ADVERTISEMENT

ರೋಗಿಗಳಿಗೆ ಪ್ರೀತಿಯಿತಿಂದ ಉಪಚರಿಸಬೇಕು

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2012, 6:10 IST
Last Updated 19 ಮಾರ್ಚ್ 2012, 6:10 IST

ಹುಮನಾಬಾದ್: ಆರೋಗ್ಯ ಇಲಾಖೆ ಸಿಬ್ಬಂದಿ ರೋಗಿಗಳಿಗೆ ಪ್ರೀತಿಯಿಂದ ಉಪಚರಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮಹಾಂತಯ್ಯ ತೀರ್ಥ ಸಲಹೆ ಆದೇಶಿಸಿದರು. ತಾಲ್ಲೂಕಿನ ಹಳ್ಳಿಖೇಡ(ಬಿ) ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ ಸಮುದಾಯ ಆರೋಗ್ಯ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿದರು.

ರೋಗಿಗಳನ್ನು ಉಪಚರಿಸುವಾಗ ಅವರ ವಯಸ್ಸಿಗೆ ಅನುಗುಣವಾಗಿ ಸಹೋದರ, ಸಹೋದರಿ, ತಾಯಿ, ತಂದೆ, ಅಜ್ಜಿ, ಅಜ್ಜ, ಚಿಣ್ಣರಾದರೇ ನಿಮ್ಮ ಸ್ವಂತ ಮಕ್ಕಳೆಂಬ ಭಾವನೆಯಿಂದ ಚಿಕಿತ್ಸೆ ನೀಡುವ ಪರಿಪಾಠ ಮೈಗೂಡಿಸಿಕೊಳ್ಳುವ ಮೂಲಕ ರೋಗಿಗಳ ವಿಶಾಸ್ವಕ್ಕೆ ಪಾತ್ರರಾಗಬೇಕು ಎಂದ ತೀರ್ಥಾ
ಸರ್ಕಾರ ವತಿಯಿಂದ ನೀಡಲಾಗುವ ಸೌಲಭ್ಯಗಳನ್ನು ಅರ್ಹ ಸದ್ಬಳಕೆ ಮಾಡಿಕೊಳ್ಳಬೇಕು. ಆರೋಗ್ಯ
ಇಲಾಖೆಯ ಸಿಬ್ಬಂದಿ ಸರ್ಕಾರ ಸೌಲಭ್ಯ ದುರ್ಬಳಕೆ ಆಗದಂತೆ ಮುನ್ನೆಚ್ಚರಿಕೆ ವಹಿಸಬೇಕು ವಹಿಸಬೇಕು ಎಂದು ಸಲಹೆ ನೀಡಿದರು.

ಶಿಶು ಸುರಕ್ಷಾ, ಜನನಿ ಸುರಕ್ಷಾ, ಪ್ರಸೂತಿ, ಮಡಿಲು ಕಿಟ್, ಆರೋಗ್ಯ ಕವಚ, ಆರೋಗ್ಯ ಬಂಧು, ಪಲ್ಸ್ ಪೋಲಿಯೋ, ಕ್ಷಯರೋಗ, ಏಡ್ಸ್ ಮೊದಲಾದ ರೋಗಗಳ ಚಿಕಿತ್ಸೆ ತೃಪ್ತಿಕರವಾಗಿ ನೀಡಿದಲ್ಲಿ ಸರ್ಕಾರ ಯೋಜನೆ ಸಾರ್ಥಕಗೊಳ್ಳುತ್ತದೆ ಎಂದು ವೈದ್ಯಾಧಿಕಾರಿ ಡಾ.ನಾಗನಾಥ ಹುಲಸೂರೆ ತಿಳಿಸಿದರು. ನೋಡಲ್ ಅಧಿಕಾರಿ ಡಾ.ಅನೀಲಕುಮಾರ ಚಿಂತಾಮಣಿ ಮಾತನಾಡಿ, –ರೋಗಿಗಳಿಗೆ ನೀಡಬೇಕಾದ ಸೌಲಭ್ಯ ಕುರಿತು ಸಲಹೆ- ಸೂಚನೆ ನೀಡಿದಲ್ಲಿ ಸರ್ಕಾರ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಗ್ರಾಮ ಪಂಚಾಯಿತಿ ಅಧ್ಯಕ್ಷ ಶರಣಪ್ಪ ಚಿಟ್ಟಾಕರ್ ರೋಗಿಗಳಿಗೆ ಪ್ರೀತಿಯಿಂದ ಚಿಕಿತ್ಸೆ ನೀಡಿದರೇ ಶ್ಲಾಘಿ ಸುವೆ. ತೊಂದರೆ ನೀಡಿದ್ದು ಗಮನಕ್ಕೆ ಬಂದಲ್ಲಿ ಯಾವುದೇ ಕಾರಣಕ್ಕೂ ಸಹಿ–ಸುವುದಿಲ್ಲ ಎಂದರು.
 
ಡಾ.ಶರಣಪ್ಪ ಮುಡಬಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ನಿಸಾರಬೀ ಖಾಜಾಮಿಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಖಾಲೀದ್ ಮಾಸೂಲ್ದಾರ, ಯೂಸೂಫ್ ಸೌದಾಗರ್, ಅಶೋಕ ಸಾಗರ್, ಧನರಾಜ ಹಮೀಲಪೂರಕರ್, ಶೇಖ್ ಫರೀದ್ ಮೋಳಕೇರಿ, ವಿರೇಶರೆಡ್ಡಿ, ಹಸನ್ ಚಳಕಾಪೂರೆ, ನೂರಬೀ ಕುಳಚಾ, ಸಿಬ್ಬಂದಿ ಸುಶೀಲಾ, ಇಸ್ಮಾಯಿಲ್, ಆಶಾ ಇದ್ದರು. ತೀರ್ಥಪ್ಪ ನಿರೂಪಿಸಿದರು. ಸಂತೋಷ ಸ್ವಾಗತಿಸಿದರು. ವೀರಶೆಟ್ಟಿ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.