ಬೀದರ್: ವಚನ ಸಾಹಿತ್ಯ ಜೀವನ ಅನುಭವದ ಸಾಹಿತ್ಯ ಎಂದು ಯುವ ಸಾಹಿತಿ ರೇಣುಕಾ ಎನ್. ಬಿ. ಬಣ್ಣಿಸಿದರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನಗರದ ಬಿ.ವಿ.ಬಿ ಕಾಲೇಜಿನಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಾ ಪರಿಚಯ ಕಾರ್ಯಕ್ರಮದಲ್ಲಿ `ವಚನಗಳ ವೈಶಿಷ್ಟ್ಯತೆ' ಕುರಿತು ಮಾತನಾಡಿದರು.
ವಚನಕಾರರು ಬದುಕಿನ ನೋವು-ನಲಿವುಗಳನ್ನು ತಮ್ಮ ವಚನಗಳಲ್ಲಿ ಬಿಡಿಸಿಟ್ಟಿದ್ದಾರೆ ಎಂದರು.
ಕಿನ್ನರಿ ಬೊಮ್ಮಯ್ಯ ವಚನ ಚಳುವಳಿಯಲ್ಲಿ ಮಹತ್ವದ ಪಾತ್ರ ವಹಿಸಿದ್ದರು ಎಂದು `ಕಿನ್ನರಿ ಬೊಮ್ಮಯ್ಯ' ಅವರ ಕುರಿತು ಉಪನ್ಯಾಸ ನೀಡಿದ ಶಿವಕುಮಾರ್ ಲಕ್ಕಾ ಹೇಳಿದರು.
ಕಲ್ಯಾಣ ಕ್ರಾಂತಿ ವೇಳೆ ಜಿಲ್ಲೆಯ ಹಳ್ಳಿಖೇಡ್(ಕೆ) ಗ್ರಾಮದಲ್ಲಿ ತಂಗಿದ್ದ ಬೊಮ್ಮಯ್ಯ ವಚನಗಳನ್ನು ಸಂರಕ್ಷಿಸಿದ್ದರು ಎಂದು ನುಡಿದರು. ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಕೆಲಸ ಆಗಬೇಕು ಎಂದು ಉದ್ಘಾಟನೆ ನೆರವೇರಿಸಿದ ನಿವೃತ್ತ ಪ್ರೊ. ಎಂ.ಎಸ್. ಅಡಕೆ ಅಭಿಪ್ರಾಯಪಟ್ಟರು. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರೊ. ಸಿದ್ರಾಮಪ್ಪ ಮಾಸಿಮಾಡೆ ಅಧ್ಯಕ್ಷತೆ ವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.