು ರಸ್ತೆ ವಿಭಜಕ ಮಧ್ಯೆ ಹೇಗೆ ಬಂದವು. ಬಂದರೂ ಸ್ವಚ್ಛತೆ ಸಂದರ್ಭದಲ್ಲಿ ಯಾರೊಬ್ಬರ ಕಣ್ಣಿಗೂ ಕಂಡಿಲ್ಲವೋ ಹೇಗೆ ? ಎಂಬ ಬಗ್ಗೆ ಅಲ್ಲಲ್ಲಿ ಚರ್ಚೆ ನಡೆಯುತ್ತಿದೆ.ಸಾರ್ವಜನಿಕರ ಹೇಳಿಕೆ ಮೇರೆಗೆ  ಶುಕ್ರವಾರ ವೀಕ್ಷಿಸಲು ಹೋದಾಗ ಡಿಸಿಸಿ ಬ್ಯಾಂಕ್ ಎದುರಿಗೆ ಇರುವ ರಸ್ತೆವಿಭಜಕ ಮತ್ತು ಸ್ವಲ್ಪ ಅಂತರಲ್ಲಿ ಇರುವ ಎರಡು ಗುಂಡಿಗಳಲ್ಲಿ ಗಿಡ ಇರುವುದು ಕಂಡುಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.