ADVERTISEMENT

`ಶಿಕ್ಷಣದ ಅಭಿವೃದ್ಧಿಗೆ ಸಹಕಾರ'

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2013, 9:56 IST
Last Updated 5 ಆಗಸ್ಟ್ 2013, 9:56 IST

ಹುಮನಾಬಾದ್: `ಇಲ್ಲಿನ ಹಿರೇಮಠ ಶಿಕ್ಷಣ ಟ್ರಸ್ಟ್‌ಗೆ ಸಹಕಾರ ನೀಡಲು ಸದಾಸಿದ್ಧ' ಎಂದು ಶಾಸಕ ರಾಜಶೇಖರ ಪಾಟೀಲ ಹೇಳಿದರು.
ಮಠದ ಪ್ರಾಂಗಣದಲ್ಲಿ ಟ್ರಸ್ಟಿನ ಪ್ರಾಥಮಿಕ ಶಾಲಾ ಕಟ್ಟಡದ ಕಾಮಗಾರಿಗೆ ಭಾನುವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.

ಶ್ರೀಮಠ ಸಾಕಷ್ಟು ಬೆಳವಣಿಗೆ ಕಂಡಿದೆ. ಸ್ವಾಮೀಜಿ ಅವರ ಸೇವಾ ಮನೋಭಾವ ಮೆಚ್ಚುವಂಥದ್ದು. ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾಕೇಂದ್ರ ಆರಂಭಿಸಿ ನಿರ್ವಹಣೆ ಮಾಡುವುದು ಕಷ್ಟದ ಕೆಲಸ. ಇಂಥ ಕೆಲಸಕ್ಕೆ ಮುಂದಾಲೋಚನೆ ಇರಬೇಕು ಎಂದು ಹೇಳಿದರು.
ಮಠದ ಪೀಠಾಧಿಪತಿ ಗಂಗಾಧರ ಸ್ವಾಮೀಜಿ ಮಾತನಾಡಿ, ಬಡ ಮಕ್ಕಳಿಗೆ ಉತ್ತಮ ಸಂಸ್ಕಾರದ ಜತೆಗೆ ಗುಣಮಟ್ಟದ ಶಿಕ್ಷಣ ಉದ್ದೇಶ ಟ್ರಸ್ಟ್ ಹೊಂದಿದೆ. ಮಂದಿನ ದಿನಗಳಲ್ಲಿ ವೇದಪಾಠ ಶಾಲೆ ಆರಂಭಿಸಲಾಗುತ್ತದೆ. ಭಕ್ತರ ಸಹಕಾರ ಇಲ್ಲದೆ ಮಠದ ಅಭಿವೃದ್ಧಿ ಅಸಾಧ್ಯ ಎಂದರು.

ಗುರುಲಿಂಗ ಶಿವಾಚಾರ್ಯ ಸ್ವಾಮೀಜಿ, ಹುಡಗಿ ವೀರೂಪಾಕ್ಷ ಶಿವಾಚಾರ್ಯ ಸ್ವಾಮೀಜಿ, ಸದಾಲಾಪುರ ಸಿದ್ಧಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯ ವೀರಣ್ಣ ಪಾಟೀಲ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಮಾಣಿಕಪ್ಪ ಗಾದಾ, ಮೌನೇಶ್ವರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಶರಣಪ್ಪಗೌಡ ಎನ್. ಪಾಟೀಲ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ದತ್ತಕುಮಾರ ಚಿದ್ರಿ, ಪುರಸಭೆ ಸದಸ್ಯ ಮಲ್ಲಿಕಾರ್ಜುನ ಸೀಗಿ, ವಿನಾಯಕರಾವ ಯಾದವ್, ಅಪ್ಸರ ಮೊಹಿಯುದ್ದೀನ್, ಕಾಂಗ್ರೆಸ್ ಮುಖಂಡ ಅಧ್ಯಕ್ಷ ರಾಜಪ್ಪ ಇಟಗಿ, ಯುವ ಘಟಕದ ಅಧ್ಯಕ್ಷ ಧರ್ಮರೆಡ್ಡಿ, ಗುರುಪಾದಪ್ಪ ಹಾರಕೂಡ, ಶರಣಪ್ಪ ರೇಚೆಟ್ಟಿ ಇದ್ದರು.

ಮಲ್ಲಿಕಾರ್ಜುನ ಮಾಶೆಟ್ಟಿ ಸ್ವಾಗತಿಸಿದರು. ಶೈಲೇಂದ್ರ ಕಾವಡಿ ನಿರೂಪಿಸಿದರು. ಬಾಬುರಾವ ಪೋಚಂಪಳ್ಳಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.